ಮುಂಬೈ:ಸುಶಾಂತ್​ ಸಿಂಗ್​ ರಜಪೂತ್​ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಇಬ್ಬರಿಗೆ ಕರೆ ಮಾಡಿದ್ದ. ಒಬ್ಬಾಕೆ ಗೆಳತಿ ರಿಯಾ ಚಕ್ರವರ್ತಿಯಾದರೆ, ಇನ್ನೊಬ್ಬ ಮಹೇಶ್​ ಶೆಟ್ಟಿ. ದುರದೃಷ್ಟವಶಾತ್​ ಇಬ್ಬರೂ ಆ ಕ್ಷಣ ಕರೆ ಸ್ವೀಕರಿಸಿರಲಿಲ್ಲ.
ಈ ಮಹೇಶ್​ ಶೆಟ್ಟಿ ಸುಶಾಂತ್ ಸಿಂಗ್ ಆಪ್ತ ಗೆಳೆಯರಲ್ಲಿ ಒಬ್ಬನಾಗಿದ್ದ. ​ ಸುಶಾಂತ್​ ಸಾವು ಬೆಳಕಿಗೆ ಬಂದ ದಿನ ಬೆಳಗ್ಗೆ ಆತನ ಕೋಣೆ ಪ್ರವೇಶಿಸಿದವರಲ್ಲಿ ಮೊದಲಿಗನಾಗಿದ್ದ. ಇದೀಗ ಈತ ಬಿಹಾರ ಪೊಲಿಸರಿಗೆ ನೀಡಿರುವ ಹೇಳಿಕೆ ಭಾರಿ ಸಂಚಲನವನ್ನೇ ಉಂಟು ಮಾಡಿದೆ.
ಇದನ್ನೂ ಓದಿ;ಕಳೆದೊಂದು ವರ್ಷದಿಂದ ಸುಶಾಂತ್​ ಸಿಂಗ್​ ರಜಪೂತ್​ಗೆ ಯಾವುದೋ ಚಿಂತೆ ಕಾಡುತ್ತಿತ್ತು…
ತನ್ನ ಪಾಲಕರೊಂದಿಗೆ ಮಾತನಾಡಲು ಸುಶಾಂತ್​ಗೆ ರಿಯಾ ಅವಕಾಶವನ್ನೇ ನೀಡುತ್ತಿರಲಿಲ್ಲ. ಆತನ ಫೋನನ್ನು ಪದೇಪದೆ ಚೆಕ್​ ಮಾಡುತ್ತಲೇ ಇರುತ್ತಿದ್ದಳು. ರಿಯಾ ಜತೆಗೆ ಸಂಬಂಧ ಬೆಳೆಸುತ್ತಿದ್ದಂತೆ ಸುಶಾಂತ್​ ತನ್ನ ಗೆಳೆಯರನ್ನು ಭೇಟಿಯಾಗುವುದನ್ನೇ ನಿಲ್ಲಿಸಿದ್ದ. ರಿಯಾ ತನ್ನ ತಾಯಿಯೊಂದಿಗೆ ಸೇರಿಕೊಂಡು ಆತನ ಇಡೀ ತಂಡವನ್ನೇ ಬದಲಾಯಿಸಲು ಮುಂದಾಗಿದ್ದರು. ಇದು ಸುಶಾಂತ್​ಗೆ ಇಷ್ಟವಿರಲಿಲ್ಲ ಎಂದು ಹೇಳಿದ್ದಾನೆ.
ಸುಶಾಂತ್​ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಳಿಕ ಮೊದಲಿಗೆ ಆತನ ಕೋಣೆ ಪ್ರವೇಶಿದ ಮಹೇಶ್​ ಶೆಟ್ಟಿಯನ್ನು ಬಿಹಾರ ಪೊಲೀಸರು ಪ್ರಮುಖ ಸಾಕ್ಷಿಯಾಗಿ ಪರಿಗಣಿಸುವ ಸಾಧ್ಯತೆ ಇದೆ.
ಇದನ್ನೂ ಓದಿ;ಸುಶಾಂತ್​ ಸಿಂಗ್​ ಆತ್ಮಹತ್ಯೆ ತನಿಖೆಗೆ ರೋಚಕ ತಿರುವು; ನಟನ ಖಾತೆಯಲ್ಲಿದ್ದ ಹಣ ಖರ್ಚು ಮಾಡುತ್ತಿದ್ದ ರಿಯಾ
ಈ ನಡುವೆ, ಸುಶಾಂತ್​ ಇನ್ನೊಬ್ಬ ಗೆಳೆಯ ಸಿದ್ದಾರ್ಥ ಪಿಠಾಣಿ ಮತ್ತೊಂದು ಹೇಳಿಕೆ ನೀಡಿದ್ದಾನೆ. ರಿಯಾ ವಿರುದ್ಧ ಹೇಳಿಕೆ ನೀಡುವಂತೆ ನನ್ನನ್ನು ಒತ್ತಾಯಿಸಲಾಗುತ್ತಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ.
ಸುಶಾಂತ್​ ಸಿಂಗ್​ ಸಾವಿನಲ್ಲಿ ರಿಯಾ ಚಕ್ರವರ್ತಿಯೇ ಸುಪಾರಿ ಕಿಲ್ಲರ್​; ಸಿಡಿದೆದ್ದ ಬಿಹಾರ ಸಚಿವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
