ಪಟನಾ:ಬಿಹಾರದಲ್ಲಿ ಇತ್ತೀಚೆಗಷ್ಟೇ ರಚನೆಯಾದ ಎನ್​ಡಿಎ ಸರ್ಕಾರವನ್ನು ಪತನಗೊಳಿಸುವುದಕ್ಕೆ ಲಾಲು ಯಾದವ್ ಪ್ರಯತ್ನಿಸುತ್ತಿದ್ದಾರೆ. ಅವರು ಸೆರೆವಾಸದಲ್ಲಿದ್ರೂ ಅಲ್ಲಿಂದಲೇ ರಾಜಕೀಯ ಶುರುಮಾಡಿದ್ದು, ಮಗನನ್ನು ಮುಖ್ಯಮಂತ್ರಿಯನ್ನಾಗಿಸುವ ಚಿಂತನೆಯಲ್ಲಿದ್ದಾರೆ ಎಂಬ ಮಾತುಗಳು ಕೇಳಬಂದಿದೆ. ಇದಕ್ಕಾಗಿ ಅವರು ನೇರವಾಗಿ ಕಣಕ್ಕೆ ಇಳಿದಿದ್ದು, ಎನ್​ಡಿಎ ಶಾಸಕರ ಜತೆಗೆ ವ್ಯವಹಾರ ಕುದುರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಎಂದು ಸುಶೀಲ್ ಕುಮಾರ್ ಮೋದಿ ನಿನ್ನೆ ಆರೋಪಿಸಿದ್ದರು.
ಈ ಸಂಬಂಧ ಟ್ವೀಟ್ ಕೂಡ ಮಾಡಿದ್ದ ಸುಶೀಲ್ ಮೋದಿ, ತಾವು ಲಾಲು ಜತೆಗೆ ಮಾತನಾಡಿದ ಫೋನ್ ನಂಬರ್​ ಅನ್ನು ಕೂಡ ಬಹಿರಂಗಪಡಿಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ಇಂದು ಸುಶೀಲ್ ಮೋದಿ ಅವರು, ಲಾಲೂ ಯಾದವ್​ ತಮ್ಮ ಅಸಲೀಯತ್ತನ್ನು ತೋರಿಸಿದ್ರು ಎಂಬ ಶೀರ್ಷಿಕೆಯೊಂದಿಗೆ ಆಡಿಯೋ ಒಂದನ್ನು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಆಸೀಸ್ ಪ್ರವಾಸದ ಮೊದಲ 2 ಟೆಸ್ಟ್‌ನಿಂದ ರೋಹಿತ್, ಇಶಾಂತ್ ಶರ್ಮ ಔಟ್
लालू यादव ने दिखाई अपनी असलियत
लालू प्रसाद यादव द्वारा NDA के विधायक को बिहार विधान सभा अध्यक्ष के लिए होने वाले चुनाव में महागठबंधन के पक्ष में मतदान करने हेतु प्रलोभन देते हुए।pic.twitter.com/LS9968q7pl
— Sushil Kumar Modi (@SushilModi)November 25, 2020

ಇದು ರಾಜಕೀಯವಾಗಿ ಭಾರಿ ಸಂಚಲನ ಸೃಷ್ಟಿಸಿದ್ದು, ಅದರಲ್ಲಿ ಲಾಲು ಯಾದವ್ ತಮ್ಮ ಪಿಎ ಮೂಲಕ ಎನ್​ಡಿಎ ಶಾಸಕರನ್ನು ಸಂಪರ್ಕಿಸಿ ವಿಧಾನ ಸಭಾ ಸ್ಪೀಕರ್ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಮಹಾಗಟಬಂಧನ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಕೇಳುವ ಮಾತುಗಳು ದಾಖಲಾಗಿವೆ. ಇದರ ಸಾರವನ್ನೆ ಸುಶೀಲ್ ಮೋದಿ ಟ್ವೀಟ್ ನಲ್ಲೂ ಉಲ್ಲೇಖಿಸಿದ್ದಾರೆ. ಆದಾಗ್ಯೂ, ಈ ಆಡಿಯೋ ಬಗ್ಗೆ ಅಥವಾ ಸುಶೀಲ್ ಮೋದಿ ಅವರ ಟ್ವೀಟ್ ಬಗ್ಗೆ ಲಾಲು ಯಾದವ್ ಅಥವಾ ಆರ್​ಜೆಡಿ ಇನ್ನೂ ಪ್ರತಿಕ್ರಿಯಿಸಿಲ್ಲ. (ಏಜೆನ್ಸೀಸ್)
‘ಸೆರೆಮನೆ’ಯಿಂದಲೇ ರಾಜಕೀಯ- ಎನ್​ಡಿಎ ಶಾಸಕರಿಗೆ ಲಾಲು ‘ಬಲೆ’ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 14 =
Remember me
