ಹೈದರಾಬಾದ್​:ಕರೊನಾ ಸೋಂಕಿತರ ಸಂಖ್ಯೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿರುವ ಬೆನ್ನಲ್ಲೇ ಆಸ್ಪತ್ರೆಗಳ ಎಡವಟ್ಟು ಕೂಡ ಅದೇ ವೇಗದಲ್ಲಿ ಹೆಚ್ಚುತ್ತಲೇ ಇದೆ.
ಅದಕ್ಕೆ ಇನ್ನೊಂದು ಸೇರ್ಪಡೆ ಹೈದರಾಬಾದ್​ನ ಗಾಂಧಿ ಆಸ್ಪತ್ರೆ. 39 ವರ್ಷ ಕರೊನಾ ಸೋಂಕಿತ ತನ್ನ ಆಸ್ಪತ್ರೆಗೆ ದಾಖಲಾಗದೇ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ವಾದಿಸುತ್ತಿದ್ದರೆ, ಕೊನೆಯ ಆ ವ್ಯಕ್ತಿಯ ಶವ ಅವರದ್ದೇ ಆಸ್ಪತ್ರೆಯ ಶವಾಗಾರದಲ್ಲಿ ಪತ್ತೆಯಾಗಿರುವ ಘಟನೆ ಇದು!ಹೈದರಾಬಾದ್‌ನ ಮಂಗಳಹತ್ ಪ್ರದೇಶದ ನಿವಾಸಿ ನರೇಂದ್ರ ಸಿಂಗ್ ಅವರಿಗೆ ಕರೊನಾ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇ 30ರಂದು ತಾಯಿಯೊಂದಿಗೆ ಕಿಂಗ್ ಕೋಟಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಮಾರನೆಯ ದಿನ ಅವರನ್ನು ಗಾಂಧಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಈ ಬಗ್ಗೆ ಮನೆಯವರಿಗೆ ವಿಷಯ ತಿಳಿದಿರಲಿಲ್ಲ.
ಇದನ್ನೂ ಓದಿ:ಸಚಿವೆಗೆ ‘ಕೋವಿಡ್​ ರಾಣಿ’ ಎಂದರೆ ತಪ್ಪೇನಿದೆ- ಕಾಂಗ್ರೆಸ್​ ಮುಖಂಡನ ಪ್ರಶ್ನೆ!
ಮೇ 31ರಂದು ಮಗನ ಸಂಪರ್ಕ ಮಾಡಲು ಬಯಸಿದಾಗ, ಅವರನ್ನು ಗಾಂಧಿ ಆಸ್ಪತ್ರೆಗೆ ಸ್ಥಳಾಂತರ ಮಾಡಿರುವ ವಿಷಯ ತಿಳಿಯಿತು. ಆದರೆ ಅಲ್ಲಿ ಕೇಳಿದಾಗ ಅಂಥ ವ್ಯಕ್ತಿ ತಮ್ಮ ಆಸ್ಪತ್ರೆಯಲ್ಲಿ ದಾಖಲು ಆಗಲೇ ಇಲ್ಲ ಎಂದು ಹೇಳಲಾಯಿತು. ಆದ್ದರಿಂದ ಅವರ ತಾಯಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು.
ಪೊಲೀಸರ ತನಿಖೆಯಿಂದ ಗಾಂಧಿ ಆಸ್ಪತ್ರೆಗೆ ನರೇಂದ್ರ ಸಿಂಗ್​ರನ್ನು ದಾಖಲು ಮಾಡಿರುವ ವಿಷಯ ತಿಳಿದರೂ, ಅಲ್ಲಿ ರೋಗಿಗಳ ವಾರ್ಡ್​ನಲ್ಲಿ ಅವರು ಪತ್ತೆಯಾಗಲೇ ಇಲ್ಲ, ಆಗಲೂ ಆಸ್ಪತ್ರೆಯವರು ತಾವು ಅಂಥ ಹೆಸರಿನ ವ್ಯಕ್ತಿಯನ್ನು ಸೇರಿಸಿಕೊಳ್ಳಲೇ ಇಲ್ಲ ಎಂದೇ ವಾದಿಸಿದರು. ಅಲ್ಲಿದ್ದ ಸಿಸಿಟಿವಿ ಕೂಡ ಕೆಲಸ ಮಾಡುತ್ತಿರಲಿಲ್ಲ!
ಇದಾಗಿ 20 ದಿನಗಳ ಮೇಲಾಗಿದೆ. ಕುಟುಂಬದವರು ನರೇಂದ್ರ ಸಿಂಗ್​ಗಾಗಿ ಎಲ್ಲೆಡೆ ಹುಡುಕಾಟ ನಡೆಸಿದರೂ ಅವರು ಸಿಗಲೇ ಇಲ್ಲ. ನಂತರ ಬೇರೊಂದು ಶವವನ್ನು ಅವರ ಕುಟುಂಬಸ್ಥರಿಗೆ ನೀಡುವ ಸಮಯದಲ್ಲಿ, ಇದೀಗ ನರೇಂದ್ರ ಸಿಂಗ್​ ಅವರ ಶವವು ಶವಾಗಾರದಲ್ಲಿ ಇರುವುದು ಪತ್ತೆಯಾಗಿದೆ.
ಅವರು ಹೇಗೆ ಮೃತಪಟ್ಟರು? ಇದಕ್ಕೆ ಕಾರಣವೇನು ಏನೊಂದು ತಿಳಿಯಲಾಗಿದೆ. ಅವರ ಸಾವಿನ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಮಜ್ಲಿಸ್ ಬಚಾವೊ ತೆಹ್ರೀಕ್ (ಎಂಬಿಟಿ) ನಾಯಕ ಅಮ್ಜೆದುಲ್ಲಾ ಖಾನ್ ಖಾಲಿದ್ ಆಗ್ರಹಿಸಿದ್ದಾರೆ.
ಗಾಂಧಿ ಆಸ್ಪತ್ರೆಯಲ್ಲಿ ಈ ಹಿಂದೆ ಕೂಡ ಇಂಥ ಅನೇಕ ಎಡವಟ್ಟುಗಳು ನಡೆದಿವೆ. ಮೃತಪಟ್ಟ ಸೋಂಕಿತರ ದೇಹವನ್ನು ಇನ್ನಾರದ್ದೋ ಮನೆಗೆ ಕಳುಹಿಸುವುದು, ಮನೆಯವರಿಗೆ ತಿಳಿಸದೇ ತಾವೇ ಅಂತ್ಯಸಂಸ್ಕಾರ ನೆರವೇರಿಸುವುದು ಇತ್ಯಾದಿ ಘಟನೆಗಳು ನಡೆಯುತ್ತಲೇ ಇವೆ.(ಏಜೆನ್ಸೀಸ್​)
ವಧು-ವರರಿಗೆ ಸಿಹಿ ಸುದ್ದಿ: ‘ಸಪ್ತಪದಿ’ಗೆ ಮುಹೂರ್ತ​ ಫಿಕ್ಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 2 =
Remember me
