ಚಂಡೀಗಢ: ಕರೊನಾ ಸೋಂಕು ಅಂದರೇನೆ ಸಾವಿನ ಜತೆಗೆ ಸರಸ. ಅಂಥದ್ದರಲ್ಲಿ ಸರಿಯಾಗಿ ಚಿಕಿತ್ಸೆ ಪಡೆಯದೇ ಎಸ್ಕೇಪ್ ಆಗೋದಕ್ಕೆ ಸಾಧ್ಯವೇ? ದುರಂತ, ವಿಧಿ ಹೀಗೆ ಏನು ಬೇಕಾದರೂ ಹೇಳಬಹುದು ಅಂಥದ್ದೊಂದು ಘಟನೆ ಹರಿಯಾಣದಲ್ಲಿ ಸಂಭವಿಸಿದೆ.
ಹರಿಯಾಣದ ಕರ್ನಲ್​ ಎಂಬ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕರೊನಾ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 55 ವರ್ಷದ ವ್ಯಕ್ತಿಯೊಬ್ಬ ಅಲ್ಲಿಂದ ಎಸ್ಕೇಪ್ ಆಗೋದಕ್ಕೆ ಪ್ರಯತ್ನಸಿದ್ದ. ಹೇಗೆ ಅಂತೀರಾ? ಆತ ಇದ್ದುದು 6ನೇ ಮಹಡಿಯಲ್ಲಿ. ಅಲ್ಲಿಂದ ಎಸ್ಕೇಪ್ ಆಗೋದಕ್ಕೆ ಅಲ್ಲಿದ್ದ ಬೆಡ್​ಶೀಟ್​ಗಳನ್ನು ಬಳಸಿದ್ದ. ಅವುಗಳನ್ನು ದಾರದಂತೆ ಬಳಸಿಕೊಂಡು ಕೆಳಕ್ಕಿಳಿದು ಓಡೋದಕ್ಕೆ ಪ್ರಯತ್ನಿಸಿದ್ದ.
ಆದರೆ ಈ ಅಪಾಯಕಾರಿ ಸಾಹಸ ಕೈಗೂಡಲಿಲ್ಲ. ಮೇಲಿಂದ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡ. ಅಷ್ಟೇ ಅಲ್ಲ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿ ನಿಶಾಂತ್ ಕುಮಾರ್ ಯಾದವ್​, ರೋಗಿಯ ಹೆಸರು ಶಿವಶರಣ್. ಆತ ಪಾಣಿಪತ್​ನ ನಿವಾಸಿ. ಏಪ್ರಿಲ್ ಒಂದರಂದು ಆಸ್ಪತ್ರೆಯಿಂದ ಪರಾರಿಯಾಗಲು ಪ್ರಯತ್ನಿಸಿ ಬಿದ್ದು ಗಂಭೀರ ಗಾಯಗೊಂಡು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದ. ಶಂಕಿತ ಸೋಂಕು ಪೀಡಿತನಾದ್ದರಿಂದ ಹೆಚ್ಚಿನ ನಿಗಾ ವಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲನೀಡಲಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
ಯೇಹೇ.. ಕರೊನಾ ಏನ್ ಮಹಾ.. ವೋಡ್ಕಾ ಕುಡೀರಿ, ಟ್ರ್ಯಾಕ್ಟರ್​ಗಳಲ್ಲಿ ದುಡೀರಿ, ಆಮೇಲೆ ಆವಿಸ್ನಾನ ಮಾಡಿ- ಕರೊನಾ ಓಡಿಸೋಕೆ ಇಷ್ಟು ಸಾಕು ಎಂದ ಬೆಲಾರಸ್ ಪ್ರೆಸಿಡೆಂಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − seven =
Remember me
