ದಾವಣಗೆರೆ:ಒಂದೆರಡು ದಿನಗಳಿಂದ ಯಾವ ರೀತಿ ಸಿಸಿಬಿ ಪೊಲೀಸರು ಉಗ್ರರನ್ನು ಸರಿಯಾದ ಸಮಯಕ್ಕೆ ಸೆರೆ ಹಿಡಿದದ್ದು, ಬಂಧಿತ ಉಗ್ರರಿಗೆ ಯಾವ ರೀತಿಯಲ್ಲಿ ಕಾರಾಗೃಹದಲ್ಲಿದ್ದವರ ಜತೆ ಸಂಪರ್ಕವಿತ್ತು ಮುಂತಾದ ಆಘಾತಕಾರಿ ಮಾಹಿತಿಗಳು ಹೊರಬರುತ್ತಲೇ ಇವೆ. ಇದೀಗ ದಾವಣಗೆರೆಯಲ್ಲೂ ಸಿಸಿಬಿ ಪೊಲೀಸರು ಮತ್ತೋರ್ವನನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ಉಗ್ರರು ಶೇಖರಿಸಿಟ್ಟಿದ್ದ ಗ್ರೆನೇಡ್ ಪತ್ತೆ ಮಾಡಿದ ಸಿಸಿಬಿ, ಒಂದೇ ಬಾರಿಗೆ ನಾಲ್ಕು ಹ್ಯಾಂಡ್ ಗ್ರೆನೇಡ್ ಪತ್ತೆ; ಪೊಲೀಸರಲ್ಲಿ ಹೆಚ್ಚಿದ ಆತಂಕ!
ಫಯಾಜ್ ವುಲ್ಲಾ(30) ಎಂಬ ವ್ಯಕ್ತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದ್ದು ಈ ಸಂಶಯಕ್ಕೆ ಕಾರಣವಾಗಿದೆ. ಇಂದು ಬೆಳಿಗ್ಗೆ ದಾವಣಗೆರೆ ಆಗಮಿಸಿದ ಸಿಸಿಬಿ ಪೊಲೀಸರ ತಂಡ ದಾವಣಗೆರೆಯ ಅಜಾದ್ ನಗರದ ನಿವಾಸಿ ಫಯಾಜ್ ವುಲ್ಲಾನನ್ನು ವಶಕ್ಕೆ ಪಡೆದಿದ್ದಾರೆ. ಈತ ಮೂಲತಃ ಬೆಂಗಳೂರಿನವನಾಗಿದ್ದು ಈ ಹಿಂದೆ ಬೆಂಗಳೂರಿನಲ್ಲಿ ಡ್ರಗ್ಸ್, ಆಯುಧ ಮಾರಾಟ ವಿಚಾರವಾಗಿ ಇತನ ಮೇಲೆ ಐದು ಕೇಸ್ ದಾಖಲಾಗಿದ್ದವು.
ಇದನ್ನೂ ಓದಿ:ಶಂಕಿತ ಉಗ್ರರ ಬಂಧನ ಪ್ರಕರಣ: ಕುರಿ ವ್ಯಾಪಾರಿಯಾಗಿದ್ದ ಜುನೈದ್​ ಮೋಸ್ಟ್​ ವಾಂಟೆಡ್ ಕ್ರಿಮಿನಲ್​​ ಆಗಿದ್ಹೇಗೆ?
ಈಗ ಶಂಕಿತ ಉಗ್ರರ ಬಂಧನವಾದ ಹಿನ್ನಲೆ ಫಯಾಜ್ ವುಲ್ಲಾನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು ನಾನಾ ಸಂಶಯಕ್ಕೆ ಕಾರಣವಾಗಿದೆ. ಫಯಾಜ್ ವುಲ್ಲಾ ವಿರುದ್ಧ ಅಕ್ರಮ ಆಯುಧ ಮಾರಾಟ ಮಾಡಿದ ಪ್ರಕರಣ ದಾಖಲಾಗಿ ಆತ ಜಾಮೀನು ಮೇಲೆ ಹೊರಗಿದ್ದ. ಆದರೆ ಈಗ ಸಿಸಿಬಿ ಪೊಲೀಸರು ಆತನನ್ನು ಮತ್ತೊಮ್ಮೆ ವಶಕ್ಕೆ ಪಡೆದು ತನಿಖೆಗೆ ಮುಂದಾಗಿದ್ದಾರೆ. ಈ ಫಯಾಜ್​, ಐವರು ಉಗ್ರರ ಫೋನ್ ಕಂಟ್ಯಾಕ್ಟ್​ನಲ್ಲಿದ್ದ ಕಾರಣ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
