ತಿರುವನಂತಪುರ:ಇತ್ತೀಚಿನ ದಿನಗಳಲ್ಲಿ ಸಾಲದ ಆ್ಯಪ್​ಗಳು​ ಮತ್ತು ರಮ್ಮಿಯಂತಹ ಆನ್​ಲೈನ್​ ಜೂಜಾಟಗಳು ಬಡ ಮತ್ತು ಮಧ್ಯಮ ಕುಟುಂಬಗಳ ಕತ್ತು ಹಿಸುಕುತ್ತಿವೆ. ಆನ್​ಲೈನ್​ನಲ್ಲಿ ನಡೆಯುವ ಈ ವಂಚನೆಯ ಚಕ್ರವ್ಯೂಹಕ್ಕೆ ಸಿಲುಕಿ ಸಾಕಷ್ಟು ಮಂದಿ ಮನೆ, ಜಮೀನು ಮಾರಿಕೊಂಡು ಬೀದಿಗೆ ಬಿದ್ದಿದ್ದಾರೆ. ಅಲ್ಲದೆ, ಸಾಲದ ಕಿರುಕುಳ ತಾಳಲಾರದೇ ಬಲಿಯಾಗುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆಲ್ಲ ಕೂಡಲೇ ಕಡಿವಾಣ ಹಾಕದಿದ್ದರೆ, ಇನ್ನುಷ್ಟು ಅಮಾಯಕ ಜೀವಗಳು ಬಲಿಯಾಗುತ್ತವೆ.
ಆನ್​ಲೈನ್​ ಸಾಲದ ಕಿರುಕುಳಕ್ಕೆ ಇದೀಗ ಇನ್ನೊಂದು ಜೀವ ಬಲಿಯಾಗಿದೆ. ಕೇವಲ 5 ಸಾವಿರ ರೂಪಾಯಿ ಸಾಲಕ್ಕೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಈ ಘಟನೆ ಕೇರಳದ ವಯನಾಡು ಜಿಲ್ಲೆಯ ಸುಲ್ತಾನ್​ ಬಥೇರಿಯಲ್ಲಿ ನಡೆದಿದೆ. ಮೊನ್ನೆಯಷ್ಟೇ ಕೊಚ್ಚಿಯಲ್ಲಿ ಇಡೀ ಕುಟುಂಬ ಇದೇ ಆನ್​ಲೈನ್​ ಲೋನ್​ ಆ್ಯಪ್​ ಕಿರುಕುಳಕ್ಕೆ ಬಲಿಯಾಗಿತ್ತು.
ಇದನ್ನೂ ಓದಿ:ರೂಬಿಕ್​ ಕ್ಯೂಬ್​ನಲ್ಲಿ ಅರಳಿತು ನರೇಂದ್ರ ಮೋದಿ ಭಾವಚಿತ್ರ; ಪ್ರಧಾನಿ ಜನ್ಮದಿನಕ್ಕೆ ಬಾಲಕನಿಂದ ವಿಶೇಷ ಶುಭಾಶಯ
ಮೃತ ವ್ಯಕ್ತಿಯನ್ನು ಬಥೇರಿ ನಿವಾಸಿ ಅಜಯ್​ರಾಜ್ (44)​ ಎಂದು ಗುರುತಿಸಲಾಗಿದೆ. ಸೆ. 15ರಂದು ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸೆ. 14ರಿಂದ ನಾಪತ್ತೆಯಾಗಿದ್ದರು. ಸೆ. 15ರ ಶುಕ್ರವಾರ ಅಜಯ್​ರಾಜ್​ ಮನೆಯ ಸಮೀಪ ಆತನ ಮೃತದೇಹವನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ಪತ್ತೆಹಚ್ಚಿದರು. ಆತನ ಮೊಬೈಲ್​ ಫೋನ್​ ಅನ್ನು ಪರಿಶೀಲಿಸುತ್ತಿರುವಾಗಿ ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ ಅಜಯ್​ರಾಜ್​ ಲೋನ್​ ಆ್ಯಪ್​ನಲ್ಲಿ 5000 ರೂ. ಸಾಲ ಪಡೆದಿದ್ದರು ಎನ್ನಲಾಗಿದೆ. ಆತನ ಕಾಲ್​ ಲೀಸ್ಟ್​ನಲ್ಲಿದ್ದ ಕೆಲ ಸ್ನೇಹಿತರು ಮತ್ತು ಸಂಬಂಧಿಕರು ತಮ್ಮ ಮೊಬೈಲ್​ಗಳಲ್ಲಿ ಬೆದರಿಕೆ ಸಂದೇಶ ಮತ್ತು ಅಶ್ಲೀಲ ಚಿತ್ರಗಳನ್ನು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಕೇರಳದ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದರು. ಈ ಘಟನೆ ಎರ್ನಾಕುಲಂನ ಕದಮಕ್ಕುಡಿಯಲ್ಲಿ ನಡೆದಿತ್ತು. ಮೃತರನ್ನು ಕದಮಕ್ಕುಡಿ ನಿವಾಸಿ ನಿಜೋ (39), ಆತನ ಪತ್ನಿ ಶಿಲ್ಪ (29) ಮತ್ತು ಮಕ್ಕಳಾದ ಆಬಲ್​ (7) ಮತ್ತು ಆ್ಯರೂನ್​ (5) ಎಂದು ಗುರುತಿಸಲಾಗಿದೆ. ಆರ್ಥಿಕ ಸಮಸ್ಯೆಯೇ ಸಾವಿಗೆ ಕಾರಣ ಎಂದು ಹೇಳಲಾಗಿತ್ತು. ಇದೀಗ ಇಡೀ ಕುಟುಂಬದ ದುರಂತ ಸಾವಿನ ಹಿಂದೆ ಲೋನ್​ ಗ್ಯಾಂಗ್​ನ ಕರಾಳ ಛಾಯೆ ಇರುವುದು ಬಯಲಾಗಿದೆ. ಆನ್​​ಲೈನ್​ ಲೋನ್​ ವಂಚನೆ ಜಾಲಕ್ಕೆ ಸಿಲುಕಿ ಇಡೀ ಕುಟುಂಬ ನಾಶವಾಗಿರುವುದು ಪೊಲೀಸ್​ ತನಿಖೆಯಿಂದ ಬಯಲಾಗಿದೆ.(ಏಜೆನ್ಸೀಸ್​)
ಲೋನ್​ ಗ್ಯಾಂಗ್ ಟಾರ್ಚರ್​ಗೆ ಇಡೀ ಕುಟುಂಬವೇ ನಾಶ: ಸತ್ತ ನಂತರವೂ ಬೆತ್ತಲೆ ಫೋಟೋ ಹರಿಬಿಟ್ಟ ದುಷ್ಟರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
