ನವದೆಹಲಿ:ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಮಹಿಳೆಯ ಪತಿ ಆಕೆಯ ಸಹೋದ್ಯೋಗಿಯನ್ನು ಹತ್ಯೆ ಮಾಡಿರುವ ಘಟನೆ ಆಗ್ನೇಯ ದೆಹಲಿಯ ಗೋವಿಂದಪುರಿಯಲ್ಲಿ ನಡೆದಿದೆ.
ಮೃತ ದುರ್ದೈವಿ ಹೆಸರು ವೀರೆಂದರ್​(35) ಎಂದು ತಿಳಿದು ಬಂದಿದ್ದು ಆರೋಪಿ ಸೋನು(33) ಅಲಿಯಾಸ್​ ಧಾರ್​ನನ್ಜು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಮೃತ ದುರ್ದೈವಿ ಹಾಗೂ ಆರೋಪಿಯ ಪತ್ನಿ ಒಂದೇ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು. ವೀರೇಂದರ್​ ಶಾಲಾ ಬಸ್ಸಿನ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮತ್ತು ಆರೋಪಿಯ ಪತ್ನಿ ಆಫೀಸ್​ ಸ್ಟಾಫ್​ ಆಗಿ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ:ಕಬಾಬ್​ ಬಿಲ್​ ಕೇಳಿದ್ದಕ್ಕೆ ಬಾಣಸಿಗನ ಹತ್ಯೆ; ಆರೋಪಿಗಳು ಪರಾರಿ
ಇಬ್ಬರ ನಡುವಿನ ಸ್ನೇಹವನ್ನು ಅಪಾರ್ಥ ಮಾಡಿಕೊಂಡ ಆರೋಪಿ ಸೋನು ವೀರೇಂದರ್​ನನ್ನು ಥಳಿಸಿ ಚಾಕುವಿನಿಂದ ಹಲವು ಭಾರಿ ಇರಿದು ಪರಾರಿಯಾಗಿದ್ದಾನೆ. ತಮ್ಮ ಸಹೋದರ ರಕ್ತಸ್ರಾವದಿಂದ ನರಳುತ್ತಿದ್ದನ್ನು ಗಮನಿಸಿದ ವೀರೆಂದರ್​ ಸಹೋದರ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸ್​ ಅಧಿಕಾರಿಗಳು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಮತ್ತು ಅಷ್ಟರಲ್ಲಾಗಲೇ ದುರ್ದೈವಿಯ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ಘೋಷಿಸಿದ್ದಾರೆ.
ಆರೋಪಿಯನ್ನು ದೆಹಲಿಯ ಜುಗ್ಗೀಸ್​ ಪ್ರದೇಶದ ನವಜೀವನ ಕ್ಯಾಂಪ್​ನಲ್ಲಿ ಬಂಧಿಸಿರುವ ಪೊಲೀಸರು ಕೊಲೆಗೆ ಬಳಸಿ್ದ ಚಾಕು ಹಾಗು ಇನ್ನಿತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + two =
Remember me
