ಪಟನಾ:ಫೆ. 14ರಂದು ಬಿಹಾರದ ಸೈವಾನ್ ಜಿಲ್ಲೆಗೆ ಆಸ್ಪತ್ರೆಯ ಶಂಕುಸ್ಥಾಪನೆ ನೇರವೇರಿಸಲು ಆಗಮಿಸಿದ್ದ ಬಿಹಾರದ ಆರೋಗ್ಯ ಮಂತ್ರಿಯನ್ನು ಗುರುತಿಸಲು ವಿಫಲವಾದ ಪೊಲೀಸ್​ ಅಧಿಕಾರಿಯನ್ನು ಅಮಾನತು ಮಾಡುವಂತೆ ಆರೋಗ್ಯ ಸಚಿವ ಮಂಗಲ್​ ಪಾಂಡೆ ಸೂಚಿಸಿದ್ದಾರೆ.
ಈ ಸಂಬಂಧ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಚಿವರ ಗುರುತು ಹಿಡಿಯದ ಜನರನ್ನೇಕೆ ನಿಯೋಜಿಸುತ್ತೀರಾ? ಸಚಿವರನ್ನೇ ನಿಲ್ಲಿಸಲು ಯತ್ನಿಸುತ್ತಾನೆ. ಅವನನ್ನು ಖಂಡಿತವಾಗಿ ಅಮಾನತು ಮಾಡಬೇಕೆಂದು ಸಚಿವ ಮಂಗಲ್​ ಪಾಂಡೆ ಮಾತನಾಡುತ್ತಿರುವುದನ್ನು ವೈರಲ್​ ವಿಡಿಯೋದಲ್ಲಿ ಕೇಳಬಹುದಾಗಿದೆ.
ಪೊಲೀಸ್​ ಅಧಿಕಾರಿಯನ್ನು ಅಸಿಸ್ಟೆಂಟ್​ ಪೊಲೀಸ್​ ಇನ್ಸ್​ಪೆಕ್ಟರ್​ ಗಣೇಶ್​ ಚೌಹಾಣ್​ ಎಂದು ಗುರುತಿಸಲಾಗಿದ್ದು, ಇವರನ್ನು ವಿಐಪಿಗಳು ವೇದಿಕೆಗೆ ತೆರಳಲು ಅನುಕೂಲ ಮಾಡಿಕೊಡಲು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಈ ವೇಳೆ ಆರೋಗ್ಯ ಸಚಿವರನ್ನು ಗುರುತಿಸಲು ವಿಫಲವಾದ ಪೊಲೀಸ್​ ಅಧಿಕಾರಿ, ಸಚಿವರನ್ನು ತಡೆಯಲು ಯತ್ನಿಸಿದರು.
ಸಚಿವರ ವರ್ತನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಹಾರ ಮಾಜಿ ಉಪಮುಖ್ಯಮಂತ್ರಿ ಮತ್ತು ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್​, ಸಚಿವರು ತನ್ನ ಅರ್ಹತೆ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವುದನ್ನು ಕಂಡು ನನಗೆ ಶಾಕ್​ ಆಯಿತು ಎಂದು ವ್ಯಂಗ್ಯವಾಡಿದ್ದಾರೆ.(ಏಜೆನ್ಸೀಸ್​)
Shocked to see how Bihar’s health minister is bragging about his entitlement. Assuming the Cop on duty couldn’t recognize the minister & requested for identification, does it behove of a minister to publicly threaten & humiliate him? Power drunk minister shd be suspended insteadpic.twitter.com/kqMjrcB0Tu
— Tejashwi Yadav (@yadavtejashwi)February 15, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + 11 =
Remember me
