ಬೆಂಗಳೂರು:ಇದೀಗ UPA ಹೆಸರನ್ನು INDIA ಆಗಿ ಬದಲಾಯಿಸಲಾಗಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಕುರಿತಾಗಿ ಮಾಜಿ ಕಾನೂನು ಸಚಿವರಾಗಿದ್ದ ಬಿಜೆಪಿಯ ಸುರೇಶ್ ಕುಮಾರ್ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದುಇದರಿಂದಾಗಿ ಸಮಸ್ಯೆ ಎದುರಾಗಲಿದೆಯಾ ಎನ್ನುವ ಪ್ರಶ್ನೆ ಎದ್ದಿದೆ.
ಇದನ್ನೂ ಓದಿ:Uddhav Thackeray Slams BJP | INDIA ನಾವು ನಿಮ್ಮ ಜೊತೆ ಇದೀವಿ! BJP ವಿರುದ್ಧ ಉದ್ಧವ್​ ಠಾಕ್ರೆ ವಾಗ್ದಾಳಿ!
ತಮ್ಮ ಪೋಸ್ಟ್‍ನಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್, “ಯು ಪಿ ಎ ಈಗ I N D I A ಆಗಿದೆ. ಈ ಹಿನ್ನೆಲೆಯಲ್ಲಿ ಒಂದು ಚಿಂತನೆ. ನಮ್ಮ ದೇಶದಲ್ಲಿ The Emblems & Names (Prevention of Improper Use) 1950 ಎಂಬ ಕಾಯಿದೆ ಇದೆ. ಈ ರೀತಿ I N D I A ಎಂದು ಕರೆದುಕೊಳ್ಳುವುದು ಈ ಕಾಯ್ದೆಯ ಸೆಕ್ಷನ್ 2(c) ಮತ್ತು ಶೆಡ್ಯೂಲ್ 1(4) & (7) ಗಳ ಉಲ್ಲಂಘನೆ ಎಂಬುದು ನನ್ನ ಅನಿಸಿಕೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನಮ್ಮ ಮೈತ್ರಿಕೂಟಕ್ಕೆ ‘INDIA’ ಅಂತ ನಾಮಕರಣ ಮಾಡಿದ್ದೇವೆ: ಮಲ್ಲಿಕಾರ್ಜುನ ಖರ್ಗೆ
ಮಾಜಿ ಕಾನೂನು ಸಚಿವರೇ ಹೇಳಿರುವುದರಿಂದ ಈ ಮಾತಿಗೆ ಹೆಚ್ಚಿನ ತೂಕ ಲಭಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆ ಶುರುವಾಗಿದೆ. ಇದೀಗ ಮಾಜಿ‌ ಸಚಿವರ ‌ಪೋಸ್ಟ್ ನಿಂದ ಹಲವು ಪ್ರಶ್ನೆಗಳು ಹುಟ್ಟಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + nineteen =
Remember me
