ಅಹಮದಾಬಾದ್:ಪ್ರತಿಭಾವಂತ ಯುವ ವಿದ್ಯಾರ್ಥಿಯೊಬ್ಬಳು ಯಾವ ಸುಳಿವೂ ನೀಡದೆ ಸಾವಿಗೆ ಶರಣಾಗಿರುವ ಘಟನೆಯೊಂದು ಅಹಮದಾಬಾದಿನ ಐಐಎಂ ಹಾಸ್ಟೆಲ್​ನಿಂದ ವರದಿಯಾಗಿದೆ. ಐಐಎಂ-ಎನ ಡಾರ್ಮ್ ಸಂಖ್ಯೆ 8ರಲ್ಲಿ ನೇಣು ಬಿಗಿದುಕೊಂಡು ಸಾವಪ್ಪಿರುವ ಯುವತಿಯನ್ನು ಬಿಹಾರದ ಮುಜಫ್ಫರಪುರದ ದೃಷ್ಟಿ ರಾಜ್ ಕಹ್ನಾನಿ ಎಂಬುದಾಗಿ ಗುರುತಿಸಲಾಗಿದೆ. ಅಹಮದಾಬಾದಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಐಐಎಂನಲ್ಲಿ ಎಂಬಿಎ-ಪಿಜಿಪಿ ಕೋರ್ಸ್​ನ ಎರಡನೇ ವರ್ಷದಲ್ಲಿ ಆಕೆ ವ್ಯಾಸಂಗ ಮಾಡುತ್ತಿದ್ದಳು.
ಇತ್ತೀಚೆಗೆ ರಜೆ ಮುಗಿಸಿ ಕ್ಯಾಂಪಸ್​ಗೆ ಮರಳಿದ್ದ ದೃಷ್ಟಿ ಬುಧವಾರ ಬೆಳಿಗ್ಗೆಯಿಂದ ತನ್ನ ರೂಮಿನಲ್ಲೇ ಸೇರಿಕೊಂಡಿದ್ದಳು. ಊಟಕ್ಕೂ ಆಚೆ ಬರದಿದ್ದಾಗ ಅವಳ ಸಹಪಾಠಿಗಳು ಮಧ್ಯಾಹ್ನ 2.30ರ ವೇಳೆಗೆ ಅವಳನ್ನು ವಿಚಾರಿಸಲು ಹೋದರು. ಎಷ್ಟೇ ಕದ ತಟ್ಟಿದರೂ, ಕರೆದರೂ ಆಕೆ ಪ್ರತಿಕ್ರಿಯಿಸದಿದ್ದಾಗ, ಬಾಗಿಲು ಒಡೆದು ಒಳಹೋದರು. ಅಲ್ಲಿ ದೃಷ್ಟಿ ತನ್ನ ದುಪಟ್ಟ ಬಳಸಿ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಳು. ವಿಷಯ ತಿಳಿದ ಹಾಸ್ಟೆಲ್​ನ ಸೆಕ್ಯುರಿಟಿ ಮತ್ತು ವೈದ್ಯರು ಬಂದು ಪರೀಕ್ಷಿಸಿದಾಗ ಆಕೆ ಸತ್ತಿರುವುದು ದೃಢವಾಯಿತು.
ಇದನ್ನೂ ಓದಿ:ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…
ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಇಂಥ ಗಂಭೀರ ಕ್ರಮ ತೆಗೆದುಕೊಳ್ಳಲು ಕಾರಣ ತಿಳಿದುಬಂದಿಲ್ಲ. ತನಿಖೆಗಾಗಿ ದೃಷ್ಟಿಯ ಮೊಬೈಲ್​ಫೋನ್​ ಫೊರೆನ್ಸಿಕ್ ಲ್ಯಾಬ್​ಗೆ ಕಳುಹಿಸಲಾಗಿದೆ. ಶವವನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನವದೆಹಲಿಯಲ್ಲಿ ವಾಸವಾಗಿರುವ ದೃಷ್ಟಿಯ ಪಾಲಕರಿಗೆ ವಿಚಾರ ತಿಳಿಸಲಾಗಿದೆ. ತನ್ನ ಕ್ಯಾಂಪಸ್​ನಲ್ಲಾಗಿರುವ ಆಘಾತಕಾರಿ ಘಟನೆ ಬಗ್ಗೆ ಐಐಎಂ-ಎ ಕಳವಳ ವ್ಯಕ್ತಪಡಿಸಿದೆ. (ಏಜೆನ್ಸೀಸ್​)
ಇದು ಮಹಿಳೆಯರ ಮುಖಭಾವನೆಯನ್ನೇ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡುತ್ತದೆಯಂತೆ!

ನೀವು ಈ ಆ್ಯಪ್​ ಬಳಸುತ್ತಿದ್ದರೆ ನಿಮ್ಮ ಮಾಹಿತಿ ಕಳವಾಗಿರುವ ಸಾಧ್ಯತೆ ಇದೆ; 19 ಲಕ್ಷ ಬಳಕೆದಾರರ ಡೇಟಾ ಕದ್ದ ಹ್ಯಾಕರ್​…

ಈ ಐನಾತಿ ದಂಪತಿಗೆ ಮಿಡಲ್ ಕ್ಲಾಸ್ ಜನರೇ ಟಾರ್ಗೆಟ್! ನೂರಾರು ಜನರ ಕೆನ್ನೆಗೆ ಕಣ್ಣೀರಿಳಿಸಿದ ಕರ್ಮಿಷ್ಟರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eighteen =
Remember me
