ನವದೆಹಲಿ:ಭಾರತದ ಆತಿಥ್ಯದಲ್ಲಿ ನವದೆಹಲಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯ ಭದ್ರತಾ ದೃಷ್ಟಿಯಿಂದ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಆದರೂ ಡ್ರೋಣ್ ಹಾರಾಟ ನಡೆಸಿ ಪೊಲೀಸರು ಗಾಬರಿಗೊಳ್ಳುವಂತೆ ಮಾಡಿತ್ತು.
ಶುಕ್ರವಾರ ಪಟೇಲ್ ನಗರ ಸಮೀಪದಲ್ಲಿ ಡ್ರೋಣ್ ಕ್ಯಾಮರಾವೊಂದು ಅನುಮಾನಾಸ್ಪದವಾಗಿ ಹಾರಾಡಿದ ಬಗ್ಗೆ ದೆಹಲಿ ಪೊಲೀಸರ ಕಂಟ್ರೋಲ್ ರೂಮಿಗೆ ಮಾಹಿತಿ ಬಂದಿದೆ. ಗಾಬರಿಗೊಂಡ ಪೊಲೀಸ್ ತಂಡವು ಡ್ರೋಣ್ ಕ್ಯಾಮರಾದ ಮೂಲವನ್ನು ಹುಡುಕಿದ್ದಾರೆ.
ಶನಿವಾರ ಸ್ಥಳಕ್ಕೆ ತಲುಪಿದಾಗ ಫೋಟೋಗ್ರಾಫರ್ ಮಾಡಿದ ಯಡವಟ್ಟು ಬೆಳಕಿಗೆ ಬಂದಿದೆ. ಹುಟ್ಟುಹಬ್ಬದ ಪಾರ್ಟಿಯ ಸಂಭ್ರಮವನ್ನು ಸೆರೆ ಹಿಡಿಯಲು ಫೋಟೋಗ್ರಾಫರ್ ಡ್ರೋಣ್ ಬಳಸಿದ್ದು, ಇದರಲ್ಲಿ ಇನ್ಯಾವ ಉದ್ದೇಶವೂ ಇರಲಿಲ್ಲ ಎಂದು ವಿಚಾರಣೆಯ ವೇಳೆ ತಿಳಿದುಬಂದಿದೆ.
ನಂತರ ಸರ್ಕಾರಿ ಅಧಿಕಾರಿಗಳು ವಿಧಿಸಿದ್ದ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಫೋಟೋಗ್ರಾಫರ್ ವಿರುದ್ಧ ಸೆಕ್ಷನ್ 188 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನವದೆಹಲಿಯಲ್ಲಿ ಜಿ-20 ಶೃಂಗಸಭೆ ಹಿನ್ನೆಲೆ ಭದ್ರತಾ ದೃಷ್ಟಿಯಿಂದ ಹಲವು ನಿರ್ಬಂಧಗಳನ್ನು ಹೇರಲಾಗಿದೆ. ಫುಡ್ ಡೆಲಿವರಿ, ಡ್ರೋಣ್ ಹಾರಾಟ ಸೇರಿದಂತೆ ಹಲವು ವ್ಯಾಪಾರಗಳಿಗೆ ತಾತ್ಕಾಲಿಕವಾಗಿ ನಿರ್ಬಂಧ ಹೇರಲಾಗಿದೆ. ಯಾವುದೇ ಅವಘಡಗಳು ಸಂಭವಿಸದಂತೆ 50,000 ಭದ್ರತಾ ಸಿಬ್ಬಂದಿ, 9 ಶ್ವಾನ ತುಕಡಿ ಸೇರಿದಂತೆ ದೊಡ್ಡ ಪಡೆಯೇ ಕಾವಲು ನಿಂತಿದೆ.
‘ಡಾಕ್ಟರ್​ ಬ್ರೋ’ ಈಗ ಮ್ಯಾನ್ ಆಫ್ ಮಿಲಿಯನ್ಸ್​; ಯೂ-ಟ್ಯೂಬ್​ ಒಂದರಲ್ಲೇ 2 ಮಿಲಿಯನ್​ ಸಬ್​​ಸ್ಕ್ರೈಬರ್ಸ್​!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:1 × two =
Remember me
