ಕಲ್ಕತ್ತ:ಚುನಾವಣೆ ಹಿನ್ನೆಲೆಯಲ್ಲಿ ಅಕ್ಷರಶಃ ರಣರಂಗವಾಗಿ ಏರ್ಪಟ್ಟಿರುವ ಪಶ್ಚಿಮ ಬಂಗಾಳದತ್ತ ಇದೀಗ ಎಲ್ಲರ ಚಿತ್ತ ನೆಟ್ಟಿದೆ. ಇದೇ 27 ರಿಂದ ಪಶ್ಚಿಮ ಬಂಗಾಳ ವಿಧಾನಸಭೆಗೆ ಒಟ್ಟು 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಈ ಸಾರಿ ಬಂಗಾಳದಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯಬೇಕು ಎಂದು ಪಟ್ಟು ಹಿಡಿದಿರುವ ಬಿಜೆಪಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಲೆನೋವಾಗಿದ್ದಾರೆ. ಈಗಾಗಲೇ ವಿಧಾನಸಭೆ ಚುನಾವಣೆಗೆ ನಂದಿಗ್ರಾಮದಿಂದ ಸ್ಪರ್ಧಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ:http://ಜಾರಕಿಹೊಳಿ ಸಿಡಿ ಕೇಸ್​ನಲ್ಲಿ ಕಾಂಗ್ರೆಸ್​ ಶಾಸಕಿ ಕೈವಾಡ! ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದ್ದೇನು?
ಆದರೆ, ಮಮತಾ ವಿರುದ್ಧ ಕಣಕ್ಕೀಳಿಯುವ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿತ್ತು. ಇದೀಗ ಅದಕ್ಕೆ ಬಹುತೇಕ ಉತ್ತರ ದೊರಕಿದ್ದು, ಟಿಎಂಸಿಯಿಂದ ಹೊರ ಹೋಗಿ ಬಿಜೆಪಿ ಸೇರಿರುವ ಬಂಗಾಳದ ಪ್ರಭಾವಿ ರಾಜಕಾರಣಿ, ಮಮತಾ ಅವರ ಮಾಜಿ ಆಪ್ತ ಸುವೆಂದು ಅಧಿಕಾರಿಯನ್ನೇ ಮಮತಾ ವಿರುದ್ಧ ಕಣಕ್ಕಿಳಿಸಲು ಬಿಜೆಪಿ ಎಲ್ಲ ಸಿದ್ದತೆ ಮಾಡಿಕೊಂಡಿದೆ.
ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಶನಿವಾರ ಸಂಜೆ ಬಿಡುಗಡೆಯಾಗಲಿದ್ದು, ಸುವೆಂದು ಅಧಿಕಾರಿ ಅವರು ಮಮತಾ ವಿರುದ್ಧ ಕಣಕ್ಕಿಳಿಯುವುದು ಬಹುತೇಕ ಪಕ್ಕಾ ಆಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ನಂದಿಗ್ರಾಮದ ಶಾಸಕರಾಗಿದ್ದ ಅಧಿಕಾರಿ, ಮಮತಾ ಅವರ ಮೇಲೆ ಮುನಿಸಿಕೊಂಡು ಟಿಎಂಸಿ ತೊರೆದು ಬಿಜೆಪಿ ಸೇರಿದ್ದರು. ನಂದಿಗ್ರಾಮ ವಿಧಾನಸಭಾ ಕ್ಷೇತ್ರ ಟಿಎಂಸಿಯ ಭದ್ರಕೋಟೆ ಎನಿಸಿಕೊಂಡಿದೆ.
ನಾನು ಸೇಫ್​, ನಾನು ಸೇಫ್​- ಜಿಗಿಜಿಗಿದು ಕುಪ್ಪಳಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​

ಸುಧಾಕರ್ ಅವರದೂ ಸಿಡಿ ಇದೆಯಾ ಎಂದ ಸಿದ್ದರಾಮಯ್ಯ

ಟಿಎಂಸಿಗೆ ಮತ್ತೆ ಶಾಕ್​! ದೀದಿ ಪಕ್ಷದ ಹಿರಿಯ ನಾಯಕ ಬಿಜೆಪಿ ಸೇರ್ಪಡೆ

ಪಶ್ಚಿಮ ಬಂಗಾಳದಲ್ಲಿ ಬಾಂಬ್​ ಬ್ಲಾಸ್ಟ್​: ಟಿಎಂಸಿ ಕಾರ್ಯಕರ್ತರ ಮನೆಯಲ್ಲಿಯೇ ತಯಾರು?

ಬಿಜೆಪಿ ಶಾಸಕನ ಬರ್ತ್​ಡೇ ಪಾರ್ಟಿಯಲ್ಲಿ ಎರಡು ಸಾವು; ಒಬ್ಬನಿಗೆ ಗುಂಡೇಟು, ಇನ್ನೊಬ್ಬನಿಗೆ ಕಲ್ಲೇಟು..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 1 =
Remember me
