ಹಿಮಾಚಲ ಪ್ರದೇಶ:ಖ್ಯಾತ ಆಟೋ​ ಪತ್ರಕರ್ತ ಸುವಿಲ್ ಸುಸ್ವಿರ್ಕರ್ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಗೆ ಸಂತಾಪ ಸೂಚಿಸಿರುವ ಟಿವಿಎಸ್ ಮೋಟಾರ್ ಕಂಪನಿ, ಭಾರೀ ಮಳೆ ಮತ್ತು ಭೂಕುಸಿತದಿಂದ ಹಿಮಾಚಲ ಪ್ರದೇಶದ ರಸ್ತೆಗಳು ಹಾಳಾಗಿದೆ. ಸುವಿಲ್​ ಅವರು ಕಾಜಾಗೆ ತೆರಳುವ ಮಾರ್ಗದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿಸಿದೆ.
ಇದನ್ನೂ ಓದಿ:ನಿಜವಾಗುತ್ತಾ ಅಮಿತ್ ಶಾ ನುಡಿದ ಭವಿಷ್ಯ… ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟ ಸಭೆಗೂ ಮುನ್ನ ದೆಹಲಿಯಲ್ಲಿ ಕಾಂಗ್ರೆಸ್-ಎಎಪಿ ನಡುವೆ ಬಿರುಕು?
“ಈ ದುಃಖದ ಸಮಯದಲ್ಲಿ ಅವರ ಕುಟುಂಬ, ಸ್ನೇಹಿತರು ಮತ್ತು ಪ್ರೀತಿ ಪಾತ್ರರಿಗೆ ನಮ್ಮ ಸಂತಾಪಗಳು. ಅಪಘಾತ ಸಂಭವಿಸಿದಾಗ ಬೆಂಗಾವಲು ಪಡೆಯ ಭಾಗವಾಗಿದ್ದ ಮೊಬೈಲ್ ಆಂಬ್ಯುಲೆನ್ಸ್‌ನಲ್ಲಿ ವೈದ್ಯರು ಸುಸ್ವಿರ್ಕರ್‌ ಅವರಿಗೆ ತುರ್ತು ವೈದ್ಯಕೀಯ ನೆರವನ್ನು ಒದಗಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ” ಎಂದು ಟಿವಿಎಸ್ ಸಂಸ್ಥೆ ಹೇಳಿದೆ. ಅಪಘಾತದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಟಿವಿಎಸ್ ಪುಟ ಹಂಚಿಕೊಂಡಿಲ್ಲ.
A post shared by TVS Motor Company (@tvsmotorcompany)
ಈ ದುರ್ಘಟನೆ ಕಂಪನಿಯು ಆಯೋಜಿಸಿದ್ದ ರೈಡ್‌ ವೇಳೆ ಸಂಭವಿಸಿದೆ ಎಂದು ಹೇಳಲಾಗಿದೆ. ಸುವಿಲ್ ಸುಸ್ವಿರ್ಕರ್ ಬೈಕ್‌ವೇಲ್‌ನಲ್ಲಿ ಪ್ರಧಾನ ವರದಿಗಾರರಾಗಿ ಕೆಲಸ ಮಾಡುತ್ತಿದ್ದರು. ಆಗಸ್ಟ್ 16 ರಂದು ಹಿಮಾಚಲ ಪ್ರದೇಶದ ನರಕಂದ-ಕಲ್ಪಾ ಮಾರ್ಗದಲ್ಲಿ ಮಾಡಿದ ಬೈಕಿಂಗ್ ವಿಡಿಯೋ ಅವರ ಕೊನೆಯ ಇನ್​ಸ್ಟಾಗ್ರಾಮ್​ ಪೋಸ್ಟ್ ಆಗಿದೆ. ಸುಸ್ವೀರ್ಕರ್ ಅವರ ಅಕಾಲಿಕ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಸಂತಾಪದ ಸಂದೇಶಗಳು ಹರಿದುಬಂದಿವೆ.
ಇದನ್ನೂ ಓದಿ:ಚಂದ್ರಯಾನ-3 ಮಹತ್ವದ ಮೈಲಿಗಲ್ಲು; ನೌಕೆಯಿಂದ ಬೇರ್ಪಟ್ಟ ಲ್ಯಾಂಡರ್ ಮಾಡ್ಯೂಲ್!
“ಈ ದುರಂತ ತಂದ ನೋವು ಮತ್ತು ದುಃಖವನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಈ ಕಷ್ಟದ ಸಮಯದಲ್ಲಿ ಪರಸ್ಪರ ಒಂದಾಗಿ ನಿಲ್ಲುತ್ತೇವೆ” ಎಂದು ಟಿವಿಎಸ್ ಸಂಸ್ಥೆ ಪೋಸ್ಟ್​ನಲ್ಲಿ ತಿಳಿಸಿದೆ,(ಏಜೆನ್ಸೀಸ್).
ಮಮ್ಮುಟ್ಟಿ ನಟಿಸಲಿರುವ ಮುಂದಿನ ಚಿತ್ರದ ಬಗ್ಗೆ ಇಲ್ಲಿದೆ ಹೊಸ ಅಪ್ಡೇಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + seventeen =
Remember me
