ಕರೀಂನಗರ :ಕೋವಿಡ್​ ಪರೀಕ್ಷೆ ಮಾಡುವಾಗ ಮೂಗಿನೊಳಗೆ ಹಾಕಿದ ಸ್ವಾಬ್​ ಸ್ಟಿಕ್​ ಮುರಿದು ಸಿಕ್ಕಿಹಾಕಿಕೊಂಡು ಹಿಂಸೆ ನೀಡಿದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ. ಹಳ್ಳಿಯವರಿಗೆ ಕೋವಿಡ್​ ಪರೀಕ್ಷೆ ಆಯೋಜಿಸಿ ಮೊದಲು ತಾವೇ ಪರೀಕ್ಷೆ ಮಾಡಿಸಿಕೊಂಡು ಮಾದರಿಯಾಗಲು ಹೊರಟ ಸರ್​ಪಂಚ್ ಒಬ್ಬರು, ಹೀಗೆ ನರಕಯಾತನೆ ಅನುಭವಿಸಿದ್ದಾರೆ.
ಕರೀಂನಗರ ಜಿಲ್ಲೆಯ ರಾಮಡುಗು ಮಂಡಲದಲ್ಲಿರುವ ವೆಂಕಟರೋಪಲ್ಲಿ ಪಂಚಾಯಿತಿಯ ಅಧ್ಯಕ್ಷ ಜುವಾಜಿ ಶೇಖರ್​ ಅವರು, ಶುಕ್ತವಾರದಂದು ಹಳ್ಳಿಯಲ್ಲಿ ಕರೊನಾ ರಾಪಿಡ್​ ಆ್ಯಂಟಿಜನ್ ಟೆಸ್ಟ್​ ಶಿಬಿರವನ್ನು ಆಯೋಜಿಸಿದ್ದರು. ಸ್ಥಳೀಯ ಗೋಪಾಲ್​ರಾವ್​ಪೇಟ್​ನ ಪ್ರಾಥಮಿಕ ಆರೋಗ್ಯ ಕೇಂದ್ರದವರು ಇದನ್ನು ವ್ಯವಸ್ಥೆ ಮಾಡಿದ್ದರು.
ಇದನ್ನೂ ಓದಿ:ಹೆಂಡತಿ ಇಲ್ಲದ ಸಮಯದಲ್ಲಿ ಮಗಳನ್ನು ರೇಪ್ ಮಾಡಿ ಗರ್ಭಿಣಿ ಮಾಡಿದ… ಆಸ್ಪತ್ರೆಯಲ್ಲಿ ಬಯಲಾಯಿತು ರಹಸ್ಯ!
ಕೇಂದ್ರದ ಸಿಬ್ಬಂದಿ ಶೇಖರ್​ ಅವರ ಮೂಗಿಗೆ ಸ್ವಾಬ್ ಸ್ಟಿಕ್​ ಹಾಕಿದಾಗ ಅದು ಮೂಗಿನೊಳಗೇ ಮುರಿದುಹೋಯಿತು. ತದನಂತರ ನರ್ಸ್​ ಮತ್ತು ವೈದ್ಯರು ಏನೂ ಮಾಡಲು ಸಾಧ್ಯವಾಗದಾಗ ಅವರನ್ನು ಕರೀಂನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಮೂಗಿನಿಂದ ಜಾರಿ ಗಂಟಲಲ್ಲಿ ಸಿಲುಕಿಕೊಂಡಿದ್ದ ಆ ಕಡ್ಡಿಯನ್ನು ಅಲ್ಲಿನ ವೈದ್ಯರು ಎಂಡೋಸ್ಕೋಪಿ ಮಾಡಿ ತೆಗೆದರು ಎನ್ನಲಾಗಿದೆ.
ಅಷ್ಟೂ ಹೊತ್ತು ಭಾರೀ ನೋವು ಅನುಭವಿಸಿದ ಶೇಖರ್​ ಅವರು, ಚೇತರಿಸಿಕೊಂಡ ಮೇಲೆ, ಗ್ರಾಮದ ಕೇಂದ್ರದಲ್ಲಿರುವ ವೈದ್ಯಕೀಯ ಸಿಬ್ಬಂದಿ ಅಗತ್ಯ ಕೌಶಲ್ಯ ಮತ್ತು ತರಬೇತಿ ಹೊಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್)
ಮಗಳಿಗೆ ಹೇರ್​ಕಟ್​ ಮಾಡಿದ ಮಾಜಿ ಮಿಸ್​ ಯೂನಿವರ್ಸ್​!

ಕರೊನಾ ಔಷಧಿ, ಅಗತ್ಯವಸ್ತುಗಳ ಮೇಲೆ ಜಿಎಸ್​ಟಿ ಕಡಿತ; ಯಾವುದಕ್ಕೆ ಎಷ್ಟೆಷ್ಟು ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − two =
Remember me
