ನವದೆಹಲಿ: ಸೇನೆಗೆ ಅಗತ್ಯವಾದ 26 ಸಾಮಗ್ರಿ ಹಾಗೂ ಉಪಕರಣಗಳನ್ನು ದೇಶೀಯ ಕಂಪನಿಯಿಂದಲೇ ಖರೀದಿ ಮಾಡುವಂತೆ ರಕ್ಷಣಾ ಸಚಿವಾಲಯ ಬುಧವಾರ ನಿರ್ದೇಶನ ನೀಡಿದೆ. ಮೇಕ್ ಇನ್ ಇಂಡಿಯಾ ನೀತಿಯನ್ವಯ ದೇಶೀಯ ಕಂಪನಿಗಳಿಗೆ ಪೋ›ತ್ಸಾಹ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಕಾಶ್ಮೀರದಲ್ಲೇ ಉಗ್ರ ನೆಲೆ ಸ್ಥಾಪಿಸಲು ಹವಣಿಸುತ್ತಿದೆ ಪಾಕ್​- ಟಿಆರ್​ಎಫ್​, ಟಿಎಂಐ, ಜಿಇಎಚ್​ಗಳು ಎಲ್​ಇಟಿ, ಜೆಇಎಂಗಳ ಹೊಸ ರೂಪ!!!
ದೇಶೀಯ ರಕ್ಷಣಾ ಕೈಗಾರಿಕೆಗೆ ಉತ್ತೇಜನ ನೀಡಲು ಮತ್ತು ಶಸ್ತ್ರಾಸ್ತ್ರ ಹಾಗೂ ಇತರ ಮಿಲಿಟರಿ ಅಗತ್ಯಗಳ ಆಮದು ವೆಚ್ಚ ಕಡಿತ ಮಾಡಲು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಲವು ಸುಧಾರಣಾ ಕ್ರಮಗಳನ್ನು ಪ್ರಕಟಿಸಿದ ಕೆಲವೇ ದಿನಗಳಲ್ಲಿ ರಕ್ಷಣಾ ಸಚಿವಾಲಯ ಈ ಕ್ರಮಕ್ಕೆ ಮುಂದಾಗಿದೆ. ದೇಶೀಯ ರಕ್ಷಣಾ ಉತ್ಪಾದಕರಿಂದ ಖರೀದಿಸಬೇಕೆಂದು ಗುರುತಿಸಲಾಗಿರುವ ಎಲ್ಲ ಉಪಕರಣಗಳು ಹಡಗು ನಿರ್ವಣಕ್ಕೆ ಬಳಸುವಂಥದ್ದಾಗಿವೆ. ಸ್ಥಳೀಯ ಸರಬರಾಜುದಾರರಿಂದ ಖರೀದಿಸಲು 127 ವಸ್ತುಗಳನ್ನು ಇದುವರೆಗೆ ರಕ್ಷಣಾ ಸಚಿವಾಲಯ ಗುರುತಿಸಿದೆ. ಬುಧವಾರ ಗುರುತಿಸಿರುವುದು ಹೆಚ್ಚುವರಿ ವಸ್ತುಗಳಾಗಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಶುಭಸುದ್ದಿ: ಶೀಘ್ರವೇ ಏಕಕಾಲದಲ್ಲಿ 2 ಪದವಿ ವ್ಯಾಸಂಗ ಮಾಡುವ ಅವಕಾಶ ನಿಮ್ಮದಾಗಲಿದೆ…
ಪ್ರತ್ಯೇಕ ಬಜೆಟ್ ಅನುದಾನ:ಭಾರತೀಯ ನಿರ್ವಿುತ ಮಿಲಿಟರಿ ಹಾರ್ಡ್​ವೇರ್​ಗಳ ಖರೀದಿಗೆ ಪ್ರತ್ಯೇಕ ಬಜೆಟ್ ಅನುದಾನ ನಿಗದಿಪಡಿಸುವುದು, ಆಟೊಮ್ಯಾಟಿಕ್ ರೂಟ್ ಅನ್ವಯದ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್​ಡಿಐ) ಪ್ರಮಾಣವನ್ನು ಶೇ. 48ರಿಂದ ಶೇ. 74ಕ್ಕೆ ಏರಿಸುವುದು ಹಾಗೂ ಆಮದು ಮಾಡಿಕೊಳ್ಳದಿರುವ ಶಸ್ತ್ರಾಸ್ತ್ರಗಳ ಪಟ್ಟಿಯನ್ನು ಪ್ರತಿ ವರ್ಷ ಸಿದ್ಧಪಡಿಸುವುದು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿರುವ ಸುಧಾರಣೆಗಳಲ್ಲಿ ಸೇರಿವೆ.
ವಿದ್ಯಾರ್ಥಿಗಳಿಗೆ ಶುಭಸುದ್ದಿ: ಶೀಘ್ರವೇ ಏಕಕಾಲದಲ್ಲಿ 2 ಪದವಿ ವ್ಯಾಸಂಗ ಮಾಡುವ ಅವಕಾಶ ನಿಮ್ಮದಾಗಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − thirteen =
Remember me
