ನವದೆಹಲಿ:ನಿನ್ನೆ ನಡೆದ ವಿಶ್ವಕಪ್​​​ ಏಕದಿನ ಪಂದ್ಯದಲ್ಲಿ ಅಫಘಾನಿಸ್ತಾನ ವಿರುದ್ಧ ಪಾಕ್​​ 8 ವಿಕೆಟ್​ಗಳ ಹೀನಾಯ ಸೋಲು ಕಂಡಿದೆ. ಸತತ ಸೋಲಿನಿಂದ ಬೇಸರಗೊಂಡ ಪಾಕಿಸ್ತಾನದ​ ಮಾಜಿ ಆಟಗಾರನೊಬ್ಬ ತಮ್ಮದೇ ದೇಶದ ಆಟಗಾರರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಸತತ ಹ್ಯಾಟ್ರಿಕ್​ ಸೋಲು ಕಂಡು ವಿಶ್ವಕಪ್​ ಟೂರ್ನಿಯಿಂದ ಹೊರಬೀಳುವ ಸ್ಥಿಯಲ್ಲಿರುವ ಪಾಕಿಸ್ತಾನ ತಂಡದ ಪ್ರದರ್ಶನ ಕಂಡು ಮಾಜಿ ಆಟಗಾರ ವಾಸಿಂ ಅಕ್ರಮ್ ಕಿಡಿಕಾರಿದ್ದಾರೆ.
https://twitter.com/T_R_W_G/status/1716534310130581697
ಪಾಕಿಸ್ತಾನದ ಕ್ರಿಕೆಟ್​ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ವಾಸಿಂ ಅಕ್ರಮ್, ಇದು ಕೆಟ್ಟ ಸೋಲು, ನಿಜಕ್ಕೂ ಇದು ಮುಜುಗರ ತರುವಂತದ್ದು, ವೃತ್ತಿಪರರಾಗಿ ನೀವು ಪಡೆಯುವ ಹಣಕ್ಕೆ ತಕ್ಕ ಪ್ರದರ್ಶನ ನೀಡುವುದು ಕೂಡ ಪ್ರಮುಖವಾಗಿದೆ. ಆಟಗಾರರು ಪ್ರತಿದಿನ 8 ಕೆಜಿ ಮಟನ್ ತಿಂದರೆ. ಫಿಟ್​ನೆಸ್​ ಹೇಗೆ ಸಾಧ್ಯ? ಹಿಂದಿನ ಕೋಚಿಂಗ್ ಸ್ಟಾಫ್‌ ಅಡಿಯಲ್ಲಿ ಪಾಕಿಸ್ತಾನ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಫೈನಲ್‌ ತಲುಪಿತ್ತು. ಕೆಜಿಗಟ್ಟಲೆ ಮಟನ್​ ತಿನ್ನುವುದನ್ನು ಬಿಟ್ಟು ದಯವಿಟ್ಟು ಮೊದಲು ದೇಶದ ಬಗ್ಗೆ ಯೋಜಿಸಿ ಎಂದು ಹೇಳಿದ್ದಾರೆ
ದೇಶಕ್ಕಾಗಿ ಆಡುವಾಗ ನಿಮ್ಮಲ್ಲಿ ಒಂದು ನಿರ್ದಿಷ್ಟ ಮಾನದಂಡ ಇರಬೇಕು. ಮಿಸ್ಬಾ ಉಲ್​ ಹಕ್​ ಅವರು ಕೋಚ್ ಆಗಿದ್ದ ವೇಳೆ ಫಿಟ್​ನೆಸ್​ ಮಾನದಂಡವನ್ನು ಜಾರಿಗೆ ತಂದಿದ್ದರು. ಅವರ ವಿರುದ್ಧವೇ ನೀವು ಆರೋಪ ಹೊರಿಸಿ ಹುದ್ದೆಯಿಂದ ಕೆಳಗಿಳಿಸಿದ್ದೀರಿ. ಫೀಲ್ಡಿಂಗ್ ಎನ್ನುವುದು ಫಿಟ್ನೆಸ್‌ಗೆ ಸಂಬಂಧಿಸಿದ್ದು. ನಮ್ಮಲ್ಲಿ ಆ ಕೊರತೆಯಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದುರದೃಷ್ಟವಶಾತ್, ಪಾಕ್​ ತಂಡದ ನಾಯಕ ಬಾಬರ್ ಅಜಮ್ ನೇತೃತ್ವದಲ್ಲಿ ಭಾರತದಲ್ಲಿ ವಿಶ್ವಕಪ್ ಆಡುತ್ತಿರುವ ತಂಡವು 2 ಮ್ಯಾಚ್​ಗಳನ್ನು ಗೆದ್ದು ನಂತರ ಮೂರು ಆಟಗಳನ್ನು ಸೋತು ಭಾರಿ ಮುಖ ಭಮಘವನ್ನು ಅನುಭವಿಸಿದೆ. ಆಟಗಾರರು ತುಂಬಾ ಸರಳವಾಗಿ ಒಂದು ಆಯಾಮದವರಾಗಿದ್ದಾರೆ. ತಂಡವು ಹ್ಯಾಟ್ರಿಕ್ ಸೋಲುಗಳನ್ನು ಅನುಭವಿಸಿದೆ.
ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ಡಿಎಸ್‌ಪಿ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 6 =
Remember me
