ನವದೆಹಲಿ:ಸ್ವಾಮಿ ವಿವೇಕಾನಂದರ ಜಯಂತಿ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಷ್ಟ್ರೀಯ ಯುವ ದಿನಾಚರಣೆನ್ನಾಗಿ ಆಚರಣೆ ಮಾಡುತ್ತಿದ್ದು, ಯುವಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು ವಿವೇಕಾನಂದರ ವಿಚಾರಗಳು ಪ್ರೇರಣೆಯಿಂದ ಕೂಡಿವೆ ಎಂದು ಹೇಳಿದರು.
ಎರಡನೇ ರಾಷ್ಟ್ರೀಯ ಯುವ ಸಂಸತ್ ಉತ್ಸವದ ವರ್ಚುವಲ್​ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಆರಂಭದಲ್ಲೇ ರಾಷ್ಟ್ರೀಯ ಯುವ ದಿನಾಚರಣೆ ಶುಭಕೋರಿದರು. ನಂತರ ಇವತ್ತಿನ ದಿನ ಎಲ್ಲರಿಗೂ ಸ್ಫೂರ್ತಿ ನೀಡುತ್ತದೆ. ವಿವೇಕಾನಂದರು ನಮಗೆಲ್ಲ ಪ್ರೇರಣೆಯಾಗಿದ್ದಾರೆ. ಅವರು ಹೇಳಿದಂತೆ ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ ಎಂದರು.
ಇದನ್ನೂ ಓದಿರಿ:ಟ್ರಂಪ್​ ಟ್ವಿಟ್ಟರ್​ ಖಾತೆ ಸ್ಥಗಿತವಾಗೋಕೆ ಕಾರಣರಾದ ಭಾರತೀಯ ಮೂಲದ ಮಹಿಳೆ ಇವರೇ..
ಮುಂದವರಿದು ಮಾತನಾಡಿದ ಅವರು ಸಂವಿಧಾನದ ರಚನೆಗೆ ಸಾಕ್ಷಿಯಾದ ಸಂಸತ್ತಿನ ಕೇಂದ್ರ ಹಾಲ್​ನಲ್ಲಿ ಯುವ ಸಂಸತ್ ಉತ್ಸವ ನಡೆಯುತ್ತಿರುವುದು ಈ ದಿನದ ಮಹತ್ವವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಟ್ವೀಟ್​ ಮೂಲಕ ಶುಭಕೋರಿದ ಪ್ರಧಾನಿ, ಸ್ವಾಮಿ ವಿವೇಕಾನಂದರ ಮಹಾನ್ ಆದರ್ಶಗಳಿಂದ ಮತ್ತು ಯುವ ಸಬಲೀಕರಣದ ದೃಷ್ಟಿಯಿಂದ ಪ್ರೇರಿತರಾದ ರಾಷ್ಟ್ರೀಯ ಯುವ ಸಂಸತ್ತಿನ ಉತ್ಸವವು ದೇಶದ ಯುವಕರಿಗೆ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ಒಂದು ವೇದಿಕೆಯನ್ನು ನೀಡುತ್ತದೆ. ಇದು ಯುವಕರಲ್ಲಿ ‘ಏಕ್ ಭಾರತ್, ಶ್ರೇಷ್ಠ ಭಾರತ್’ ಮನೋಭಾವವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ.(ಏಜೆನ್ಸೀಸ್​)
Inspired by the great ideals of Swami Vivekananda and his vision for youth empowerment, the National Youth Parliament Festival gives a platform to India’s youth to showcase their skills. It also furthers the spirit of ‘Ek Bharat, Shreshtha Bharat’ among youngsters.
— Narendra Modi (@narendramodi)January 11, 2021

ಯುವ ಹವಾ: ಗ್ರಾಮ ಪಂಚಾಯಿತಿಗಳಲ್ಲಿ ಯುವಕಲರವ

ಪುಣೆಯಿಂದ ಮೂರು ಟ್ರಕ್​ನಲ್ಲಿ ಹೊರಟಿವೆ ಕೋವಿಡ್​ ಲಸಿಕೆ: ರಾಜ್ಯಕ್ಕೆ ಎಷ್ಟು ಸಿಗಲಿದೆ ಗೊತ್ತಾ?

ಲಸಿಕೆಗೆ ಭಾರತ ಸನ್ನದ್ಧ; ಆದ್ಯತೆಗೆ ಸೇರದ ಜನಪ್ರತಿನಿಧಿಗಳು | ಮೊದಲ ಹಂತಕ್ಕೆ ಕೇಂದ್ರದ್ದೇ ವೆಚ್ಚ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:15 + eighteen =
Remember me
