ಕೋಲ್ಕತ:ಪಶ್ಚಿಮ ಬಂಗಾಳದ ಮುರ್ಷಿದಾಬಾದ್​ ಜಿಲ್ಲೆಯಲ್ಲಿ ದುಷ್ಕರ್ಮಿಗಳು ಸ್ವಾಮಿ ವಿವೇಕಾನಂದ ಪ್ರತಿಮೆ ನಾಶ ಮಾಡಿದ್ದಾರೆ. ಪ್ರತಿಮೆಯ ಕೈ ಮುರಿದುಬಿದ್ದಿದ್ದು, ಅದರ ಮುಖವನ್ನೂ ವಿರೂಪಗೊಳಿಸಿರುವ ವಿಡಿಯೋ, ಫೊಟೋಗಳು ವೈರಲ್ ಆಗಿವೆ.
ಈ ಪ್ರತಿಮೆಯು ಮುರ್ಷಿದಾಬಾದ್ ಜಿಲ್ಲೆಯ ಬಾರಾಂಚ ಪ್ರದೇಶದಲ್ಲಿರುವ ಮಾ ಶಾರದಾ ನಾನಿ ದೇವಿ ಶಿಶು ಶಿಕ್ಷಾ ಕೇಂದ್ರದ ಸಮೀಪದಲ್ಲಿದೆ. ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಈ ಕೇಂದ್ರದವರೇ ಸ್ಥಾಪಿಸಿದ್ದರು. ಪ್ರತಿಮೆಗೆ ಹಾನಿ ಎಸಗಿದವರು ಯಾರು ಎಂಬುದು ಪತ್ತೆಯಾಗಿಲ್ಲ.
ಈ ಸಂಬಂಧ ಬಾರಾಂಚ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಮೇ 14ರಂದು ಬಿಜೆಪಿಯ ಅಂದಿನ ಅಧ್ಯಕ್ಷ ಅಮಿತ್ ಷಾ ಅವರ ರೋಡ್ ಷೋ ಆಯೋಜನೆಗೊಂಡ ಸಂದರ್ಭದಲ್ಲಿ ಈಶ್ವರ ಚಂದ್ರ ವಿದ್ಯಾಸಾಗರರ ಪ್ರತಿಮೆಯನ್ನು ಟಿಎಂಸಿ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. (ಏಜೆನ್ಸೀಸ್)
West Bengal: A statue of Swami Vivekananda in Andi village of Murshidabad district was vandalised by unidentified persons, earlier today. Police investigation underway.pic.twitter.com/E7RfpZMpJT
— ANI (@ANI)February 21, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 4 =
Remember me
