ತಿರುವನಂತಪುರ:ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಸ್ವಪ್ನಾ ಸುರೇಶ್ ಮತ್ತು ಗ್ಯಾಂಗ್ ಜೂನ್ ಒಂದೇ ತಿಂಗಳಲ್ಲಿ 70 ಕಿಲೋ ಚಿನ್ನ ಕಳ್ಳಸಾಗಣೆ ಮಾಡಿದ್ದಾರೆ. ಆದರೆ ಈ ಕಳ್ಳಸಾಗಣೆ ಮೂರು ಪ್ರತ್ಯೇಕ ಪ್ರಕರಣಗಳ ಮೂಲಕ ನಡೆದಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಜೂನ್ ತಿಂಗಳಲ್ಲಿ ನಡೆದ ಕಳ್ಳಸಾಗಣೆಯ ಪೈಕಿ ಒಂದು ಪ್ರಕರಣದಲ್ಲಿ 33 ಕಿಲೋ ಚಿನ್ನವನ್ನು ಮಲಪ್ಪುರಂ ನಿವಾಸಿ ಸೇತಲವಿ ಹೆಸರಿನಲ್ಲಿ ತರಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಕಸ್ಟಮ್ಸ್ ಅಧಿಕಾರಿಗಳು ಸೇತಲವಿ ಮತ್ತು ಮಧ್ಯವರ್ತಿ ಅನ್ವರ್ ಅವರನ್ನು ಬುಧವಾರ ಬಂಧಿಸಿದ್ದಾರೆ. ಕಳ್ಳಸಾಗಣೆ ಮೂಲಕ ತಂದ ಚಿನ್ನ ಈಗಾಗಲೇ ಬೇರೆ ಬೇರೆ ಜುವೆಲ್ಲರಿಗಳಿಗೆ ತಲುಪಿದೆ. ಈ ಪೈಕಿ ಎಸ್​ಎಸ್​ ಜುವೆಲ್ಲರಿ ಮುಖ್ಯಸ್ಥನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡು ವಿಚಾರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!
ಏರ್​ ಪೋರ್ಟ್​ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಪೆಟ್ಟಿಗೆ ಹೊರಗೆ ತೆಗೆದುಕೊಂಡು ಹೋಗಲು ಬಿಡದೇ ಇದ್ದ ಸಂದರ್ಭದಲ್ಲಿ ಸ್ವಪ್ನಾ ಸುರೇಶ್ ಮತ್ತು ಸರಿತ್​ 13 ಸಲ ಭೇಟಿ ಮಾಡಿದ್ದರು. ಈ ಘಟನೆ ಜುಲೈ 3 ರಂದು ಏಳು ಬಾರಿ ಮತ್ತು 4 ರಂದು ಆರು ಬಾರಿ ಹಾಗೂ ಕಸ್ಟಮ್ಸ್ ಅಧಿಕಾರಿಗಳು ಚಿನ್ನದ ಪೆಟ್ಟಿಗೆ ವಶಪಡಿಸಿಕೊಂಡ ದಿನ ಒಂದು ಸಲ ಭೇಟಿಯಾಗಿದ್ದರು.
ಇದನ್ನೂ ಓದಿ:ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!
ಜುಲೈ 5ರಂದು ಬೆಳಗ್ಗೆ ಚಿನ್ನದ ಪೆಟ್ಟಿಗೆ ಬಿಡಿಸಿಕೊಂಡು ಬರುವುದಕ್ಕೆ ಸರಿತ್​ ವಿಮಾನ ನಿಲ್ದಾಣಕ್ಕೆ ತೆರಳಿದ್ದ. ಇದೇ ವೇಳೆ, ಆತ ಅಲ್ಲಿ ಬಂಧಿಸಲ್ಪಟ್ಟಿದ್ದ. ಸ್ವಪ್ನಾ ಸುರೇಶ್ ಆಗ ಸೆಕ್ರಟೇರಿಯೆಟ್ ಸಮೀಪ ಇರುವ ವಿವಾದಿತ ಫ್ಲ್ಯಾಟ್​ಗೆ ತೆರಳಿದ್ದಾಳೆ. ಅಲ್ಲಿ ಆಕೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 12.30 ರ ತನಕ ಹಲವರಿಗೆ ಫೋನ್ ಮಾಡಿದ್ದಳು. ಸರಿತ್ ಬಂಧನದ ಸುದ್ದಿ ಬಂದ ಕೂಡಲೇ ಆಕೆ ಅಲ್ಲಿಂದ ಅಂಬಲಮುಕ್ಕು ಎಂಬಲ್ಲಿರುವ ಫ್ಲ್ಯಾಟ್​​ಗೆ ಹೋಗಿದ್ದಾಳೆ ಎಂಬ ಅಂಶವನ್ನು ಆಕೆಯ ಫೋನ್ ಲೊಕೇಷನ್ ದೃಢೀಕರಿಸಿವೆ ಎಂದು ಮೂಲಗಳು ತಿಳಿಸಿವೆ. (ಏಜೆನ್ಸೀಸ್)
ಕೇರಳದ ಬಂಗಾರಿ ಬೆಂಗಳೂರಿನಲ್ಲಿ ಅರೆಸ್ಟ್​: ಸ್ವಪ್ನಾ ಸುರೇಶ್ ಎನ್​ಐಎ ಕಸ್ಟಡಿಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 11 =
Remember me
