ಬೆಂಗಳೂರು:ಕೇರಳದ 30 ಕಿಲೋ ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಮತ್ತು ಸಂದೀಪ್ ನಾಯರ್​ನನ್ನು ಬೆಂಗಳೂರಿನಲ್ಲಿ ಇಂದು ಬಂಧಿಸಲಾಗಿದ್ದು, ನ್ಯಾಷನಲ್ ಇನ್​ವೆಸ್ಟಿಗೇಷನ್​ ಏಜೆನ್ಸಿ ಅವರನ್ನು ತನ್ನ ಕಸ್ಟಡಿಗೆ ತೆಗೆದುಕೊಂಡಿದೆ.
ತಿರುವನಂತಪುರ ಇಂಟರ್​ನ್ಯಾಷನಲ್ ಏರ್​ಪೋರ್ಟ್​ನಲ್ಲಿ ಡಿಪ್ಲೋಮ್ಯಾಟಿಕ್ ಲಗೇಜ್​ ಮೂಲಕ 30 ಕಿಲೋ ಚಿನ್ನವನ್ನು ಕಳ್ಳಸಾಗಣೆ ಮೂಲಕ ಸಾಗಿಸುವ ಪ್ರಯತ್ನ ವಿಫಲವಾಗಿ ಕೇರಳದಲ್ಲಿ ರಾಜಕೀಯ ತಲ್ಲಣ ಸೃಷ್ಟಿಸಿದ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಪ್ರಮುಖ ಆರೋಪಿ. ಈಕೆ ಯುಎಇ ಕಾನ್ಸುಲೇಟ್​ನ ಮಾಜಿ ಉದ್ಯೋಗಿ. ಈ ಪ್ರಕರಣದಲ್ಲಿ ಎನ್​ಐಎ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
ಇದನ್ನೂ ಓದಿ:ಚಿನ್ನದ ರಾಣಿಯ ಮನೆಯಲ್ಲಿ ಪಾರ್ಟಿ ಮಾಡುತ್ತಿದ್ದ ಹಿರಿಯ ಅಧಿಕಾರಿಗಳು!
ಶನಿವಾರ ಸಂಜೆ ಸ್ವಪ್ನಾ ಮತ್ತು ಸಂದೀಪ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿರುವ ಎನ್​ಐಎ ಅಧಿಕಾರಿಗಳು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಇನ್ನೋರ್ವ ಆರೋಪಿ ಫೈಜಲ್​ ಫರೀದ್​ ಎರ್ನಾಕುಲಂ ಕಳ್ಳಸಾಗಣೆಯ ಇನ್ನೊಬ್ಬ ಆರೋಪಿ. ಈತ ತಲೆಮರೆಸಿಕೊಂಡಿದ್ದು ದುಬೈಗೆ ಹೋಗಿರುವ ಶಂಕೆ ಇದೆ. ಸರಿತ್ ಎಂಬ ಮತ್ತೊಬ್ಬ ಆರೋಪಿಯನ್ನೂ ಪೊಲೀಸರು ಬಂಧಿಸಿದ್ದಾರೆ. (ಏಜೆನ್ಸೀಸ್)
ಸ್ವಪ್ನಾ ಸುರೇಶ್ ವಿರುದ್ಧ ಉಗ್ರ ಚಟುವಟಿಕೆಗೆ ನಿಧಿ ಸಂಗ್ರಹದ ಆರೋಪ: ಎನ್​ಐಎ ಹೊಸ ಎಫ್​ಐಆರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − eleven =
Remember me
