ಕೊಚ್ಚಿ:ಕೇರಳ ಚಿನ್ನ ಕಳ್ಳಸಾಗಣೆಯ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್​ ಅದೆಷ್ಟು ಪ್ರಭಾವಶಾಲಿಯಾಗಿದ್ದರು ಎಂಬುದಕ್ಕೆ ಪ್ರಬಲ ಪುರಾವೆಯೊಂದು ಸಿಕ್ಕಂತಾಗಿದೆ.ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸ್ವಪ್ನಾ ಸುರೇಶ್​ಗೆ ಸೇರಿದ ಬ್ಯಾಂಕ್​ ಎರಡು ಖಾತೆಗಳಿಂದ ಅಂದಾಜು ಒಂದು ಕೋಟಿ ರೂ. ನಗದು ಹಾಗೂ ಒಂದು ಕೆ.ಜಿ ಚಿನ್ನ ವಶಪಡಿಸಿಕೊಳ್ಳಲಾಗಿತ್ತು.
ಇದರ ಮೂಲವೀಗ ಪತ್ತೆಯಾಗಿದೆ. ಬ್ಯಾಂಕ್​ ಖಾತೆಯಲ್ಲಿದ್ದ ಒಂದು ಕೋಟಿ ರೂ. ಸರ್ಕಾರದ ಯೋಜನೆಗೆ ಕಾರ್ಯ ನಿರ್ವಹಿಸಿದ್ದಕ್ಕಾಗಿ ಪಡೆದ ಕಮೀಷನ್​ ಆಗಿತ್ತು ಎಂದು ಹೇಳಿದ್ದಾಳೆ.
ಇದನ್ನೂ ಓದಿ;ಶ್ರೀಲಂಕಾದಲ್ಲಿ ಪೂರ್ಣಪ್ರಮಾಣದಲ್ಲಿ ಶುರುವಾಗಿವೆ ಶಾಲೆಗಳು; ನಿಯಮಗಳು ಹೀಗಿವೆ….
ಲೈಫ್​ ಮಿಷನ್​ ಪ್ರಾಜೆಕ್ಟ್​ ಎಂಬುದು ಕೇರಳ ಸರ್ಕಾರದ ಪ್ರಮುಖ ಯೋಜನೆಯಾಗಿದೆ. ರಾಜ್ಯದ ಭೂರಹಿತರು ಹಾಗೂ ವಸತಿರಹಿತ ಕುಟುಂಬದವರಿಗಾಗಿ ರೂಪಿಸಿದ್ದ ಯೋಜನೆಯಾಗಿದ್ದು, ಇಂಥವರಿಗೆ ಮನೆ ಕಟ್ಟಿ ಕೊಡಲಾಗುತ್ತದೆ. ಈ ಯೋಜನೆಗೆ ತಾನು ಏಜೆಂಟ್​ ಆಗಿ ಕಾರ್ಯ ನಿರ್ವಹಿಸಿದ್ದು, ಅದಕ್ಕಾಗಿ ಪಡೆದ ಹಣ ಬ್ಯಾಂಕ್​ ಲಾಕರ್​ನಲ್ಲಿತ್ತು ಎಂದು ತನಿಖಾಧಿಕಾರಿಗಳಿಗೆ ಸ್ವಪ್ನಾ ಹೇಳಿಕೆ ನೀಡಿದ್ದಾಳೆ.
ಸ್ವಪ್ನಾಳ ಈ ಹೇಳಿಕೆ ಈಗ ಮತ್ತೊಮ್ಮೆ ಪಿಣರಾಯಿ ವಿಜಯನ್​ ಸರ್ಕಾರಕ್ಕೆ ಸಂಕಷ್ಟ ತಂದೊಡ್ಡಿದೆ. ಏಕೆಂದರೆ, ಈ ಯೋಜನೆ ಅವರ ನೇತೃತ್ವದಲ್ಲಿಯೇ ನಡೆಯುತ್ತಿತ್ತು ಹಾಗೂ ಇದಕ್ಕಾಗಿ 20 ಕೋಟಿ ರೂ. ಧನಸಹಾಯ ಪಡೆಯಲು ಸಿಎಂ ಯುಎಇಗೆ ಪ್ರಯಾಣಿಸಿದ್ದರು.
ಇದನ್ನೂ ಓದಿ;ದೀಪಾವಳಿ ವೇಳೆಗೆ 70 ಸಾವಿರ ರೂ.ಗೆ ತಲುಪುತ್ತೆ ಚಿನ್ನದ ಬೆಲೆ; ಬೇಡಿಕೆ ಕುಸಿದಿದ್ದರೂ ಆಗಸಕ್ಕೇಕೆ ಮುಖ ಮಾಡಿದೆ ಹಳದಿ ಲೋಹ
ಮಹತ್ವದ ವಿಚಾರವೆಂದರೆ, ಇದಕ್ಕೂ ಮುನ್ನ ಸ್ವಪ್ನಾ ಸುರೇಶ್​ ಹಾಗೂ ಅಮಾನತುಗೊಂಡಿರುವ ಐಟಿ ಕಾರ್ಯದರ್ಶಿ ಎಂ. ಶಿವಶಂಕರನ್​ ಯುಎಇಗೆ ತೆರಳಿದ್ದರು. ಈ ವಿಚಾರವಾಗಿ ಸಿಎಂ ಶುದ್ಧಹಸ್ತರಾಗಿ ಹೊರಹೊಮ್ಮಬೇಕು ಎಂದು ಕಾಂಗ್ರೆಸ್​ ಆಗ್ರಹಿಸಿದೆ.
ನೂರು ದಿನಗಳಿಂದ ಒಂದೂ ಕರೊನಾ ಕೇಸಿಲ್ಲ; ಜಗತ್ತೇ ನಿಬ್ಬೆರಗಾಗಿದೆ ಈ ಸಾಧನೆಗೆ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
