ಜೆಡ್ಡಾ:ಸ್ವಸ್ತಿಕ ಚಿಹ್ನೆಯೂ ಭಾರತೀಯರ ಪಾಲಿಗೆ ಮಂಗಳಕರವಾಗಿದ್ದು ಹಿಂದೂ ಧರ್ಮದಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಸಾಮಾನ್ಯವಾಗಿ ಹೊಸ ವಾಹನ ಹಾಗೂ ಗೃಹಪ್ರವೇಶದ ಸಮಯದಲ್ಲಿ ಮನೆಯ ದ್ವಾರದ ಮೇಲೆ ಮುದ್ರಿಸಲಾಗುತ್ತದೆ.
ಇದೀಗ ಇದೇ ಸ್ವಸ್ತಿಕ್​​ ಚಿಹ್ನೆಯೂ ಭಅರಥಿಯ ಮೂಲದವರಿಗೆ ಕಂಟಕವಾಗಿದ್ದು ಸಹಾಯಕ್ಕಾಗಿ ಕುಟುಂಬಸ್ಥರು ಅಂಗಲಾಚುತ್ತಿದ್ದಾರೆ.
ವೃತ್ತಿಯಲ್ಲಿ ಇಂಜಿನಿಯರ್​ ಆಗಿರುವ ಗುಂಟೂರು ಮೂಲದ ಅರವಿಂದ್​ ಇತ್ತೀಚಿಗೆ ಸೌದಿ ಅರೇಬಿಯಾದಲ್ಲಿರುವ ಪೂರ್ವ ಪ್ರಾಂತ್ಯಕ್ಕೆ ತಮ್ಮ ಫ್ಲ್ಯಾಟ್​ಅನ್ನು ಬದಲಾಯಿಸಿದ್ದರು.
ತಮ್ಮ ಮನೆಯ ಬಾಗಿಲಿನ ಮೇಲೆ ಸ್ವಸ್ತಿಕ್​ ಚಿಹ್ನೆಯನ್ನು ಸಹ ಬರದು ತಮ್ಮ ಹೊಸ ಮೆನೆಗೆ ಅಡಿಯಿಟ್ಟು ಜೀವನವನ್ನ ಪ್ರಾರಂಭಿಸಿದ್ದರು.
ನೆರೆಯ ಮನೆಯಲ್ಲಿ ವಾಸವಿದ್ದ ಅರಬ್​ ವ್ಯಕ್ತಿ ಇದನ್ನು ತಪ್ಪಾಗಿ ಗ್ರಹಿಸಿ ತಮ್ಮ ಮನೆಯ ಬಾಗಿಲಿನ ಮೇಲೆ ನಾಜಿ ಲಾಂಛನವನ್ನು ಬರೆದಿದ್ದಾರೆ ಎಂದು ಆರೋಪಿಸಿ ಗಲಾಟೆ ಮಾಡಿದ್ದಾನೆ.
ಆದರೆ, ವಾಸ್ತಾವಾಂಶದಲ್ಲಿ ನಾಜಿ ಲಾಂಛನವೂ ಸ್ವಸ್ತಿಕ್​ ಚಿಹ್ನೆಗಿಂತ ಭಿನ್ನವಾಗಿದ್ದು ಇದರ ಬಗ್ಗೆ ಅರಬ್​ ವ್ಯಕ್ತಿಗೆ ವ್ಯತ್ಯಾಸ ತಿಳಿದು ಬಂದಿಲ್ಲ. ಈ ಕುರಿತು ಮೊದಲು ಅರವಿಂದ್​ ಹಾಗೂ ಕುಟುಂಬಸ್ಥರಿಗೆ ಲಾಂಛನವನ್ನು ಅಳಿಸುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ:VIDEO| ಕ್ಷಣಾರ್ಧದಲ್ಲೇ ಬಾಲಕನನ್ನು ರಕ್ಷಿಸಿದ ಅಂಪೈರ್​; ವ್ಯಾಪಕ ಮೆಚ್ಚುಗೆ
ಇದನ್ನು ನಿರಾಕರಿಸಿದ್ದ ಅರವಿಂದ್​ ಕುಟುಂಬಸ್ಥರು ಸಿದ್ಧಾಂತದ ಜೊತೆಗೆ ತಮಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕುಪಿತಗೊಂಡ ಅರಬ್​ ವ್ಯಕ್ತಿ ಪೊಲೀಸರ ಗಮನಕ್ಕೆ ತಂದಿದ್ದು ಅವರು ಅರವಿಂದ್​ನನ್ನು ಬಂಧಿಸಿದ್ಧಾರೆ.
ಇ ವಿಚಾರವಾಗಿ ಅರವಿಂದ್​ ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು ಯಾರಿಗೂ ನೋವು ಕೊಡುವ ಉದ್ದೇಶದಿಂದ ನಾವು ಚಿಹ್ನೆಯನ್ನುಇ ಬರೆದಿಲ್ಲ. ಅವರ ತಪ್ಪು ಗ್ರಹಿಕೆಯಿಂದ ಇಷ್ಟೆಲ್ಲಾ ಆಗಿದೆ. ದಯವಿಟ್ಟು ಅವರನ್ನು ಬಿಡಿಸಲು ಸಹಾಯ ಮಾಡಿ ಎಂದು ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗೆ ವಿನಂತಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 11 =
Remember me
