ನವದೆಹಲಿ:ಆಮ್​ ಆದ್ಮಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಂದ ಚಾರಿತ್ರ್ಯ ವಧೆ ಅಭಿಯಾನದ ನಂತರ ತನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ ಎಂದು ಎಎಪಿ ಸಂಸದೆ ಸ್ವಾತಿ ಮಲಿವಾಲ್ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಚನ್ನಗಿರಿ ಲಾಕಪ್​ ಡೆತ್​, ಠಾಣೆಗೆ ನುಗ್ಗಿ ದಾಂಧಲೆ ಪ್ರಕರಣ ತನಿಖೆ ಸಿಐಡಿಗೆ ಹಸ್ತಾಂತರ!
ಯೂಟ್ಯೂಬರ್ ಧ್ರುವ್ ರಾಠೆ ಅವರು ತಮ್ಮ ವಿರುದ್ಧ ಏಕಪಕ್ಷೀಯವಾದ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಬೆದರಿಕೆ ಕರೆಗಳು ಹೆಚ್ಚಾಗಿವೆ ಎಂದು ಎಎಪಿ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಭಾನುವಾರ ಹೇಳಿದ್ದಾರೆ.
ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ:‘ನನ್ನ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಅಂದರೆ, ಎಎಪಿ ನನ್ನ ವಿರುದ್ಧ ಚಾರಿತ್ರ್ಯ ವಧೆ, ಸಂತ್ರಸ್ತೆಯನ್ನು ಅವಮಾನಿಸುವ ಮತ್ತು ಭಾವನೆಗಳನ್ನು ಕೆರಳಿಸುವ ಅಭಿಯಾನವನ್ನು ಆರಂಭಿಸಿದ ನಂತರ ನನಗೆ ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳು ಬರುತ್ತಿವೆ. ಯೂಟ್ಯೂಬರ್ ಧ್ರುವ್ ರಾಠೆ ಅವರು ನನ್ನ ವಿರುದ್ಧ ಏಕಪಕ್ಷೀಯ ವಿಡಿಯೋವನ್ನು ಪೋಸ್ಟ್ ಮಾಡಿದ ನಂತರ ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಂಡಿತು’ ಮಲಿವಾಲ್ ಭಾನುವಾರ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ಎಎಪಿ ಏಕೆ ಯು-ಟರ್ನ್ ತೆಗೆದುಕೊಂಡಿತು?:ಧ್ರುವ್ ರಾಠಿ ಅವರ 2.5 ನಿಮಿಷಗಳ ವಿಡಿಯೋದಲ್ಲಿ ನಿರ್ಲಕ್ಷಿಸಲಾಗಿದೆ ಎನ್ನಲಾದ ಹಲವಾರು ಅಂಶಗಳನ್ನು ಸ್ವಾತಿ ಮಲಿವಾಲ್ ಪಟ್ಟಿ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಒಪ್ಪಿಕೊಂಡ ನಂತರ ಎಎಪಿ ಏಕೆ ಯು-ಟರ್ನ್ ತೆಗೆದುಕೊಂಡಿತು? ವೈದ್ಯಕೀಯ ವರದಿಯಲ್ಲಿ ಹಲ್ಲೆಯಿಂದಾದ ಗಾಯಗಳನ್ನು ಬಹಿರಂಗಪಡಿಸುತ್ತದೆ. ನಾನು ಈ ಬಗ್ಗೆ ವಿಡಿಯೋ ಬಿಡುಗಡೆ ಮಾಡಿದ್ದೆ. ಇದಾದ ನಂತರ ಆರೋಪಿಯ ಫೋನ್‍ನ್ನು ಫಾಮ್ರ್ಯಾಟ್ ಮಾಡಲಾಗಿದೆ.ಆರೋಪಿಯನ್ನು ಕೃತ್ಯ ನಡೆದ ಸ್ಥಳದಿಂದ ಬಂಧಿಸಲಾಗಿದೆ. ಭದ್ರತೆಯಿಲ್ಲದೆ ಒಂಟಿಯಾಗಿ ಮಣಿಪುರಕ್ಕೆ ಹೋದ ಮಹಿಳೆಯನ್ನು ಬಿಜೆಪಿಯಿಂದ ಹೇಗೆ ಕೊಂಡುಕೊಳ್ಳಲು ಸಾಧ್ಯ? ಈ ವಿಚಾರವನ್ನು ಧ್ರುವ ರಾಠಿ ವಿಡಿಯೋದಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಸ್ವಾತಿ ಹೇಳಿಕೊಂಡಿದ್ದಾರೆ.
ಪ್ರಚೋದಿಸಿದವರು ಯಾರು:ಅತ್ಯಾಚಾರ ಮತ್ತು ಕೊಲೆ ಬೆದರಿಕೆಗಳ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದೇನೆ. ಅವರು ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ. ಯಾವುದೇ ಸಂದರ್ಭದಲ್ಲಿ, ನನಗೆ ಏನಾದರೂ ಸಂಭವಿಸಿದರೆ, ಅದನ್ನು ಪ್ರಚೋದಿಸಿದವರು ಯಾರು ಎಂದು ನಮಗೆ ತಿಳಿದಿದೆ ಎಂದು ಸಂಸದೆ ಸ್ವಾತಿ ಮಲಿವಾಲ್ ಹೇಳಿದ್ದಾರೆ.
ಮೇ 13ರಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ನಿವಾಸದಲ್ಲಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಭವ್ ಕುಮಾರ್ ಅವರನ್ನು ಮೇ 18 ರಂದು ಬಂಧಿಸಲಾಯಿತು. ಕೇಜ್ರಿವಾಲ್‌ಗೆ ಮಾಜಿ ಆಪ್ತ ಕಾರ್ಯದರ್ಶಿಯಾಗಿರುವ ಬಿಭವ್ ಕುಮಾರ್ ಶನಿವಾರ ಜಾಮೀನು ಕೋರಿ ಸ್ಥಳೀಯ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಕೋರ್ಟ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದು, ಈ ಸಂಬಂಧ ಪ್ರತಿಕ್ರಿಯೆ ಕೇಳಿದೆ.
ಟಿ20 ವಿಶ್ವಕಪ್‌: ಅಮೆರಿಕಕ್ಕೆ ಹಾರಿದ ಟೀಂ ಇಂಡಿಯಾದ ಮೊದಲ ಬ್ಯಾಚ್: ಐಪಿಎಲ್ ಬಳಿಕ 2ನೇ ಬ್ಯಾಚ್ ಪ್ರಯಾಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
