ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಪ್ತ ಬಿಭವ್ ಕುಮಾರ್​ಗೆ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿದ ಒಂದು ದಿನದ ಬಳಿಕ ಎಎಪಿ ಸಂಸದೆ ಸ್ವಾತಿ ಮಲಿವಾಲ್​ ಅವರು ಮಂಗಳವಾರ ದ್ರೌಪದಿ ವಸ್ತ್ರಾಹರಣ ಮಾಡಲು ದುಶ್ಯಾಸನ ಪ್ರಯತ್ನಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ದೆಹಲಿ ಎಎಪಿ ಸಂಸದೆ ಸ್ವಾತಿ ಮಲಿವಾಲ್​ ಕೇವಲ ಚಿತ್ರವನ್ನು ಮಾತ್ರ ಹಂಚಿಕೊಂಡಿದ್ದು, ಬೇರೇನು ಬರೆದಿಲ್ಲ.
ಇದನ್ನೂ ಓದಿ:ಚೆನ್ನೈನ ಬಯೋ ಸಿಎನ್​ಜಿ ಘಟಕಕ್ಕೆ ಡಿಕೆಶಿ ಭೇಟಿ: ತ್ಯಾಜ್ಯ ನಿರ್ವಹಣೆ ಬಗ್ಗೆ ಮಾಹಿತಿ
ಹಿಂದೂ ಮಹಾಕಾವ್ಯ ಮಹಾಭಾರತದಲ್ಲಿ, ದುಶ್ಶಾಸನನು ದ್ರೌಪದಿಯನ್ನು ವಸ್ತ್ರಾಪಹರಣ ಮಾಡಲು ಪ್ರಯತ್ನಿಸುತ್ತಾನೆ, ಆದರೆ ಕೌರವರ ವಿರುದ್ಧದ ಯುದ್ಧದಲ್ಲಿ ಪಾಂಡವರಿಗೆ ಮಾರ್ಗದರ್ಶನ ನೀಡುವ ಕೃಷ್ಣನ ದೈವಿಕ ಹಸ್ತಕ್ಷೇಪದಿಂದ ದ್ರೌಪದಿಯನ್ನು ರಕ್ಷಿಸುತ್ತಾನೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಿವಿಲ್ ಲೈನ್ಸ್ ನಿವಾಸದಲ್ಲಿ ಬಿಭವ್ ಕುಮಾರ್ ಅವರು ಮಲಿವಾಲ್ ಮೇಲೆ ಹಲ್ಲೆ ನಡೆಸಿ, 7-8 ಬಾರಿ ಕಪಾಳಮೋಕ್ಷ ಮಾಡಿದರು, ನನ್ನ ಮೇಲೆ ಗುದ್ದಿದರು. ನನ್ನ ಎದೆ ಮತ್ತು ಸೊಂಟಕ್ಕೆ ಒದೆಯುತ್ತಾರೆ ಮತ್ತು ಉದ್ದೇಶಪೂರ್ವಕವಾಗಿ ನನ್ನ ಅಂಗಿಯನ್ನು ಎಳೆದಿದ್ದಾರೆ ಎಂದು ಕುಮಾರ್ ವಿರುದ್ಧ ಆರೋಪಿಸಿದ್ದರು.
pic.twitter.com/7vgyFuRvqK
— Swati Maliwal (@SwatiJaiHind)September 3, 2024
ಮುಖ್ಯಮಂತ್ರಿ ನಿವಾಸದಲ್ಲಿ ಹಲ್ಲೆ ನಡೆದ ಒಂದು ದಿನದ ನಂತರ, ಮೇ 14 ರಂದು ಬಿಭವ್ ಕುಮಾರ್ ವಿರುದ್ಧ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಬಿಭವ್ ಕುಮಾರ್ ಕೂಡಾ ಪ್ರತಿ-ದೂರು ದಾಖಲಿಸಿದ್ದರು. ಕೆಲವು ದಿನಗಳ ನಂತರ, ಅವರನ್ನು ಕೇಜ್ರಿವಾಲ್ ಅವರ ಮನೆಯಿಂದ ಪೊಲೀಸರು ಬಂಧಿಸಿದ್ದರು.
ಬಿಭವ್ ಕುಮಾರ್ ಅವರನ್ನು ಮತ್ತೆ ಆಪ್ತ ಸಹಾಯಕರನ್ನಾಗಿ ನಿಯೋಜಿಸಿಕೊಳ್ಳಬಾರದು ಅಥವಾ ಮುಖ್ಯಮಂತ್ರಿ ಕಚೇರಿಯಲ್ಲಿ ಯಾವುದೇ ಅಧಿಕೃತ ಹುದ್ದೆ ನೀಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಎಲ್ಲಾ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸುವವರೆಗೆ ಆರೋಪಿ ಮುಖ್ಯಮಂತ್ರಿ ನಿವಾಸಕ್ಕೆ ಪ್ರವೇಶಿಸಬಾರದು ಮತ್ತು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡದಂತೆ ನ್ಯಾಯಾಲಯ ಆದೇಶಿಸಿದೆ. ಮೇ 18 ರಂದು ಬಂಧಿತರಾಗಿದ್ದ ಕುಮಾರ್‌ಗೆ 100 ದಿನಗಳ ನಂತರ ನ್ಯಾಯಾಲಯ ಜಾಮೀನು ನೀಡಿದೆ.
ನ್ಯಾಯಾಲಯದ ತೀರ್ಮಾನವಾದಂತೆ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆ: ಸಿದ್ದರಾಮಯ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
