| ರಮೇಶ ದೊಡ್ಡಪುರ ಬೆಂಗಳೂರು
ಜಮ್ಮು ಕಾಶ್ಮೀರ ಕೊಯಲಿಷನ್ ಆಫ್ ಸಿವಿಲ್ ಸೊಸೈಟಿ (ಜೆಕೆಸಿಸಿಎಸ್) ಮುಖ್ಯಸ್ಥ ಖುರ›ಮ್ ಪರ್ವೆಜ್ ಜತೆ ಒಡನಾಟ ಹೊಂದಿರುವ ಬೆಂಗಳೂರು ನಿವಾಸಿ ಸ್ವಾತಿ ಶೇಷಾದ್ರಿ, ಜಮ್ಮು ಕಾಶ್ಮೀರದಲ್ಲಿ ಸೇನಾ ನಿಯೋಜನೆ ಸೇರಿ ಅನೇಕ ವಿಚಾರಗಳನ್ನು ವಿರೋಧಿಸುತ್ತಾ ಬಂದವರು.
ಪ್ರವಾಸೋದ್ಯಮದಿಂದ ಪರಿಸರ, ಸಂಸ್ಕೃತಿ, ಆರ್ಥಿಕತೆ ಹಾಗೂ ಸಮಾಜದ ಮೇಲಾಗುವ ಪರಿಣಾಮವನ್ನು ತಪ್ಪಿಸುವ ಘೋಷಿತ ಉದ್ದೇಶ ಹೊಂದಿರುವ ಈಕ್ವೇಷನ್ಸ್ (ಈಕ್ವಿಟೆಬಲ್ ಟೂರಿಸಂ ಆಪ್ಷನ್ಸ್) ಸ್ವಯಂಸೇವಾ ಸಂಸ್ಥೆಯ ಆರಿಯಾ ಕೊಆರ್ಡಿನೇಟರ್ ಆಗಿದ್ದಾರೆ. ಈ ಸಂಸ್ಥೆಯು ಅಂತಾರಾಷ್ಟ್ರೀಯ ಸಂಸ್ಥೆಯಾದ ‘ಎಂಡ್ ಆಫ್ ಪ್ರಾಸ್ಟಿಟ್ಯೂಷನ್, ಚೈಲ್ಡ್ ಪೋರ್ನೆಗ್ರಫಿ ಆಂಡ್ ಟ್ರಾಫಿಕಿಂಗ್ ಆಫ್ ಚಿಲ್ರ್ಡನ್​​ ಫಾರ್ ಸೆಕ್ಷುವಲ್ ಪರ್ಪೆಸಸ್(ಇಸಿಪಿಎಟಿ) ಅಧಿಕೃತ ಸದಸ್ಯನಾಗಿದ್ದು, ಪ್ರವಾಸೋದ್ಯಮದಲ್ಲಿ ಮಕ್ಕಳನ್ನು ಹಿಂಸಿಸುವುದರ ವಿರುದ್ಧ ಕೆಲಸ ಮಾಡುವ ಉದ್ದೇಶ ಹೊಂದಿದೆ.
ರಿಸರ್ಚ್​ಗೇಟ್ ಪೋರ್ಟಲ್ ಅನ್ವಯ ಸ್ವಾತಿ ಶೇಷಾದ್ರಿ 1995-97ರವರೆಗೆ ಮುಂಬೈ ವಿವಿಯಲ್ಲಿ ಬ್ಯಾಂಕಿಂಗ್ ಹಾಗೂ ಫೈನಾನ್ಸ್ ಶಿಕ್ಷಣ ಪಡೆದಿದ್ದಾರೆ, ಮುಂಬೈನ ಟಾಟಾ ಇನ್ಸ್​ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್​ನಲ್ಲಿ ಮೆಡಿಕಲ್ ಮತ್ತು ಸೈಕ್ಯಾಟ್ರಿಕ್ ಸೋಷಿಯಲ್ ವರ್ಕ್ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದಾರೆ. ನಂತರ 2008-2009ರಲ್ಲಿ ಬೆಂಗಳೂರಿನ ಕ್ರೖೆಸ್ಟ್ ವಿವಿಯಲ್ಲಿ ಸಮುದಾಯ ಸಂಘಟನೆ ಗ್ರಾಮೀಣಾಭಿವೃದ್ಧಿ ವಿಷಯದಲ್ಲಿ ಸಂದರ್ಶಕ ಬೋಧಕಿ ಹಾಗೂ 2009-10ರಲ್ಲಿ ಬೆಂಗಳೂರು ವಿವಿಯ ಸಾಮಾಜಿಕ ಕಾರ್ಯ ವಿಭಾಗದಲ್ಲಿ ಬೋಧಕಿಯಾಗಿದ್ದರು. ಕಾಶ್ಮೀರದ ಪ್ರಸಿದ್ಧ ಹಿಂದು ದೇವಾಲಯ ಅಮರನಾಥ ಯಾತ್ರೆ ಕುರಿತಂತೆ 2017ರಲ್ಲಿ ಜಮ್ಮು ಕಾಶ್ಮೀರ ಅ ಆಲಿಷನ್ ಆಫ್ ಸಿವಿಲ್ ಸೊಸೈಟಿ ಹಾಗೂ ಈಕ್ವೇಷನ್ಸ್ ಸಹಯೋಗದಲ್ಲಿ ‘ಅಮರನಾಥ್ ಯಾತ್ರಾ: ಎ ಮಿಲಿಟರೈಜ್ಡ್ ಪಿಲಗ್ರಿಮೇಜ್’ ಎಂಬ ವರದಿಯನ್ನು ಶ್ರೀನಗರದಲ್ಲಿ ಬಿಡುಗಡೆ ಮಾಡಿದ್ದರು. ಇದರ ಸಂಶೋಧನಾ ತಂಡದಲ್ಲಿ ಕುರ›ಮ್ ಪರ್ವೆಜ್ ಹಾಗೂ ಸ್ವಾತಿ ಶೇಷಾದ್ರಿ ಇದ್ದರು. ಬೆಂಗಳೂರಿನಲ್ಲೆ ಮುದ್ರಣವಾಗಿದ್ದ ವರದಿ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಬಿಡುಗಡೆಯಾಗಿತ್ತು. ಅಮರನಾಥ ಯಾತ್ರಿಗಳಿಗೆ ದೇಶದ ವಿವಿಧ ರಾಜ್ಯಗಳಿಂದ ಬಂದವರು ಸೇವೆ ಮಾಡುತ್ತಿದ್ದು, ಪ್ರವಾಸೋದ್ಯಮದಿಂದ ಸ್ಥಳೀಯ ಕಾಶ್ಮೀರಿಗಳಿಗೆ ಆದಾಯ ಅತ್ಯಲ್ಪವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಮರನಾಥ ಯಾತ್ರೆ, ಕೌಶರ್ ಯಾತ್ರೆ, ಸಿಂಧು ಯಾತ್ರೆಯಂತಹ ಹೊಸ ಯಾತ್ರೆಗಳಿಗೆ ಕೋಮು ಬಣ್ಣ ಬಳಿಯಲಾಗಿದೆ ಎಂದಿದ್ದರು. ಸ್ಥಳೀಯ ಕಾಶ್ಮೀರಿ ಪಂಡಿತರು ಆಚರಿಸುವ ಕೌಶರ್ ಯಾತ್ರೆಯನ್ನು ‘ಮೊಳಕೆಯಲ್ಲೆ ಚಿವುಟಬೇಕು’ ಎಂದು ವರದಿಯಲ್ಲಿ ತಿಳಿಸಲಾಗಿತ್ತು. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಸಂವಿಧಾನದ ಪರಿಚ್ಛೇದ 370 ತೆರವುಗೊಳಿಸಿದ ನಂತರ ಸೇನೆ ನಿಯೋಜನೆ, ಕಾನೂನು ಸುವ್ಯವಸ್ಥೆ ಕಾಪಾಡಲು ಇಂಟರ್ನೆಟ್ ಬಂದ್ ಮಾಡಿದ್ದ ಸರ್ಕಾರದ ನಿಲುವನ್ನು ಟೀಕಿಸಿದ್ದರು.
ಧನ್ವಂತರಿ: ಕರೊನಾದ ಅವಗುಣಗಳಲ್ಲಿ ಒಂದಿಷ್ಟು ಗುಣ…ಜಗತ್ತಿಗೇ ಶಿಸ್ತಿನ ಪಾಠ ಕಲಿಸಿದ ಕ್ಷಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − four =
Remember me
