ರಾಯ್ಪುರ:ನಿನಗೆ ಆಸ್ಪತ್ರೆಯಲ್ಲೇ ಇದ್ದುಇದ್ದು ಬೇಜಾರಾಗಿರಬಹುದು. ಬಾ ನಿನ್ನನ್ನು ಸುತ್ತಾಡಿಸಿಕೊಂಡು ಬರುತ್ತೇನೆ ಎಂದು 9 ವರ್ಷದ ಕೋವಿಡ್​-19 ಸೋಂಕಿತ ಬಾಲಕಿಯನ್ನು ಪೀಡಿಸಿದ ಛತ್ತೀಸ್​ಗಢದ ಆಸ್ಪತ್ರೆಯೊಂದರ ಸ್ವಚ್ಛತಾ ಕೆಲಸಗಾರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ನಾಗ್ಪುರ ಮೂಲದ ಬಾಲಕಿ ರಾಯ್ಪುರದಲ್ಲಿ ತನ್ನ ಸಹೋದರಮಾವನ ಮನೆಯಲ್ಲಿ ಇದ್ದಳು. ಈ ಸಂದರ್ಭದಲ್ಲಿ ಆಕೆ, ಆಕೆಯ ತಾಯಿ ಮತ್ತು ಸಹೋದರಿಯಲ್ಲಿ ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ಆ.2ರಂದು ಅವರನ್ನು ಖಾಸಗಿ ಆಸ್ಪತ್ರೆಯ ಕೋವಿಡ್​-ಕೇರ್​ ಕೇಂದ್ರಕ್ಕೆ ಕರೆತಂದು ದಾಖಲಿಸಲಾಗಿತ್ತು.
ಈ ಕೇಂದ್ರದಲ್ಲಿ ಸ್ವಚ್ಛತಾ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಕನ್ಹಯ್ಯ ನಿಶಾದ್​ ಆಸ್ಪತ್ರೆಗೆ ಬುಧವಾರದಿಂದ ಈ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ. ಅಂದು ಈಕೆಯ ಹಾಸಿಗೆಯ ಬಳಿ ಹೋದ ಆತ, ನಿನ್ನನ್ನು ತಿರುಗಾಡಿಸಿಕೊಂಡು ಬರುತ್ತೇನೆ ಬಾ. ಈ ಕಟ್ಟಡದ ಮಾಳಿಗೆ ಮೇಲೆ ಹೋಗೋಣ ಎಂದು ಬಾಲಕಿಯನ್ನು ಪೀಡಿಸಿದ್ದ. ಆದರೆ, ಆಕೆ ಇದಕ್ಕೆ ಒಪ್ಪಿರಲಿಲ್ಲ. ಆದರೂ ಆತ ಆಕೆಯ ಹಾಸಿಗೆ ಬಳಿಯಿಂದ ಎದ್ದುಹೋಗಿರಲಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:12 ವರ್ಷದ ಬಾಲೆಯ ಮೇಲೆ ಅತ್ಯಾಚಾರ, ಹಲ್ಲೆ, ಕಳವು ಮಾಡುವಾಗ ನೋಡಿದ್ದಕ್ಕೆ ರೇಪ್​ ಮಾಡಿದ ಎಂದ ಬಂಧಿತ
ಬಾಲಕಿಯು ಕೈಯನ್ನು ತೊಳೆಯಲು ಆಸ್ಪತ್ರೆಯ ಶೌಚಗೃಹಕ್ಕೆ ತೆರಳಿದ್ದಳು. ಆಗ ಬಕೆಟ್​ಗೆ ನೀರು ತುಂಬಿಸುವ ನೆಪದಲ್ಲಿ ಆತ ಬಾಲಕಿಯನ್ನು ಅಲ್ಲಿಗೂ ಹಿಂಬಾಲಿಸಿದ್ದ ಎನ್ನಲಾಗಿದೆ. ಶೌಚಗೃಹದಿಂದ ಹೊರಬರಲು ಬಾಲಕಿ ಮುಂದಾದಾಗ, ಆಕೆಯ ಕೈಹಿಡಿದು ಎಳೆದ ಕನ್ಹಯ್ಯ ನಿಶಾದ್​ ಆಕೆಯ ಮೇಲೆ ಅತ್ಯಾಚಾರ ಎಸಗಿದ ಎನ್ನಲಾಗಿದೆ.
ತನ್ನ ಮೇಲೆ ನಿಶಾದ್​ ಅತ್ಯಾಚಾರ ಎಸಗಿದ ವಿಷಯವನ್ನು ತನ್ನ ತಾಯಿಗೆ ತಿಳಿಸಿ, ದೂರು ಕೊಡಲು ಸಜ್ಜಾಗುತ್ತಿದ್ದಂತೆ ಆಸ್ಪತ್ರೆಯ ಸಿಬ್ಬಂದಿ ಆಕೆಯನ್ನು ತರಾತುರಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದರು. ಆದರೆ, ಕೋವಿಡ್​ ಕೇಂದ್ರದಲ್ಲಿ ನಡೆದ ಘಟನೆಯ ಬಗ್ಗೆ ತಾಯಿ ಮತ್ತು ಪುತ್ರಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ಅದು ವೈರಲ್​ ಆಗಿತ್ತು. ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.
vijayavani.net/unable-to-bear-pressure-from-lenders-couple-consume-poison/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
