ಗಾಜಿಯಾಬಾದ್, ಉತ್ತರಪ್ರದೇಶ:ದೇಶಾದ್ಯಂತ ದೀಪಾವಳಿ ಹಬ್ಬದ ಹಿನ್ನೆಲೆ ಬೀದಿ ಬೀದಿಗಳಲ್ಲಿ ಪಟಾಕಿ ಸಿಡಿಸಿ, ಹಬ್ಬವನ್ನು ಸಂಭ್ರಮಿಸಲಾಗುತ್ತಿದೆ. ಇದೇ ರೀತಿ ಸ್ವೀಟ್​ ಅಂಗಡಿಯೊಂದರ ಮುಂಭಾಗದಲ್ಲಿ ಕೆಲವರು ಪಟಾಕಿ ಹೊಡೆಯಲು ಮುಂದಾದ ವೇಳೆ ಅಂಗಡಿ ಮಾಲೀಕ ಇಲ್ಲಿ ಪಟಾಕಿ ಸಿಡಿಸಬೇಡಿ ಎಂದು ನಿರ್ಬಂಧ ಹೇರಿದ್ದಾರೆ. ಇದಕ್ಕೆ ಕುಪಿತಗೊಂಡ ಯುವಕರ ಗುಂಪೊಂದು ಆತನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಉತ್ತರಪ್ರದೇಶದ ಗಾಜಿಯಾಬಾದ್​ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಮೋದಿ ಘರ್ಜನೆಗೆ ಬ್ರೇಕ್​ ಹಾಕ್ತು ವಿಜಯೇಂದ್ರನ ರಾಜ್ಯಧ್ಯಕ್ಷ ಸ್ಥಾನ: ಎಚ್​.ಕೆ. ಪಾಟೀಲ್​
ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಉತ್ತರಪ್ರದೇಶದ ನಿವಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬುಪುರ್ ಗ್ರಾಮದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಅಂಗಡಿಯ ಮುಂದೆ ಪಟಾಕಿ ಸಿಡಿಸಬೇಡಿ ಎಂದು ಸ್ಥಳೀಯ ಸ್ವೀಟ್​ ಅಂಗಡಿ ಮಾಲೀಕ ಹೇಳಿದ್ದೇ ಈ ಗಲಾಟೆಗೆ ಕಾರಣ ಎನ್ನಲಾಗಿದೆ.
गाज़ियाबाद में दीवाली की रात हलवाई के दुकान के बाहर पटाखे फोड़ने को लेकर जमकर लाठी डंडे चले वजह थी कि हलवाई ने दुकान के सामने पटाखे फोड़ने से मना कर दिया था, वायरल वीडियो अबूपुर गांव का बताया जा रहा हैpic.twitter.com/0E5oYOiMM2
— Lavely Bakshi (@lavelybakshi)November 14, 2023

ಅಂಗಡಿ ಮುಂದೆ ಪಟಾಕಿ ಸಿಡಿಸುವುದನ್ನು ತಡೆದಿದ್ದಕ್ಕೆ ಆಕ್ರೋಶಗೊಂಡ ಕೆಲವರು ಮಾಲೀಕನನ್ನು ಬೆನ್ನಟ್ಟಿ ಕೋಲು ಮತ್ತು ಇತರೆ ವಸ್ತುಗಳಿಂದ ದೈಹಿಕ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).
ಯುವ ಪ್ರತಿಭೆಗಳ ಸಂಗಮ; ಶೀಘ್ರವೇ ’ಬೆಂಬಿಡದ ನಾವಿಕ’ ತೆರೆಗೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
