ನವದೆಹಲಿ/ಬರ್ನ್:ಕೆಲ ಭಾರತೀಯರು, ಭಾರತೀಯ ಸಂಸ್ಥೆಗಳು, ಟ್ರಸ್ಟ್​ಗಳಿಗೆ ಸ್ವಿಸ್​ಬ್ಯಾಂಕ್ ನೋಟಿಸ್ ನೀಡಿದೆ. ಭಾರತದ ಜತೆಗೆ ಬ್ಯಾಂಕ್ ಖಾತೆಯ ಮಾಹಿತಿ ಹಂಚಿಕೊಳ್ಳುವುದರ ಕುರಿತು ತಕಾರರು ಇದ್ದರೆ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಪ್ರತಿನಿಧಿಗಳನ್ನು ನೇಮಿಸುವಂತೆ ಸ್ವಿಸ್ ಸರ್ಕಾರ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೇಮನ್ ದ್ವೀಪ, ಪನಾಮಾ, ಬ್ರಿಟಿಷ್ ವರ್ಜಿನ್ ಟ್ರಸ್ಟ್​ಗಳ ಮೂಲಕ ಸ್ವಿಸ್​ಬ್ಯಾಂಕ್​ಗಳಲ್ಲಿ ಖಾತೆ ತೆರೆದು ತೆರಿಗೆ ವಂಚಿಸುವ ಮಾರ್ಗವನ್ನು ಅನೇಕರು ಕಂಡುಕೊಂಡಿದ್ದಾರೆ. ಇಂಥ ಕೆಲವು ಟ್ರಸ್ಟ್​ಗಳಿಗೂ ಸ್ವಿಸ್ ಆಡಳಿತ ನೋಟಿಸ್ ನೀಡಿ, ಮೇಲ್ಮನವಿಗೆ ಪ್ರತಿನಿಧಿಗಳನ್ನು ನೇಮಿಸಲು ಆಸಕ್ತಿ ಇದೆಯೇ ಎಂದು ಕೇಳಿದೆ. ಈ ರೀತಿ ನೋಟಿಸ್ ಪಡೆದುಕೊಂಡ ಟ್ರಸ್ಟ್​ಗಳ ಪೈಕಿ ಕೇಮನ್ ದ್ವೀಪದ ಪಿ ದೇವಿ ಮಕ್ಕಳ ಟ್ರಸ್ಟ್, ಪಿ ದೇವಿ ಟ್ರಸ್ಟ್, ದಿನೋದ್ ಟ್ರಸ್ಟ್, ಅಗರವಾಲ್ ಕುಟುಂಬ ಟ್ರಸ್ಟ್​ಗಳು ಸೇರಿವೆ. ಕೇಮನ್ ದ್ವೀಪ ಮೂಲದ ದೇವಿ ಲಿಮಿಟೆಡ್, ಭಾರತ ಮೂಲದ ಆದಿ ಎಂಟರ್​ಪ್ರೖೆಸಸ್​ಗೂ ನೋಟಿಸ್ ನೀಡಲಾಗಿದೆ.
ನೋಟಿಸ್ ಪಡೆದುಕೊಂಡ ವ್ಯಕ್ತಿಗಳಲ್ಲಿ ಅತುಲ್ ಪುಂಜ್, ಗೌತಮ್ ಖೇತಾನ್, ಸತೀಸ್ ಕಲ್ರಾ, ವಿನೋದ್ ಕುಮಾರ್ ಖನ್ನಾ, ದುಲ್ಲಭ್​ಭಯ್ ಕುರ್ನÌ ವಾಘೇಲಾ, ರೇವಾಬೆನ್ ದುಲ್ಲಭ್​ಭಯ್ ಕುರ್ನÌ ವಾಘೇಲಾ ಮತ್ತು ಬಲವಂತ್​ಕುಮಾರ್ ದುಲ್ಲಭ್​ಭಯ್ ವಾಘೇಲಾ ಇದ್ದಾರೆ. ನೋಟಿಸ್ ಪಡೆದುಕೊಂಡವರ ಪೈಕಿ ಕೆಲವರು ಮೃತರಾಗಿದ್ದು, ಅವರ ವಾರಸುದಾರರಿಗೆ ಪ್ರತಿಕ್ರಿಯಿಸುವಂತೆ ಸೂಚಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
