ನವದೆಹಲಿ:ವಿಶ್ವದ ದುಬಾರಿ ದೇಶಗಳ ಪಟ್ಟಿಯಲ್ಲಿ ಸ್ವಿಜರ್ಲ್ಯಾಂಡ್​ ಪ್ರಥಮ ಸ್ಥಾನವನ್ನು ಪಡೆದಿದ್ದರೆ, ನಾರ್ವೆ ಎರಡನೇ ಸ್ಥಾನಲ್ಲಿದ್ದು, ಭಾರತವು 130ನೇ ಸ್ಥಾನದೊಂದಿಗೆ ಇತರೆ ದೇಶಗಳಿಗಿಂತ ಅಗ್ಗವಾಗಿದೆ.
ವಸತಿ, ಬಟ್ಟೆ, ಅಂತರ್ಜಾಲ, ದಿನಸಿ ದರ, ಸಾರಿಗೆ ಮತ್ತು ಆಹಾರ ಪದಾರ್ಥಗಳು ಸೇರಿದಂತೆ ಜೀವನದ ವೆಚ್ಚವನ್ನು ಮಾನದಂಡವಾಗಿ ಇಟ್ಟುಕೊಂಡು ಸುಮಾರು 132 ರಾಷ್ಟ್ರಗಳನ್ನು ಅಧ್ಯಯನ ನಡೆಸಲಾಗಿದ್ದು, ಅದರಲ್ಲಿ ಸ್ವಿಜರ್ಲ್ಯಾಂಡ್​ ಮೊದಲನೇ ಸ್ಥಾನ ಪಡೆದುಕೊಳ್ಳುವ ಮೂಲಕ ವಿಶ್ವದ ದುಬಾರಿ ರಾಷ್ಟ್ರ ಎನಿಸಿಕೊಂಡಿದೆ. ನಾರ್ವೆ ಎರಡನೇ ರಾಷ್ಟ್ರವಾಗಿದೆ.
ಜಪಾನ್​, ದಿ ಬಹಮಾಸ್​, ಇಸ್ರೇಲ್​, ಸಿಂಗಾಪುರ​ ಮತ್ತು ದಕ್ಷಿಣ ಕೊರಿಯಾ ಜತೆಗೆ ಡೆನ್ಮಾರ್ಕ್​ ಮತ್ತು ಲಕ್ಸೆಂಬೊರ್ಗ್ ಕೂಡ ಪ್ರಮುಖ ಹತ್ತು ದೇಶಗಳ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ. ಪ್ರಮುಖ ದೇಶಗಳಾದ ಯುನೈಟೆಡ್​ ಸ್ಟೇಟ್ಸ್​ 20ನೇ ಸ್ಥಾನ ಪಡೆದಿದ್ದರೆ, ಯುನೈಟೆಡ್​ ಕಿಂಗ್​ಡಮ್​ 27ನೇ ಸ್ಥಾನದ ಮೂಲಕ ಅಮೆರಿಕಗಿಂತ ಅಗ್ಗವಾಗಿದೆ. ರಷ್ಯಾ ಮತ್ತು ಚೀನಾ ಕ್ರಮವಾಗಿ 80 ಮತ್ತು 82ನೇ ಸ್ಥಾನದಲ್ಲಿವೆ.
ತುಂಬಾ ಅಗ್ಗವಾದ ಭಾರತಒಟ್ಟು 132 ದೇಶಗಳ ಪಟ್ಟಿಯಲ್ಲಿ ಭಾರತ 130ನೇ ಸ್ಥಾನ ಪಡೆಯುವ ಮೂಲಕ ಉಳಿದೆಲ್ಲಾ ದೇಶಗಳಿಗಿಂತ ಭಾರತ ವಾಸಿಸಲು ಅಗ್ಗವಾಗಿದೆ. ಭಾರತದ ನಂತರ ಅಫ್ಘಾನಿಸ್ತಾನ (131) ಮತ್ತು ಪಾಕಿಸ್ತಾನ(132) ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿವೆ.(ಏಜೆನ್ಸೀಸ್​)

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four × three =
Remember me
