ನವದೆಹಲಿ:ಕಬಡ್ಡಿ ಪಂದ್ಯದ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಯುಕೆಯ ಡರ್ಬಿಶೈರ್​ನಲ್ಲಿ ನಡೆದಿದೆ.
ಮೂವರು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೂವರು ಗಾಯಾಳುಗಳಿಗೆ ಕತ್ತಿಯಿಂದ ಚುಚ್ಚಿ, ಗುಂಡು ಹಾರಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.
Jabardast fight erupted between Spectators in Kabaddi tournament at Derby, England.This happens when people get free Liquor and Kabaab.Then all the Punjabi's become Nawabpic.twitter.com/9Ffu9PuIwx
ಇದನ್ನೂ ಓದಿ:ಸಚಿವ ಚಲುವರಾಯಸ್ವಾಮಿ ವಿರುದ್ಧ ಪತ್ರ ಪ್ರಕರಣ; ಕೃಷಿ ಇಲಾಖೆಯ ಎಡಿ, ಎಒ ಸಿಐಡಿ ವಶಕ್ಕೆ
ಯುಕೆಯ ಡರ್ಬಿಶೈರ್​ನಲ್ಲಿರುವ ಡರ್ಬಿ ಕ್ರೀಡಾಂಗಣದಲ್ಲಿ ಸಿಖ್​ ಸಮುದಾಯಕ್ಕೆ ಸೇರಿದ ಎರಡು ತಂಡಗಳು ಕಬಡ್ಡಿ ಪಂದ್ಯವನ್ನು ಆಡುತ್ತಿದ್ದರು. ಪಂದ್ಯದ ವೇಳೆ ಉಭಯ ತಂಡಗಳ ನಡುವೆ ವಿಚಾರ ಒಂದಕ್ಕೆ ಗಲಾಟೆ ಶುರುವಾದ ಪರಿಣಾಮ ಘರ್ಷಣೆ ಏರ್ಪಟ್ಟಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೊಡೆದಾಟ ಶುರುವಾಗಿದ್ದು, ಮೂವರು ಆಟಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಯಾವ ಕಾರಣಕ್ಕೆ ಎರಡು ತಂಡಗಳ ನಡುವೆ ಘರ್ಷಣೆ ಸಂಭವಿಸಿತ್ತು ಎಂದು ತಿಳಿದು ಬಂದಿಲ್ಲ. ಘರ್ಷಣೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ. ಗಲಾಟೆಗೆ ಸಂಬಂಧಿಸಿದಂತೆ ಯಾರಾದರೂ ಪ್ರತ್ಯಕ್ಷದರ್ಶಿಗಳಿದ್ದರೆ ದಯವಿಟ್ಟು ಮುಂದೆ ಬಂದು ತನಿಖೆಗೆ ಸಹಕರಿಸಿ ಎಂದು ಪೊಲೀಸ್​ ಅಧಿಕಾರಿ ವಿನಂತಿಸಿಕೊಂಡಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
