ಇತ್ತೀಚಿನ ದಿನಗಳಲ್ಲಿಚಿತ್ರ-ವಿಚಿತ್ರ ರೀತಿಯ ಪ್ರಾಡೆಕ್ಟ್​ಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಅದರಲ್ಲಿ ಕೆಲವು ನಮ್ಮ ಗಮನಕ್ಕೆ ಬಂದರೆ, ಇನ್ನೂ ಕೆಲವು ಗಮನಕ್ಕೆ ಬಾರದಂತೆ ಹೋಗುತ್ತವೆ. ಒಂದಷ್ಟು ವಿಷಯಗಳ ಬಗ್ಗೆ ನಮಗೆ ಅರಿವು ಮೂಡವುದೇ ಈ ಸಾಮಾಜಿಕ ಜಾಲತಾಣದಿಂದ ಎಂದರೆ ಖಂಡಿತ ತಪ್ಪಾಗಲಾರದು. ಯಾಕಂದ್ರೆ, ಈ ವಿಷಯ ಕೂಡ ಎಲ್ಲರ ಗಮನಸೆಳೆದಿರುವುದು ಇದೇ ಸೋಷಿಯಲ್ ಮೀಡಿಯಾದಲ್ಲಿ ಹರಿದುಬಂದ ವರದಿ ಮೂಲಕವೇ.
ಇದನ್ನೂ ಓದಿ:ಡಿಕೆ ಸುರೇಶ್​ ವಿರುದ್ಧ ಕುಮಾರಣ್ಣನೇ ನಿಲ್ಲಬಹುದಿತ್ತಲ್ಲ, ಹೆದರಿ ಮಂಡ್ಯಕ್ಕೆ ಹೋಗಿದ್ಯಾಕೆ?
ಇತ್ತೀಚಿನ ದಿನಗಳಲ್ಲಿ ಲೈಂಗಿಕ ಅರಿವು ನಿಧಾನವಾಗಿ ಅನೇಕರಲ್ಲಿ ಮೂಡುತ್ತಿದೆ. ಅದರ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆಯುತ್ತಿದ್ದಾರೆ. ಜನರು ಈಗ ತಮ್ಮ ಕಾಳಜಿ, ನ್ಯೂನತೆಗಳು ಮತ್ತು ಅಗತ್ಯಗಳ ಬಗ್ಗೆ ಹೆಚ್ಚು ಮುಕ್ತರಾಗಿದ್ದಾರೆ. ಈ ಬೆನ್ನಲ್ಲೇ ಮಾರುಕಟ್ಟೆಯೂ ಸಹ ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ಪ್ರಾಡೆಕ್ಟ್​ಗಳನ್ನು ಜನರಿಗೆ ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಸ್ತಾರಗೊಳ್ಳುತ್ತಿವೆ. ಲೈಂಗಿಕ ವಿಷಯವನ್ನೇ ತಮ್ಮ ವ್ಯಾಪಾರದ ಮೂಲ ಬಂಡವಾಳವನ್ನಾಗಿ ಮಾಡಿಕೊಂಡ ತಮಿಳುನಾಡಿನ ಪ್ರವೀಣ್ ಕೆ.ಆರ್ ಮತ್ತು ಸಿಂಧು ಜೋಡಿ ಹೊಸದೊಂದು ಸ್ಟಾರ್ಟ್‌ಅಪ್‌ ಚಾಲ್ತಿಗೆ ತಂದಿದ್ದಾರೆ.
ಬಗೆ ಬಗೆಯ ಸೆಕ್ಸ್​ ಚಾಕೊಲೇಟ್‌ಗಳ ಶ್ರೇಣಿಯೊಂದಿಗೆ ಬ್ರ್ಯಾಂಡ್ ಅನ್ನು ಪರಿಚಯಿಸಿರುವ ಈ ಜೋಡಿ, ಕೊಕೊಲೋವ್ ಚಾಕೊಲೇಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ತಿನಿಸಿನ ಪದಾರ್ಥಗಳನ್ನು ನೈಸರ್ಗಿಕ ಕಾಮೋತ್ತೇಜಕಗಳಿಂದ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಈ ಜೋಡಿ ಬರೋಬ್ಬರಿ 15 ಲಕ್ಷ ರೂ. ಆದಾಯ ಗಳಿಸಿದೆ ಎಂದು ವರದಿಯೊಂದು ಉಲ್ಲೇಖಿಸಿದೆ,(ಏಜೆನ್ಸೀಸ್).
4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
