ಭೋಪಾಲ್​:ಸರ್ಕಾರಿ ನೌಕರರು ಇನ್ನು ಮುಂದೆ ಟಿ-ಶರ್ಟ್ಸ್​ ಹಾಗೂ ಹರಿದ ಮತ್ತು ಅಲ್ಲಲ್ಲಿ ಮಾಸಿದ ಡಿಸೈನ್​ ಇರುವ ಜೀನ್ಸ್​ ಪ್ಯಾಂಟ್​ ಅನ್ನು ಧರಿಸುವಂತಿಲ್ಲ ಎಂದು ಮಧ್ಯಪ್ರದೇಶ ಸರ್ಕಾರ ಶುಕ್ರವಾರ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ:ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ ನಿಷೇಧ: ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲು
ಹೀಗಾಗಿ ರಾಜ್ಯದ ಗ್ವಾಲಿಯರ್​ ಡಿವಿಜನ್​ ಅಧಿಕಾರಿಗಳು ಯಾವುದೇ ಕಾರಣಕ್ಕೂ ಇನ್ಮುಂದೆ ಟಿ-ಶರ್ಟ್ಸ್​, ಜೀನ್ಸ್​ ಪ್ಯಾಂಟ್​ ಧರಿಸುವುದನ್ನು ಬ್ಯಾನ್​​ ಮಾಡಿದೆ. ದಿವಿಜನಲ್​ ಕಮಿಷನರ್​ ಎಂ.ಬಿ. ಒಜಾ ಅವರು ಹೊರಡಿಸಿರುವ ಸುತ್ತೋಲೆ ಪ್ರಕಾರ ನೌಕರರು ಕಚೇರಿಯ ಅವಧಿಯಲ್ಲಿ ಘನತೆ, ಗೌರವ ಹಾಗೂ ಸಭ್ಯತೆಗೆ ತಕ್ಕ ಫಾರ್ಮಲ್​ ಉಡುಪುಗಳನ್ನೇ ಧರಿಸಬೇಕೆಂದು ಹೇಳಿದೆ.
ಜುಲೈ 20ರಂದು ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಕರೆದಿದ್ದ ಸಭೆಯಲ್ಲಿ ಮಂದ್ಸೂರ್​ ಜಿಲ್ಲೆಯ ಅಧಿಕಾರಿಯೊಬ್ಬ ಟಿ-ಶರ್ಟ್ಸ್​ ಹಾಗೂ ಜೀನ್ಸ್​ ಪ್ಯಾಂಟ್​ ಧರಿಸಿ ಬಂದಿದ್ದು, ಸಿಎಂ ಅಸಮಾಧಾನಕ್ಕೆ ಕಾರಣವಾಗಿದೆ. ಈ ಘಟನೆಯನ್ನು ರಾಜ್ಯ ಮುಖ್ಯ ಕಾರ್ಯದರ್ಶಿ ಬಲವಾಗಿ ಖಂಡಿಸಿದ್ದು, ಎಲ್ಲ ಜಿಲ್ಲೆಯ ಅಧಿಕಾರಿಗಳು ಹಾಗೂ ನೌಕರರು ಫಾರ್ಮಲ್​ ಉಡುಪಿನಲ್ಲಿಯೇ ಕಚೇರಿಗೆ ಬರಬೇಕೆಂದು ನಿರ್ದೇಶಿಸಿರುವುದಾಗಿ ಸುತ್ತೋಲೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ:ಪಂಜಾಬ್​ನ ವಿವಿಧೆಡೆ ಕಳಪೆ ಮದ್ಯ ದುರಂತ: ಪ್ರಾಣ ಕಳೆದುಕೊಂಡ್ರು 21 ಮದ್ಯಪಾನಿಗಳು
ಸರ್ಕಾರಿ ನೌಕರರು ಈ ಆದೇಶವನ್ನು ತಿರಸ್ಕರಿಸಿದ್ದಲ್ಲಿ ಕಠಿಣ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿಯೂ ಎಚ್ಚರಿಸಲಾಗಿದೆ. ಅನೇಕ ರಾಜ್ಯಗಳು ಸಹ ಈಗಾಗಲೇ ಇದೇ ಹಾದಿಯನ್ನು ತುಳಿದಿವೆ. ಕಳೆದ ವರ್ಷ ಬಿಹಾರ ಸರ್ಕಾರ ಸಹ ಇದೇ ರೀತಿಯ ಸುತ್ತೋಲೆಯನ್ನು ಹೊರಡಿಸಿತ್ತು. ತಮಿಳುನಾಡು ಸಹ ಜಾರಿಗೆ ತಂದಿದೆ. (ಏಜೆನ್ಸೀಸ್​)
ಚನ್ನರಾಯಪಟ್ಟಣ ಎಸ್​ಐ ಆತ್ಮಹತ್ಯೆ ಪ್ರಕರಣ: ಸ್ಟೋಟಕ ಹೇಳಿಕೆ ನೀಡಿದ ಮಾಜಿ ಸಚಿವ ಎಚ್​.ಡಿ. ರೇವಣ್ಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − fourteen =
Remember me
