ಅಡಿಲೇಡ್​:ಐಸಿಸಿ ಟಿ-20 ವಿಶ್ವಕಪ್​ ಟೂರ್ನಿಯಲ್ಲಿ ಬಾಂಗ್ಲಾವನ್ನು ಮಣಿಸಿ ಭಾರತ ತಂಡ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದೆ. ಬುಧವಾರ ನಡೆದ 4ನೇ ಲೀಗ್​ನಲ್ಲಿ ಟಾಸ್​ ಗೆದ್ದು ಫೀಲ್ಡಿಂಗ್​ ಆಯ್ಕೆ ಮಾಡಿಕೊಂಡ ಬಾಂಗ್ಲಾ ತಂಡ, 5 ರನ್​ಗಳ ಅಂತರದಲ್ಲಿ ಸೋಲುಂಡಿದೆ.
ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ 6 ವಿಕೆಟ್​ ಕಳೆದುಕೊಂಡ 184 ರನ್​ ಪಡೆದು ಎದುರಾಳಿ ತಂಡಕ್ಕೆ 185 ರನ್​ಗಳ ಗುರಿ ನೀಡಿತ್ತು. 186 ರನ್​ಗಳ ಬೆನ್ನಟ್ಟಿದ ಬಾಂಗ್ಲಾಪಡೆಗೆ ಮಳೆಯಿಂದಾಗಿ 2ನೇ ಇನ್ನಿಂಗ್ಸ್​ನಲ್ಲಿ 16 ಓವರ್​ಗೆ ಇಳಿಸಿ 151 ರನ್​ಗಳ ಗುರಿ ನೀಡಲಾಗಿತ್ತು. ಆದರೆ, 145 ರನ್​ ಪೇರಿಸಲಷ್ಟೇ ಸಾಧ್ಯವಾಯಿತು. ವಿರಾಟ್​ ಕೊಹ್ಲಿ ಮತ್ತು ಕೆ.ಎಲ್​.ರಾಹುಲ್​ ಸಿಡಿಸಿದ ಅರ್ಧಶತಕ ಭಾರತ ತಂಡದ ರನ್​ಗಳ ಮೊತ್ತ ಹೆಚ್ಚಿಸಿದ್ದರು.
ಟಿ20 ವಿಶ್ವಕಪ್​ನ ಟೂರ್ನಿಯ ಮೊದಲ ಮೂರು ಪಂದ್ಯದಲ್ಲಿ ಕೇವಲ 22 ರನ್​ ಗಳಿಸಿ ವೈಫಲ್ಯ ಕಂಡಿದ್ದ ಉಪನಾಯಕ ಕೆ.ಎಲ್​ ರಾಹುಲ್​, ಇಂದಿನ ಪಂದ್ಯದಲ್ಲಿ 32 ಬಾಲ್​ಗೆ 50 ರನ್​ ಪಡೆದು ಟೀಕೆ ಮಾಡುವವರಿಗೆ ಬ್ಯಾಟಿಂಗ್​ನಲ್ಲೇ ಉತ್ತರ ನೀಡಿದ್ದಾರೆ. ಕೊನೇವರೆಗೂ ಆಟವಾಡಿದ ವಿರಾಟ್​ ಕೊಹ್ಲಿ, 44 ಬಾಲ್​ಗೆ 64 ರನ್​ ಪಡೆದು ವಿಕೆಟ್​ ಉಳಿಸಿಕೊಂಡರು. ಮಿಂಚಿನ ಆಟವಾಡುತ್ತಿದ್ದ ಸೂರ್ಯಕುಮಾರ್​ ಯಾದವ್​ 16 ಬಾಲ್​ಗೆ 30 ರನ್​ ಪಡೆದು ಔಟಾದರು. ವಿರಾಟ್​ ಕೊಹ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
T20WorldCup: ಬಾಂಗ್ಲಾಗೆ 185 ರನ್​ ಗುರಿ ನೀಡಿದ ಭಾರತ, ಅರ್ಧ ಶತಕ ಸಿಡಿಸಿದ ವಿರಾಟ್​- ರಾಹುಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + ten =
Remember me
