ಘಾಜಿಯಾಬಾದ್​:ಕರೊನಾ ವೈರಸ್​ ಸೋಂಕು ತಗುಲಿರುವ ಶಂಕೆಯಲ್ಲಿ ಕ್ವಾರಂಟೈನ್​ನಲ್ಲಿ ಇಡಲಾಗಿದ್ದ ತಬ್ಲಿಘಿ ಜಮಾತ್​ನ ಸದಸ್ಯರ ಪೈಕಿ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸಿದ್ದ 6 ಸದಸ್ಯರನ್ನು ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.ಅಲ್ಲದೆ ಅಸಭ್ಯ ವರ್ತನೆ (ಐಪಿಸಿ 294), ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ನಡುವಳಿಕೆ (ಐಪಿಸಿ 354), ಅಪಾಯಕಾರಿ ಸೋಂಕಿನ ಚಿಕಿತ್ಸೆ ಪಡೆಯಲು ನಿರ್ಲಕ್ಷ್ಯ(ಐಪಿಸಿ 269) ಮತ್ತು ಅಪಾಯಕಾರಿ ಸೋಂಕು ಹರಡುವ ಸಂಚು (ಐಪಿಸಿ 270) ಆರೋಪಗಳಡಿ ಇವರೆಲ್ಲರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ದೆಹಲಿಯ ನಿಜಾಮುದ್ದೀನ್​ ಧಾರ್ಮಿಕ ಕೇಂದ್ರದಲ್ಲಿ ತಬ್ಲಿಘಿ ಜಮಾತ್​ ಆಯೋಜಿಸಿದ್ದ ಸಭೆಯಲ್ಲಿ ಇವರೆಲ್ಲರೂ ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಪಾಲ್ಗೊಂಡಿದ್ದ ನೂರಾರು ಜನರಲ್ಲಿ ಕರೊನಾ ವೈರಸ್​ ಸೋಂಕು ಪತ್ತೆಯಾಗಿತ್ತು. ಅಲ್ಲದೆ, ಕರ್ನಾಟಕ ಸೇರಿ ವಿವಿಧ ರಾಜ್ಯಗಳ 6ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದವರನ್ನು ಪತ್ತೆ ಮಾಡಿ, ಘಾಜಿಯಾಬಾದ್​ನ ಎಂಎಂಜಿ ಆಸ್ಪತ್ರೆಯ ಐಸೊಲೇಷನ್​ ವಾರ್ಡ್​ನಲ್ಲಿ ಇರಿಸಲಾಗಿತ್ತು.
ಆದರೆ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದ ಇವರು, ಕರ್ತವ್ಯನಿರತ ನರ್ಸ್​ಗಳು, ವೈದ್ಯರ ಎದುರು ಅರೆಬೆತ್ತಲೆಯಾಗಿ ಓಡಾಡಿದ್ದಲ್ಲದೆ, ಅಶ್ಲೀಲ ಸನ್ನೆಗಳನ್ನು ಮಾಡಿ, ಹಾಡುಗಳನ್ನು ಹಾಡಿ ಅಗೌರವದಿಂದ ವರ್ತಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ಪ್ರದೇಶ ಸರ್ಕಾರ ಅಸಭ್ಯವಾಗಿ ವರ್ತಿಸಿದ ಆರು ಜನರನ್ನು ದೆಹಲಿ-ಮೇರಠ್​ ಎಕ್ಸ್​ಪ್ರೆಸ್​ವೇ ಬಳಿಯ ರಾಜ್​ಕುಮಾರ್​ ಗೋಯೆಲ್​ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವ್ಯವಸ್ಥೆಗೊಳಿಸಿರುವ ಐಸೋಲೇಷನ್​ ವಾರ್ಡ್​ಗೆ ಸ್ಥಳಾಂತರಿಸಿದೆ.ಅಲ್ಲದೆ, ಘಾಜಿಯಾಬಾದ್​ನ ಹೆಚ್ಚುವರಿ ಮ್ಯಾಜಿಸ್ಟ್ರೇಟ್​ ಮತ್ತು ಎಸ್​ಎಸ್​ಪಿ ಅವರಿಗೆ ಘಟನೆಯ ಕುರಿತು ತನಿಖೆ ನಡೆಸುವಂತೆ ಸೂಚಿಸಿದೆ. ತನಿಖೆ ಆರಂಭಿಸಿರುವ ಹೆಚ್ಚುವರಿ ಮ್ಯಾಜಿಸ್ಟ್ರೇಟ್​ ಮತ್ತು ಎಸ್​ಎಸ್​ಪಿ ಪ್ರತ್ಯಕ್ಷದರ್ಶಿಗಳು ಮತ್ತು ಅಸಭ್ಯ ವರ್ತನೆಯಿಂದ ನೊಂದ ಸಂತ್ರಸ್ತೆಯರಿಂದ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ.
ತಬ್ಲಿಘಿ ಜಮಾತ್​ನ ಕಾರ್ಯಕರ್ತರ ವಿರುದ್ಧ ಕ್ರಮಕ್ಕೆ ಮುಂದಾದ ಯೋಗಿ ಸರ್ಕಾರ: ಮಹಿಳಾ ಸಿಬ್ಬಂದಿಯಿಂದ ಚಿಕಿತ್ಸೆ ಇಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 16 =
Remember me
