ನವದೆಹಲಿ:ತಬ್ಲಿಘ್​ ಇ ಜಮಾತ್​ ಆಯೋಜಿಸಿದ್ದ ಮುಸ್ಲಿಂ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡಿದ್ದವರನ್ನೆಲ್ಲ ಹುಡುಕಿ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ. ಆದರೆ ಅವರು ತೀವ್ರ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ವರದಿಯಾಗಿದೆ.
ನಿಜಾಮುದ್ದೀನ್​ ಮರ್ಕಜ್​ ಮಸೀದಿಯ ಕಟ್ಟಡದಲ್ಲಿ ಇದ್ದವರನ್ನೆಲ್ಲ ಸ್ಥಳಾಂತರಗೊಳಿಸಲಾಗಿದೆ. ಅವರಿಗೆಲ್ಲ ದಕ್ಷಿಣ ದೆಹಲಿಯ ತುಘ್ಲಕ್​ಬಾದ್​ನಲ್ಲಿರುವ ರೈಲ್ವೆ ಇಲಾಖೆಗೆ ಸೇರಿದ ಸ್ಥಳದಲ್ಲಿ ಕ್ವಾರಂಟೈನ್​ಗೆ ವ್ಯವಸ್ಥೆ ಮಾಡಲಾಗಿದೆ.
ಈ ಸ್ಥಳದಲ್ಲಿ ಸುಮಾರು 167 ಮಸ್ಲಿಮರು ಕ್ವಾರಂಟೈನ್​​ನಲ್ಲಿ ಇದ್ದಾರೆ. ಆದರೆ ಅವರ ತಪಾಸಣೆಗೆ ಹೋದ ವೈದ್ಯರು, ನರ್ಸ್​​ಗಳು, ಆರೋಗ್ಯ ಸಿಬ್ಬಂದಿ ಬಳಿ ಹೀನಾಯವಾಗಿ ವರ್ತಿಸುತ್ತಿದ್ದಾರೆ. ತಪಾಸಣೆಗೆ ಸಹಕರಿಸುತ್ತಿಲ್ಲ. ಅದರಲ್ಲೂ ಕೆಲವರಂತೂ ವೈದ್ಯರು, ಆರೋಗ್ಯ ಸಿಬ್ಬಂದಿ ಮೇಲೆ ಉಗುಳುತ್ತಿದ್ದಾರೆ. ಕಲ್ಲು ತೂರಾಟ ನಡೆಸುತ್ತಿದ್ದಾರೆ ಎಂದು ರೈಲು ಇಲಾಖೆ ವಕ್ತಾರ ಬುಧವಾರ ರಾತ್ರಿ ತಿಳಿಸಿದ್ದಾರೆ.
ನಿಜಾಮುದ್ದೀನ್​ ಮಸೀದಿ ಸದ್ಯ ಕರೊನಾ ವೈರಸ್​ ಹಾಟ್​​ಸ್ಪಾಟ್​ ಆಗಿ ಪರಿವರ್ತನೆಯಾಗಿದೆ. ಮಾ.13ರಿಂದ 15ರವರೆಗೆ ತಬ್ಲಿಘಿ ಜಮಾತ್​ ನಡೆಸಿದ್ದ ಸಭೆಯಲ್ಲಿ ಪಾಲ್ಗೊಂಡ ಹಲವರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇದುವರೆಗೆ 10 ಮಂದಿ ಮೃತಪಟ್ಟಿದ್ದಾರೆ.ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರ ಪತ್ತೆಕಾರ್ಯ ಇದೀಗ ದೇಶಾದ್ಯಂತ ಚುರುಕಾಗಿ ನಡೆಯುತ್ತಿದೆ. ಸಿಕ್ಕವರನ್ನೆಲ್ಲ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿದೆ.
ಮಸೀದಿಯ ಕಟ್ಟಡದಲ್ಲಿ ಇದ್ದ 167 ಮಂದಿಯನ್ನು ರೈಲ್ವೆ ಕಾಲನಿ ಬಳಿ ಪ್ರತ್ಯೇಕವಾಗಿ ಇಡಲಾಗಿದ್ದು, ಸ್ಥಳೀಯರಿಗೆ ಆತಂಕ ಶುರುವಾಗಿದೆ. ರೈಲ್ವೆ ಇಲಾಖೆ ಹಾಗೂ ಸ್ಥಳೀಯ ಆಡಳಿತ ಬಳಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.ಕ್ವಾರಂಟೈನ್​ನಲ್ಲಿ ಇರುವ ಮುಸ್ಲಿಮರು ವೈದ್ಯಕೀಯ ಸಿಬ್ಬಂದಿಗೆ ತೀವ್ರ ತೊಂದರೆ ಕೊಡುತ್ತಿದ್ದಾರೆ. ಏನಾದರೂ ಆಹಾರ ಕೊಟ್ಟರೆ ಅದಕ್ಕೂ ಪ್ರತಿರೋಧ ಒಡ್ಡುತ್ತಿದ್ದಾರೆ.
ವೈದ್ಯರು, ನರ್ಸ್​ಗಳು ಹತ್ತಿರ ಹೋದರೆ ಉಗುಳುತ್ತಿದ್ದಾರೆ. ಕ್ವಾರಂಟೈನ್​ ಇದ್ದಲ್ಲಿ ಬರಬೇಡಿ. ನಮಗೆ ತೊಂದರೆ ಕೊಡಬೇಡಿ ಎನ್ನುತ್ತಿದ್ದಾರೆ. ಹಾಗೇ ಎಲ್ಲಕಡೆ ಓಡಾಡುತ್ತಿದ್ದರೆ ಎಂದು ವಕ್ತಾರ ದೀಪಕ್​ ಕುಮಾರ್​ ವಿವರಿಸಿದ್ದಾರೆ.ಇಲ್ಲಿರುವವರನ್ನು ನಿಯಂತ್ರಣ ಮಾಡುವುದು ಕಷ್ಟವಾಗುತ್ತಿದೆ. ಹಾಗಾಗಿ ಸೂಕ್ತ ಭದ್ರತೆ ನೀಡಿ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್​ ಬಳಿ ಮನವಿ ಮಾಡಿದ್ದೆವು. ಹಾಗಾಗಿ ಆರು ಸಿಆರ್​ಪಿಎಫ್​ ಸಿಬ್ಬಂದಿ, ದೆಹಲಿ ಪೊಲೀಸ್​ ಪೇದೆಗಳನ್ನು ಇಲ್ಲಿ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ನಿಜಾಮುದ್ದೀನ್​ ಮಸೀದಿಯಲ್ಲಿ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ದೆಹಲಿ ನಿವಾಸಿಗಳಿಗೆ ಅಲ್ಲಿಯೇ ಹಲವು ಪ್ರದೇಶಗಳಲ್ಲಿ ಕ್ವಾರಂಟೈನ್​ ವ್ಯವಸ್ಥೆ ಮಾಡಲಾಗಿದೆ. ಆದರೆ ಸ್ಥಳೀಯರು ತುಂಬ ಆತಂಕದಲ್ಲಿದ್ದಾರೆ. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nine =
Remember me
