ದೆಹಲಿ:ನಿಜಾಮುದ್ದೀನ್ ಮಾರ್ಖಜ್​ ಕರೊನಾ ವೈರಸ್​ ಹಾಟ್​ಸ್ಫಾಟ್​ ಆಗಲು ಕಾರಣವಾದ ತಬ್ಲಿಘಿ ಜಮಾತ್​ ಸಂಘಟನೆಯ ಮುಖ್ಯಸ್ಥ ಮೌಲಾನಾ ಸಾದ್​ ಖಂಡಲ್ವಿ ಸೇರಿ ಒಟ್ಟು ಏಳು ಜನರ ಕ್ವಾರಂಟೈನ್​ ಅವಧಿ ಸೋಮವಾರ ಮುಕ್ತಾಯಗೊಂಡಿದೆ.
ಹೀಗಾಗಿ ದೆಹಲಿ ಪೊಲೀಸರು ಮೌಲಾನಾ ಸಾದ್ ಅವರನ್ನು ಶೀಘ್ರವೇ ವಿಚಾರಣೆಗೆ ಹಾಜರಾಗಲು ಹೇಳಲಿದ್ದಾರೆ ಎನ್ನಲಾಗಿದೆ.ಕರೊನಾ ವೈರಸ್ ನಿಯಂತ್ರಣಕ್ಕಾಗಿ ಮಾರ್ಚ್​ನಲ್ಲಿ ದೆಹಲಿ ಸರ್ಕಾರ ಗುಂಪುಗೂಡುವುದನ್ನು ನಿರ್ಬಂಧಿಸಿದ್ದರೂ, ಅದನ್ನು ಲೆಕ್ಕಿಸದೆ ತಬ್ಲಿಘಿ ಜಮಾತ್​ ಸಭೆ ನಡೆಸಿತ್ತು. ಅದರಲ್ಲಿ ದೇಶ-ವಿದೇಶಗಳ ಸಾವಿರಾರು ಮುಸ್ಲಿಮರು ಪಾಲ್ಗೊಂಡಿದ್ದರು. ಈಗ ಬಹುತೇಕ ಅವರಿಗೆಲ್ಲ ಕರೊನಾ ವೈರಸ್ ತಗುಲಿದೆ. ಆದರೆ ತಬ್ಲಿಘಿ ಮುಖ್ಯಸ್ಥ ಮೌಲಾನಾ ಸಾದ್ ಮಾ.28ರಿಂದಲೇ ನಾಪತ್ತೆಯಾಗಿದ್ದಾರೆ. ಅವರ ವಿರುದ್ಧ ಪೊಲೀಸರು ಎಫ್​ಐಆರ್​ ಕೂಡ ದಾಖಲಿಸಿದ್ದಾರೆ.
ಮಾ.28ರಿಂದಲೂ ನಾಪತ್ತೆಯಾಗಿರುವ ಮೌಲಾನಾ ಸಾದ್​ ತಾವು ಕ್ವಾರಂಟೈನ್​ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ. ಸಾದ್​ ಅವರು ಕ್ವಾರಂಟೈನ್​ ಅವಧಿ ಮುಗಿದ ತಕ್ಷಣ ವಿಚಾರಣೆಗೆ ಹಾಜರಾಗುತ್ತಾರೆ ಎಂದು ಏ.8ರಂದು ಅವರ ವಕೀಲರು ಹೇಳಿದ್ದರು. ಈಗ ಏ.13ರಂದು ಕ್ವಾರಂಟೈನ್​ ಮುಗಿದಿದೆ.
ಧಾರ್ಮಿಕ ಸಭೆ ಮುಗಿದ ಬಳಿಕ ದೆಹಲಿ ನಿಜಾಮುದ್ದೀನ್​ ಮರ್ಖಜ್​​ನಲ್ಲೇ ಬೀಡು ಬಿಟ್ಟಿದ್ದ ಸಾದ್ ಅವರಿಗೆ ಸ್ಥಳ ಖಾಲಿ ಮಾಡುವಂತೆ, ಅಲ್ಲಿಂದ ತೆರಳುವಂತೆ ಎರಡು ಬಾರಿ ಪೊಲೀಸರು ನೋಟಿಸ್ ನೀಡಿದ್ದರು. ಆದರೂ ಅವರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.ಮೌಲಾನಾ ಎಲ್ಲಿದ್ದಾರೆ ಎಂಬ ಬಗ್ಗೆ ಸುಳಿವಿಲ್ಲ. ಆದರೆ ಕ್ವಾರಂಟೈನ್​ ಅವಧಿ ಮುಗಿದಿದ್ದರಿಂದ ಅವರೇ ಹೇಳಿದಂತೆ ವಿಚಾರಣೆಗೆ ಆಗಮಿಸಬೇಕಾಗಿದೆ. ಈ ಬಗ್ಗೆ ದೆಹಲಿ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 5 =
Remember me
