ಲಖನೌ:ಕರೊನಾ ವೈರಸ್​ನ ಹಾಟ್​​​ಸ್ಫಾಟ್​ ಆದ ದೆಹಲಿ ನಿಜಾಮುದ್ದೀನ್​ ಮಸೀದಿಯಲ್ಲಿ ತಬ್ಲಿಘಿ ಜಮಾತ್​ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡವರನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಿನ ಕೆಲಸವಾಗಿದೆ.
ದೇಶದಲ್ಲಿ ಎಲ್ಲ ರಾಜ್ಯದಿಂದಲೂ ಮುಸ್ಲಿಮರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಹಾಗಾಗಿ ಆಯಾ ರಾಜ್ಯ ಸರ್ಕಾರಗಳು ಅಂತಹವರನ್ನು ಪತ್ತೆ ಹಚ್ಚಿ ಕ್ವಾರಂಟೈನ್​ಗೆ ಒಳಪಡಿಸುತ್ತಿದ್ದಾರೆ.
ಈ ಮಧ್ಯೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ತಬ್ಲಿಘಿ ಜಮಾತ್​ ಸಮಾವೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಭಾಗವಹಿಸಿದ್ದವರನ್ನೆಲ್ಲ ಪತ್ತೆ ಹಚ್ಚಿ ಅವರ ಮೊಬೈಲ್​ ವಶಪಡಿಸಿಕೊಳ್ಳಬೇಕು. ಅದರಲ್ಲಿ ಕಾಲ್​ ಡಿಟೇಲ್ಸ್​ ಚೆಕ್​ ಮಾಡಬೇಕು ಎಂದಿದ್ದಾರೆ.
ಕರೊನಾ ವೈರಸ್​ ತೀವ್ರವಾಗುತ್ತಿದ್ದ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ನಿರ್ಬಂಧ ವಹಿಸಿದ್ದರೂ ಅದನ್ನು ಪಾಲಿಸದ ತಬ್ಲಿಘಿ ಜಮಾತ್​ ನಿಜಾಮುದ್ದೀನ್​ ಮಸೀದಿಯಲ್ಲಿ ಮಾ.13ರಿಂದ 15ರವರೆಗೆ ಧಾರ್ಮಿಕ ಸಮಾವೇಶ ನಡೆಸಿತ್ತು. ದೇಶ ಹಾಗೂ ವಿದೇಶಗಳಿಂದ ಸುಮಾರು 3000 ಜನ ಪಾಲ್ಗೊಂಡಿದ್ದರು. ಅದೀಗ ದೊಡ್ಡ ಕರೊನಾ ವೈರಸ್ ಕೇಂದ್ರವಾಗಿ ಮಾರ್ಪಟ್ಟಿದೆ.
ಈಗ ಉತ್ತರಪ್ರದೇಶ ಸಿಎಂ ಆದಿತ್ಯನಾಥ್​, ನಿರ್ಬಂಧ ವಿಧಿಸಿದ್ದರೂ ಸಭೆ ನಡೆಸಿದ್ದಾರೆ. ಲಾಕ್​ಡೌನ್​ ಇದ್ದರೂ ಅದನ್ನು ಉದ್ದೇಶಪೂರ್ವಕವಾಗಿಯೇ ಉಲ್ಲಂಘನೆ ಮಾಡುತ್ತಿದ್ದಾರೆ. ಇದೆಲ್ಲ ವ್ಯವಸ್ಥಿತ ಪಿತೂರಿಯಾಗಿದೆ. ಆ ಜನರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ತಬ್ಲಿಘಿ ಜಮಾತ್​ನಲ್ಲಿ ಪಾಲ್ಗೊಂಡಿದ್ದವರನ್ನು ಹಿಡಿಯಬೇಕು. ಅವರ ಮೊಬೈಲ್​ಗಳನ್ನು ವಶಪಡಿಸಿಕೊಂಡು, ಯಾರಿಗೆಲ್ಲ ಕರೆ ಮಾಡಿದ್ದಾರೆ, ಇವರ ಮೊಬೈಲ್​ಗೆ ಯಾರೆಲ್ಲ ಕರೆ ಮಾಡಿದ್ದಾರೆ. ಸಂದೇಶಗಳು ಏನಿವೆ ಎಲ್ಲದನ್ನೂ ಚೆಕ್​ ಮಾಡಬೇಕು. ಹಾಗೇ ಅವರ ಬಳಿ ಏನಾದರೂ ಅನುಮಾನಾಸ್ಪದ ವಸ್ತುಗಳು ಕಂಡುಬಂದರೆ ಅದನ್ನೂ ವಶಪಡಿಸಿಕೊಳ್ಳಿ. ಆದರೆ ಸ್ವಚ್ಛತೆಯ ಕಡೆ ವಿಶೇಷ ಗಮನಕೊಡಿ. ಅವರು ವಾಸಿಸಿದ್ದ ಸ್ಥಳವನ್ನು ಶುದ್ಧಗೊಳಿಸಿ ಎಂದು ಕರೊನಾ ನಿಯಂತ್ರಣ, ಲಾಕ್​ಡೌನ್​ ನಿರ್ವಹಣೆಗಾಗಿ ರಚಿತವಾದ ಹಿರಿಯ ಪೊಲೀಸ್​ ಅಧಿಕಾರಿಗಳ ತಂಡಕ್ಕೆ ನಿರ್ದೇಶನ ನೀಡಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
