ಪಟನಾ:ದೇಶಾದ್ಯಂತ ಕರೊನಾ ಸೋಂಕು ಹರಡುತ್ತಿರುವ ತಬ್ಲಿಘಿ ಜಮಾತ್​ ಸದಸ್ಯರನ್ನು ಭಯೋತ್ಪಾದಕರಂತೆ ಕಾಣಬೇಕು….ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದವರು ಬಿಹಾರ ಮುಜಫ್ಫರ್​ನಗರದ ಎರಡು ಬಾರಿಯ ಬಿಜೆಪಿ ಸಂಸದ ಅಜಯ್​ ನಿಷಾದ್​.
ಜಮಾತ್​ನಲ್ಲಿ ಪಾಲ್ಗೊಂಡು ಸೋಂಕು ವ್ಯಾಪಿಸಲು ಕಾರಣವಾಗಿರುವ ಎಲ್ಲರನ್ನೂ ಭಯೋತ್ಪಾದಕರಂತೆ ಉಪಚರಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಗೆ ನಿಜಾಮುದ್ದೀನ್​ ಮರ್ಕಜ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೇ ಕಾರಣರಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಇದನ್ನೂ ಓದಿ;ಭಾರತದ ವೈದ್ಯಕೀಯ ರಾಯಭಾರ, 90ಕ್ಕೂ ಅಧಿಕ ರಾಷ್ಟ್ರಗಳಿಗೆ ನೆರವು
ಮದ್ರಸಾಗಳಲ್ಲಿ ಸೂಕ್ತ ಶಿಕ್ಷಣ ದೊರೆಯುತ್ತಿಲ್ಲ. ಈ ಕಾರಣಕ್ಕಾಗಿಯೇ ಯಾವುದರ ಅರಿವೂ ಇಲ್ಲದೇ ವೈರಸ್​ ಹರಡಲು ಕಾರಣರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಾವುದೇ ಕರೊನಾ ಸೋಂಕಿತರಿಲ್ಲದೇ, ಹಸಿರು ವಲಯದಲ್ಲಿದ್ದ ಮುಜಫ್ಫರ್​ನಗರ ಕ್ಷೇತ್ರದಲ್ಲಿ ಒಂದೊಂದಾಗಿ ಪ್ರಕರಣಗಳು ಕಾಣಿಸಿಕೊಳ್ಳತೊಡಗಿವೆ. ಈ ಕಾರಣದಿಂದಾಗಿ ಅಜಯ್​ ನಿಶಾದ್​ ತಬ್ಲಿಘಿಗಳ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ;ಗಳಿಸಿದ್ದನ್ನೆಲ್ಲ ವ್ಯಯಿಸಿ, ಊರು ತಲುಪಿದರೂ ಮನೆಗೆ ಸೇರಿಸಲಿಲ್ಲ ಪತ್ನಿ..!
ಮದ್ರಸಾಗಳಲ್ಲಿ ಪಂಕ್ಚರ್​ ಹಾಕುವುದನ್ನಷ್ಟೇ ಅವರಿಗೆ ಹೇಳಿಕೊಡಲಾಗುತ್ತದೆ ಎಂದು ಟೀಕಿಸಿರುವ ನಿಷಾದ್​, ಮುಗ್ಧ ಮಕ್ಕಳಿಗೆ ಮೂಲಭೂತವಾದವನ್ನಷ್ಟೇ ಬೋಧಿಸಲಾಗುತ್ತದೆ. ಅವರಿಗೆ ಸರಿಯಾದ ಶಿಕ್ಷಣ ನೀಡಲಾಗುತ್ತಿಲ್ಲ. ಜಮಾತ್​ನಲ್ಲಿ ಪಾಲ್ಗೊಂಡವರು ದೇಶದ ಸಂಕಷ್ಟದ ಸ್ಥಿತಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.
ಅಜಯ್​ ನಿಷಾದ್​ ಎರಡನೇ ಬಾರಿ ಬಜೆಪಿ ಲೋಕಸಭಾ ಸದಸ್ಯರಾಗಿದ್ದು, ಕೇಂದ್ರದ ಮಾಜಿ ಸಚಿವರಾಗಿದ್ದ ಜಯ್​ ನಾರಾಯಣ್​ ಪ್ರಸಾದ್​ ಅವರ ಪುತ್ರ.
ಕರೊನಾ ಲಸಿಕೆ ಸಂಶೋಧನೆ ಮಾಹಿತಿಗೆ ಚೀನಾ ಹ್ಯಾಕರ್​ಗಳಿಂದ ಕನ್ನ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − ten =
Remember me
