ಲಖನೌ:ಉತ್ತರ ಪ್ರದೇಶದ ಘಾಜಿಯಾಬಾದ್​ ಆಸ್ಪತ್ರೆಯಲ್ಲಿ ನಿಗಾದಲ್ಲಿರುವ ತಬ್ಲಿಘಿ ಜಮಾತ್​ನ ಕಾರ್ಯಕರ್ತರು ಅಶ್ಲೀಲ ಸಂಕೇತಗಳಲ್ಲದೆ, ಬೆತ್ತಲೆಯಾಗಿ ಆಸ್ಪತ್ರೆಯೊಳಗೆ ಅಡ್ಡಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸ್ಥಳೀಯ ಪೊಲೀಸರಿಗೆ ಘಾಜಿಯಾಬಾದ್​ ಮುಖ್ಯ ವೈದ್ಯಕೀಯ ಅಧಿಕಾರಿ ಪತ್ರವೊಂದನ್ನು ಬರೆದಿದ್ದಾರೆ. ತಬ್ಲಿಘಿ ಜಮಾತ್​ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರನ್ನು ಕರೊನಾ ಸೋಂಕು ತಗುಲಿರಬಹುದೆಂಬ ಶಂಕೆಯಿಂದ ಎಂಎಂಜಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್​ಗಳಲ್ಲಿ ನಿಗಾದಲ್ಲಿ ಇರಿಸಲಾಗಿದೆ. ಆದರೆ, ಅವರು ಪ್ಯಾಂಟ್ ಇಲ್ಲದೆ, ಬೆತ್ತಲೆಯಾಗಿ ಅಶ್ಲೀಲ ಹಾಡುಗಳನ್ನು ಕೇಳುತ್ತಾ ಮನಸೋ ಇಚ್ಛೆ ಓಡಾಡುತ್ತಿದ್ದಾರೆ. ಅವರೆಲ್ಲ ಆಸ್ಪತ್ರೆಯ ಸಿಬ್ಬಂದಿ ಜತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಆಸ್ಪತ್ರೆಯ ನರ್ಸ್​ ಸಿಬ್ಬಂದಿ ಇಂತಹ ರೋಗಿಗಳ ವಿರುದ್ಧ ದೂರು ನೀಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಹೌಸ್​ಕೀಪಿಂಗ್​ ಸಿಬ್ಬಂದಿ ಬಳಿಯೂ ಸಿಗರೇಟ್​ ಕೇಳಿದ್ದಾರೆ. ನರ್ಸ್​ಗಳಿಗೆ ಅಶ್ಲೀಲ ಸಂಕೇತವನ್ನು ತೋರಿಸಿದ್ದಾರೆ. ಇಂತಹ ಸಂದಿಗ್ಧ ಸಮಯದಲ್ಲಿ ಇಂತಹ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಾಗಿದೆ ಎಂದು ಹಿರಿಯ ವೈದ್ಯಾಧಿಕಾರಿಗಳು ಹೇಳಿದ್ದಾರೆ.(ಏಜೆನ್ಸೀಸ್​)

ತಬ್ಲಿಘಿ ಜಮಾತ್​ನ 9 ಸಾವಿರ ಕಾರ್ಯಕರ್ತರ ಕ್ವಾರಂಟೈನ್!: ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ

ತಬ್ಲಿಘಿ ಜಮಾತ್​ ಚಟುವಟಿಕೆಯಲ್ಲಿ ಪಾಲ್ಗೊಂಡ 4,200 ವಿದೇಶಿ ಪ್ರವಾಸಿಗರು ಕಪ್ಪುಪಟ್ಟಿಗೆ

ವೈದ್ಯರು ಹೇಳುವುದನ್ನು ಕೇಳಿ, ಗುಂಪುಗೂಡಬೇಡಿ: ಜಮಾತ್​ ಮುಖ್ಯಸ್ಥನ ಸಂದೇಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
