ನವದೆಹಲಿ:ಕರೊನಾ ವಿವಾದದ ಬಳಿಕ ತಲೆಮರೆಸಿಕೊಂಡಿದ್ದ ತಬ್ಲಿಘಿ ಜಮಾತ್​ನ ನಿಜಾಮುದ್ದೀನ್ ಮರ್ಕಾಜ್ ಮುಖ್ಯಸ್ಥ ಮೌಲಾನಾ ಸಾದ್​ ಸುಳಿವು ಕೊನೆಗೂ ದೊರಕಿದ್ದು, ದೆಹಲಿಯ ಜಾಕೀರ್​ ನಗರದ ಧಾರ್ಮಿಕ ಸ್ಥಳದಲ್ಲಿದ್ದ ಸಾದ್​ರನ್ನು ತಾಂತ್ರಿಕ ಕಣ್ಗಾವಲು ಸಾಧನದಿಂದ ಪೊಲೀಸರು ಬುಧವಾರ ಪತ್ತೆಹಚ್ಚಿದ್ದಾರೆ.
ಇಸ್ಲಾಮಿಕ್​​ ಸಂಘಟನೆಗೆ ಸೇರಿದ್ದ ನಿಜಾಮುದ್ದೀನ್​ ಕಾಂಪ್ಲೆಕ್ಸ್​ನಲ್ಲಿ ತಬ್ಲಿಘಿ ಜಮಾತ್​ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದಾದ ಬಳಿಕ ತಬ್ಲಿಘಿ ಜಮಾತ್​ ಕರೊನಾ ಹಾಟ್​ಸ್ಪಾಟ್​ ಆಗಿ ಹೊರಹೊಮ್ಮಿ ವಿವಾದಕ್ಕೆ ಗುರಿಯಾಗಿತ್ತು. ದೇಶವ್ಯಾಪಿ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಮೌಲಾನಾ ಸಾದ್​ ನಾಪತ್ತೆಯಾಗಿದ್ದರು. 600ಕ್ಕೂ ಹೆಚ್ಚು ಕರೊನಾ ಪ್ರಕರಣಗಳ ತಬ್ಲಿಘಿ ಜಮಾತ್​ನಿಂದ ವರದಿಯಾಗಿವೆ.
ಸದ್ಯ ಪೊಲೀಸರು ಕೈಗೆ ಸಿಕ್ಕಿಬಿದ್ದಿರುವ ಮೌಲಾನಾ ಸಾದ್​, ನಾನು ಸ್ವಯಂ ಪ್ರತ್ಯೇಕವಾಗಿದ್ದೇನೆ, ಹೀಗಾಗಿ ಪೊಲೀಸ್​ ತನಿಖೆ ಎದುರಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.
ಮೌಲಾನಾ ಸಾದ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೆಲ ದಾಖಲಾತಿಗಳು ಹಾಗೂ ಆತನ ಬಳಿಯಿರುವ ಎಲೆಕ್ಟ್ರಾನಿಕ್​​ ಸಾಧನಗಳನ್ನು ಒಪ್ಪಿಸುವಂತೆ ಕೇಳಿದ್ದಾರೆ. ಆದರೆ, ಲಾಕ್​ಡೌನ್​ನಿಂದಾಗಿ ದಾಖಲಾತಿಗಳನ್ನು ಸಲ್ಲಿಸಲು ಸಾಧ್ಯವಿಲ್ಲ ಎಂದು ಸಾದ್​ ಪರ ವಕೀಲರು ಸಮಾಜಾಯಿಷಿ ನೀಡಿದ್ದಾರೆ.
14 ದಿನಗಳ ಕ್ವಾರಂಟೈನ್​ ಬಳಿಕ ತನಿಖೆಗೆ ಸಹಕರಿಸುವಂತೆ ದೆಹಲಿ ಪೊಲೀಸರು ಮೌಲಾನಾ ಸಾದ್​ಗೆ ತಿಳಿಸಿದ್ದಾರೆ.(ಏಜೆನ್ಸೀಸ್​)
ಮೌಲಾನಾ ಸಾದ್‌ ಒಂದು ಕೋಟಿ ರೂ. ದೇಣಿಗೆ ಸುದ್ದಿ ಹಿಂದಿನ ಅಸಲಿಯತ್ತು ಫ್ಯಾಕ್ಟ್‌ ಚೆಕ್‌ನಿಂದ ಬಹಿರಂಗ

ಮಹಾಮಾರಿ ಕರೊನಾ ಸೋಂಕಿತರ ಸೇವೆಗೆ ನಿಂತ ಭಾರತ ಮೂಲದ ಇಂಗ್ಲೆಂಡ್‌ ಸುಂದರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 5 =
Remember me
