ಜೈಪುರ:1993ರ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಬ್ದುಲ್ ಕರೀಂ ತುಂಡಾನನ್ನು ಅಜ್ಮೇರ್​ನ ವಿಶೇಷ ನ್ಯಾಯಾಲಯವು ದೋಷಮುಕ್ತಗೊಳಿಸಿದೆ. ಭಯೋತ್ಪಾದನಾ ಮತ್ತು ವಿಚ್ಛಿದ್ರಕಾರಕ ಚಟುವಟಿಕೆಗಳ ತಡೆ ಕಾಯ್ದೆ (TADA) ಅಡಿ ತುಂಡಾ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಆರೋಪವನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಧಾರಗಳು ಇಲ್ಲದ ಕಾರಣ ತುಂಡಾನನ್ನು ಅಜ್ಮೇರ್​ನ ವಿಶೇಷ ನ್ಯಾಯಾಲಯವು ಪ್ರಕರಣದಿಂದ ಖುಲಾಸೆಗೊಳಿಸಿದೆ.
Ajmer, Rajasthan | TADA (Terrorist & Anti-disruptive Activities Act) court acquits 1993 serial bomb blasts' main accused Abdul Karim Tunda.
ಇದನ್ನೂ ಓದಿ:ನಿವೃತ್ತ ಐಎಎಸ್​ ಅಧಿಕಾರಿ ಶಿವರಾಂ ಬದುಕಿದ್ದಾರೆ, ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಅಳಿಯ ಪ್ರದೀಪ್ ಸ್ಪಷ್ಟನೆ
1993 ಡಿಸೆಂಬರ್‌ 5 ಮತ್ತು 6ರಂದು ಲಖನೌ, ಕಾನ್‌ಪುರ, ಹೈದರಾಬಾದ್‌, ಸೂರತ್‌ ಮತ್ತು ಮುಂಬೈ ನಗರಗಳಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ದಾವೂದ್​ ಇಬ್ರಾಹಿಂ ಆಪ್ತ ಅಬ್ದುಲ್ ಕರೀಂ ತುಂಡಾ, ಇರ್ಫಾನ್‌ ಅಲಿಯಾಸ್‌ ಪಪ್ಪು ಮತ್ತು ಹಮಿದುದ್ಧಿನ್‌ನನ್ನು ವಶಕ್ಕೆ ಪಡೆಯಲಾಗಿತ್ತು.
ಬ್ದುಲ್‌ ಕರೀಮ್‌ ತುಂಡಾ, ಇರ್ಫಾನ್‌ ಅಲಿಯಾಸ್‌ ಪಪ್ಪು ಮತ್ತು ಹಮಿದುದ್ಧಿನ್‌ ಆರೋಪಿಗಳೆಂದು ಪ‌ರಿಗಣಿಸಿ ನ್ಯಾಯಾಲಯ ವಿಚಾರಣೆ ಆರಂಭಿಸಿತ್ತು. ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಲಯ ತುಂಡಾ ದೋಷಮುಕ್ತನೆಂದು ತೀರ್ಪು ನೀಡಿದ್ದು, ಇನ್ನಿಬ್ಬರು ಆರೋಪಿಗಳಾದ ಇರ್ಫಾನ್‌ ಮತ್ತು ಹಮಿದುದ್ಧಿನ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 6 =
Remember me
