ಲವ್​​ ಕಾ ದಿ ಎಂಡ್​ ಸಿನಿಮಾದ ಮೂಲಕ ಮಾಡಿದ ನಟ ತಾಹಾ ಶಾ ಬಾದುಸ್ಷಾ ಬಾಲಿವುಡ್​​ಗೆ ಪದಾರ್ಪಣೆ ಮಾಡಿದರು, ಸಂಜಯ್ ಲೀಲಾ ಬನ್ಸಾಲಿಯವರ ಹೀರಾಮಂಡಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಪಡೆಯುವ ಮೂಲಕ ಹೆಚ್ಚು ಜನಪ್ರಿಯರಾದರು. ಚಿತ್ರರಂಗದಲ್ಲಿ ಹಲವು ವರ್ಷಗಳ ಹೋರಾಟದ ಜತೆಗೆ ಸತತ ಪ್ರಯತ್ನದ ಬಳಿಕ ಅವರಿಗೆ ಈ ಸ್ಟಾರ್​​ಡಮ್​ ಸಿಕ್ಕಿದೆ. ಹೀರಾಮಂಡಿಯಲ್ಲಿನ ಅವರ ನಟನೆಯನ್ನು ಮೆಚ್ಚಿದ ಅಭಿಮಾನಿಗಳು ತಾಹಾ ಅವರ ಸ್ಟಾರ್​ಡಮ್​ ಪ್ರಯಾಣವನ್ನು ದಿವಂಗತ ನಟ ಸುಶಾಂತ್​ ಸಿಂಗ್​ ರಜಪೂತ್​​ ಅವರಿಗೆ ಹೋಲಿಸಿದ್ದಾರೆ. ಅಲ್ಲದೆ ತಾಹಾ ಅವರನ್ನು ನ್ಯೂ ಸುಶಾಂತ್​​ ಸಿಂಗ್​​ ರಜಪೂತ್​ ಎಂದು ಕರೆದಿದ್ದಾರೆ.
ಇದನ್ನು ಓದಿ:ನಾಗಚೈತನ್ಯ ಜತೆಗಿನ ಶೋಭಿತಾ ಫೋಟೋ ವೈರಲ್​ : ಅಸಮಾಧಾನ ಹೊರಹಾಕಿದ ನೆಟ್ಟಿಗರು
ಅಭಿಮಾನಿಗಳು ಅವರನ್ನು ಸುಶಾಂತ್​ ಸಿಂಗ್​ ರಜಪೂತ್​ ಎಂದು ಕರೆದಿರುವುದರ ಬಗ್ಗೆ ಇತ್ತೀಚೆಗೆ ಮಾತನಾಡಿದ ನಟ ತಾಹಾ, ಅಭಿಮಾನಿಗಳು ನನ್ನನ್ನು ಹೊಸ ಸುಶಾಂತ್​ ಎಂದು ಕರೆದಿದ್ದಾರೆ. ಅದು ಎಷ್ಟು ಅದ್ಭುತವಾಗಿದೆ? ಯಾಕೆಂದರೆ ಸುಶಾಂತ್​​​ ಅವರಿಗೆ ಅಭಿಮಾನಿಗಳು ಎಷ್ಟು ಪ್ರೀತಿ ಕೊಟ್ಟಿದ್ದರು ಎಂಬುದು ನನಗೆ ಗೊತ್ತು. ಅವರ ನಿರೀಕ್ಷೆಗಳಿಗೆ ತಕ್ಕಂತೆ ಬದುಕಲು ಆಶಿಸುತ್ತೇನೆ ಮತ್ತು ಅದನ್ನು ಮುಂದಕ್ಕೆ ಕೊಂಡೊಯ್ಯಲು ಬಯಸುತ್ತೇನೆ ಎಂದಿದ್ದಾರೆ.
ಸುಶಾಂತ್​​ ಸಿಂಗ್​​ ಬಗ್ಗೆ ಮಾತನಾಡಿದ ತಾಹಾ, ನಾನು ಸುಶಾಂತ್ ಅವರನ್ನು ವೈಯಕ್ತಿಕವಾಗಿ ತಿಳಿದಿದ್ದೇನೆ. ಸುಶಾಂತ್​ ಸಿಂಗ್​ ಅವರು ತುಂಬಾ ತಾತ್ವಿಕ ಮತ್ತು ಬುದ್ಧಿವಂತ ವ್ಯಕ್ತಿ. ಅವರು ಪುಸ್ತಕಗಳ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದರು ಎಂದು ನೆನಪಿಸಿಕೊಂಡರು.
ಹೀರಾಮಂಡಿಯಲ್ಲಿನ ಅವರ ಪಾತ್ರಕ್ಕಾಗಿ ತಾಹಾ ಅವರನ್ನು ಅಭಿಮಾನಿಗಳು ನ್ಯಾಷನಲ್ ಕ್ರಶ್ ಎಂದು ಸಹ ಕರೆದಿದ್ದಾರೆ. ಈ ಸರಣಿಯ ಜನಪ್ರಿಯತೆಯಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಅವರ ಫಾಲೋಯಿಂಗ್ ಗಣನೀಯವಾಗಿ ಹೆಚ್ಚಾಗಿದೆ. ವೆಬ್ ಸರಣಿಯು ಬಿಡುಗಡೆಯಾಗುವ ಮೊದಲು ಇನ್​ಸ್ಟಾಗ್ರಾಮ್​ಲ್ಲಿ ಇದ್ದ 183k ಫಾಲೋವರ್ಸ್​​ ಸದ್ಯ ಸುಮಾರು 2 ಮಿಲಿಯನ್​​ಗೆ ಏರಿದೆ. (ಏಜೆನ್ಸೀಸ್​​)
ಹೊಸ ದಾಖಲೆ ಸೃಷ್ಟಿಸಿದ ನೋಟಾ : ಅಭ್ಯರ್ಥಿಗಳನ್ನು ತಿರಸ್ಕರಿಸಿದ 2 ಲಕ್ಷಕ್ಕೂ ಹೆಚ್ಚು ಮತದಾರರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eleven =
Remember me
