ಭೋಪಾಲ್‌ (ಮಧ್ಯಪ್ರದೇಶ):ಕೋರ್ಟ್‌ಗಳಲ್ಲಿ ಕೆಲವೊಮ್ಮೆ ಚಿತ್ರ ವಿಚಿತ್ರ ಕೇಸ್‌ಗಳೂ ದಾಖಲಾಗುತ್ತವೆ ಎನ್ನುವುದಕ್ಕೆ ಉದಾಹರಣೆಯೊಂದು ಇಲ್ಲಿದೆ.
ಹೊಲಿಯಲು ಕೊಟ್ಟಿರುವ ಅಂಡರ್‌ವೇರ್‌ ಚಿಕ್ಕದಾಯಿತೆಂದು ವ್ಯಕ್ತಿಯೊಬ್ಬ ಮೊದಲು ಪೊಲೀಸ್‌ ಠಾಣೆ ನಂತರ ಕೋರ್ಟ್‌ ಮೆಟ್ಟಿಲೇರಿರುವ ಘಟನೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದಿದೆ. ಸೆಕ್ಯುರಿಟಿ ಗಾರ್ಡ್‌ ಒಬ್ಬರು ಸಲ್ಲಿಸಿರುವ ಅರ್ಜಿ ಇದಾಗಿದೆ.
ಕೃಷ್ಣಕುಮಾರ್ ದುಬೆ ಎಂಬ ಸೆಕ್ಯೂರಿಟಿ ಗಾರ್ಡ್ ಭೂಪಾಲ್‌ನಲ್ಲಿ ಕರ್ತವ್ಯದಲ್ಲಿದ್ದರು. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಅವರು ಮನೆಗೆ ವಾಪಸಾಗಿದ್ದರು. ಇದೇ ಸಂದರ್ಭದಲ್ಲಿ ತಮಗೆ ಒಳ ಉಡುಪು (ಅಂಡರ್‌ವೇರ್‌) ಹೊಲಿಸಲು ಅಲ್ಲಿಯ ಟೈಲರ್‌ ಒಬ್ಬರಿಗೆ ನೀಡಿದ್ದರು. ದುಬೆ ಅವರ ಬಳಿ ಹಣವಿಲ್ಲದ ಕಾರಣ, ಬಟ್ಟೆಯನ್ನು ತಂದು ಅದನ್ನು ಹೊಲಿಸಲು ತಮ್ಮ ಸ್ನೇಹಿತರಿಂದ ಸಾಲ ಕೂಡ ಕೇಳಿ ಪಡೆದಿದ್ದರು.
ಇದನ್ನೂ ಓದಿ:ಸೋಂಕಿತ ಮಕ್ಕಳಲ್ಲಿ ಜೀವಕಸಿಯುವ ಹೊಸ ಸಮಸ್ಯೆ- ಎಂಟು ಮಂದಿ ಬಲಿ
ಅಂಡರ್‌ವೇರ್‌ ಹೊಲಿದ ಮೇಲೆ ಅದನ್ನು ಮನೆಗೆ ಬಂದು ಹಾಕಿನೋಡಿದಾಗ ತುಂಬಾ ಚಿಕ್ಕದಾಗಿತ್ತು. ಇದರಿಂದ ದುಬೆ ಅವರ ಕೋಪ ನೆತ್ತಿಗೇರಿತು. ಟೈಲರ್‌ ಅವರ ಅಂಗಡಿಗೆ ತೆರಳಿದಾಗ ಅಲ್ಲಿ ಮಾತಿನ ಚಕಮಕಿ ನಡೆದಿದೆ. ತಾವು ಕೊಟ್ಟಿರುವ ಬಟ್ಟೆ ಎರಡು ಮೀಟರ್‌ ಇದ್ದರೂ ಟೈಲರ್‌ ಉಡುಪನ್ನು ಸರಿಯಾಗಿ ಹೊಲೆಯಲಿಲ್ಲ ಎಂದು ದುಬೆ ಅವರಿಗೆ ತಿಳಿಯುತ್ತಲೇ ಅವರು ಮೊದಲು ಪೊಲೀಸ್‌ ಠಾಣೆಗೆ ದೂರು ದಾಖಲು ಮಾಡಿದ್ದಾರೆ.
ತಾವು ನೀಡಿರುವ ಬಟ್ಟೆ 2 ಮೀಟರ್‌ ಇತ್ತು. ಆದರೆ ಅಂಡರ್‌ವೇರ್‌ ಚಿಕ್ಕದಾಗಿ ಹೊಲೆದಿದ್ದಾರೆ. ಹೊಸದಾಗಿ ಹೊಲಿದು ಕೊಡುವಂತೆ ಹೇಳಿದರೆ ಟೈಲರ್‌ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ, ಉಡುಪು ಕಟ್ಟಿಕೊಳ್ಳಲು ದಾರ ಕೂಡ ಹಾಕಿಲ್ಲ. ಆದ್ದರಿಂದ ನನಗೆ ನ್ಯಾಯ ಬೇಕು ಎಂದು ದೂರಿದ್ದರು.ಪೊಲೀಸರು ಈ ಬಗ್ಗೆ ಕೋರ್ಟ್‌ನಲ್ಲಿ ಕೇಸು ದಾಖಲು ಮಾಡು ಎಂದು ಸಲಹೆ ಕೊಟ್ಟಿದ್ದರಿಂದ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಅವರಿಗೆ ಈಗ ನ್ಯಾಯವೂ ಸಿಕ್ಕಿದೆ. ಆತನ ಹಣವನ್ನು ವಾಪಸ್‌ ನೀಡುವಂತೆ ಸ್ಥಳೀಯ ಕೋರ್ಟ್‌ ಆದೇಶಿಸಿದೆ.(ಏಜೆನ್ಸೀಸ್‌)
ವಿಶ್ವಾದ್ಯಂತ ಶೇ.6ರಷ್ಟು ಟೆಕ್ಕಿಗಳ ವಜಾಗೊಳಿಸಿದ ಸಾಫ್ಟ್‌ವೇರ್‌ ಕಂಪನಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + 3 =
Remember me
