ಉತ್ತರಪ್ರದೇಶ:ಕಟಿಂಗ್ ಹಾಗೂ ಬಟ್ಟೆಯ ಫಿಟಿಂಗ್ ಒಮ್ಮೊಮ್ಮೆ ಸಮಾಧಾನವೇ ಆಗುವುದಿಲ್ಲ. ಅದಕ್ಕೆಂದೇ ಕೆಲವರು ಒಮ್ಮೆ ಎಲ್ಲಿಯಾದರೂ ಕಟಿಂಗ್​-ಫಿಟಿಂಗ್ ಇಷ್ಟವಾಯಿತು ಎನಿಸಿದರೆ ನಂತರ ಯಾವಾಗಲೂ ಅಲ್ಲಿಗೇ ಹೋಗುತ್ತಾರೆ. ಇಲ್ಲಿ ಈತ ರೆಗ್ಯುಲರ್ ಕಸ್ಟಮರ್ ಹೌದೋ ಅಲ್ಲವೋ ಎಂಬುದು ಇನ್ನೂ ಬಹಿರಂಗವಾಗಿಲ್ಲ. ಆದರೆ ಈತ ಶರ್ಟ್ ಹೊಲಿದಿದ್ದು ಸರಿಯಾಗಿಲ್ಲ, ಸ್ಟಿಚಿಂಗ್ ಫಿಟ್​ ಎನಿಸುತ್ತಿಲ್ಲ ಎಂದು ಗಲಾಟೆ ತೆಗೆದು ಟೈಲರನ್ನೇ ಸಾಯಿಸಿಬಿಟ್ಟಿದ್ದಾನೆ.
ಟೈಲರ್ ಹಾಗೂ ಗ್ರಾಹಕ ಇಬ್ಬರ ಗಲಾಟೆಯಲ್ಲಿ, ಟೈಲರ್ ಪ್ರಾಣ ಕಳೆದುಕೊಂಡಿದ್ದಾನೆ. 65 ವರ್ಷದ ಅಬ್ದುಲ್ ಮಜಿದ್ ಖಾನ್​ ಮೃತಪಟ್ಟ ಟೈಲರ್. ಸಲೀಂ ಎಂಬಾತ ತಂದೆಯನ್ನು ಕೊಲೆ ಮಾಡಿದ್ದಾನೆ ಎಂಬುದಾಗಿ ಟೈಲರ್ ಪುತ್ರ ಅಬ್ದುಲ್​ ನಯೀಮ್​ ಖಾನ್​ ಪೊಲೀಸರಿಗೆ ದೂರು ನೀಡಿದ್ದಾನೆ.
ಇದನ್ನೂ ಓದಿ:ಮೆಸೇಜ್​ ಮಾಡುವಾಗ ಹುಷಾರು.. ಆ ಒಂದು ಪದ ಬಳಸಿದ್ದಕ್ಕೆ ಆಕೆಗೆ 2 ವರ್ಷ ಜೈಲು!
ತಾನು ಕೊಟ್ಟಿದ್ದ ಬಟ್ಟೆಯನ್ನು ಸರಿಯಾಗಿ ಹೊಲಿದಿಲ್ಲ, ಶರ್ಟ್ ಫಿಟಿಂಗ್ ಸರಿ ಇಲ್ಲ ಎಂದು ಸಲೀಮ್ ಭಾನುವಾರ ರಾತ್ರಿ ಮಜಿದ್ ಖಾನ್​ ಹತ್ತಿರ ಬಂದು ಗಲಾಟೆ ಮಾಡಿದ್ದ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತೆರಳಿ ಮಜಿದ್​ ಖಾನ್​ನ ಕತ್ತು ಹಿಸುಕಿ ಸಲೀಮ್ ಸಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಸಾವಿಗೆ ಕಾರಣ ಏನು ಎಂಬುದು ಇನ್ನೂ ನಿಖರವಾಗಿ ತಿಳಿದಿಲ್ಲ. ಈ ಬಗ್ಗೆ ಮತ್ತಷ್ಟು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)
ಮಾವನಿಂದ ಅತ್ಯಾಚಾರಕ್ಕೀಡಾಗಿದ್ದ ಸೊಸೆ ಸಾವು; ಪತಿ ಮನೆಮುಂದೆಯೇ ಅಂತ್ಯಸಂಸ್ಕಾರಕ್ಕೆ ಪಟ್ಟು…

ಅತ್ತೆ ಮಗಳಿಗಾಗಿ 64 ಲಕ್ಷ ರೂ. ಕದ್ದ!; ಆಕೆ ಗಂಡನನ್ನು ಬಿಟ್ಟಿದ್ದಳು, ಇವನು ಅವಳಿಗಾಗಿ ಹೆಂಡತಿಯನ್ನೇ ಬಿಟ್ಟು ಪರಾರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
