ಮುಂಬೈ: ಇನ್ನೇನು ಪ್ರೇಮಿಗಳ ದಿನಕ್ಕೆ ಕೆಲವೇ ಕೆಲ ದಿನಗಳು ಬಾಕಿಯುಳಿದಿವೆ. ಈ ಸಂದರ್ಭದಲ್ಲಿ ತಾಜ್ ಹೋಟೆಲ್​ ವಿಶೇಷ ಆಫರ್​ ಒಂದನ್ನು ನೀಡುತ್ತಿರುವ ಸಂದೇಶಗಳು ಹರಿದಾಡಿವೆ. ಲಕ್ಕಿ ಕಪಲ್​ಗೆ ತಾಜ್​ ಹೋಟೆಲ್​ನಲ್ಲಿ ವಾರದ ಕಾಲ ಉಚಿತವಾಗಿ ಉಳಿಯುವ ಅವಕಾಶವಿದೆ ಎನ್ನುವ ಸಂದೇಶ ಹರಿದಾಡಿದೆ. ಈ ಸಂದೇಶ ಸತ್ಯವೇ ಎನ್ನುವುದಕ್ಕೆ ಇಲ್ಲಿದೆ ಮಾಹಿತಿ.
“ನಾನು ತಾಜ್​ ಹೋಟೆಲ್​ನಲ್ಲಿ ಜ7 ದಿನ ಉಚಿತವಾಗಿ ಇರುವ ಕೂಪನ್​ ಗೆದ್ದಿದ್ದೇನೆ.” ಎನ್ನುವ ಸಂದೇಶ ವಾಟ್ಸ್​ಆ್ಯಪ್​ ತುಂಬ ಹರಿದಾಡಿದೆ. ಅದರ ಜತೆ ಒಂದು ಲಿಂಕ್​ ಕೂಡ ಇದ್ದು, ಅದನ್ನು ಕ್ಲಿಕ್​ ಮಾಡಿದರೆ ನಿಮಗೆ ಮತ್ತೊಂದು ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ 200 ಗಿಫ್ಟ್​ ಕಾರ್ಡ್​ಗಳಿದ್ದು, ಒಂದರಲ್ಲಿ ಈ ಫ್ರೀ ರೂಂ ಸೇವೆಯ ಕೂಪನ್​ ಇದೆ. ನಿಮಗೆ ಮೂರು ಚಾನ್ಸ್​ ನೀಡಲಾಗುವುದು, ನೀವು ಈ ಚಾನ್ಸ್​ ಗಳಲ್ಲಿ ಫ್ರೀ ರೂಂ ಸೇವೆಯ ಕೂಪನ್​ ತೆರೆದರೆ ನಿಮಗೆ ಆ ಸೇವೆ ಲಭ್ಯವಾಗುವುದು. ಅದಕ್ಕೆ ಮೊದಲು ನೀವು ಆ ಸಂದೇಶವನ್ನು 20 ಜನರಿಗೆ ಅಥವಾ ಐದು ವಾಟ್ಸ್​ಆ್ಯಪ್​ ಗ್ರೂಪುಗಳಿಗೆ ಕಳುಹಿಸಬೇಕು.
ಈ ರೀತಿಯ ಆಫರ್​ ಒಂದು ವೈರಲ್​ ಆಗುತ್ತಿದ್ದಂತೆಯೇ ತಾಜ್​ ಹೋಟೆಲ್​ ಈ ಬಗ್ಗೆ ಮಾತನಾಡಿದೆ. ಯಾವುದೋ ಒಂದು ನಕಲಿ ವೆಬ್​ಸೈಟ್​ ಈ ರೀತಿಯ ಸುಳ್ಳು ಸುದ್ದಿ ಹರಿಬಿಟ್ಟಿದೆ. ನಮ್ಮಲ್ಲಿ ಆ ರೀತಿಯ ಯಾವುದೇ ಆಫರ್​ನ್ನು ಕೊಡಲಾಗುತ್ತಿಲ್ಲ ಎಂದು ಸ್ಪಷ್ಟನೆ ನೀಡಿದೆ. ವ್ಯಾಲಟೈಂನ್ಸ್​ ಡೇಗೆ ತಾಜ್​ ಹೋಟೆಲ್​ನಲ್ಲಿ ನಿಮ್ಮ ಜೋಡಿಯ ಜತೆ ಇರೋದಕ್ಕೆ ಫ್ರೀ ವ್ಯವಸ್ಥೆ ಆಯ್ತು ಎಂದು ಬೀಗಿದ್ದವರಿಗೆ ಇದು ನಿರಾಸೆ ತಂದಿದೆ. (ಏಜೆನ್ಸೀಸ್​)
It has come to our notice that a website has been promoting a Valentine’s Day initiative, offering a Taj Experiences Gift Card via WhatsApp. We would like to inform that Taj Hotels/IHCL has not offered any such promotion. We request to take note of this and exercise due caution.
— Taj Hotels (@TajHotels)January 30, 2021

ಹೆಂಡತಿ-ಮಗನಿಗೆ ಗುಂಡಿಕ್ಕಿ, ಆತ್ಮಹತ್ಯೆ ಮಾಡಿಕೊಂಡ ಗಂಡ! ಸುಖ ಸಂಸಾರ ಅಂತ್ಯವಾಗಿದ್ದಕ್ಕೆ ಕಾರಣವೇನು?

ಚಿನ್ನದುರೈ ವೆಡ್ಸ್​ ಶ್ವೇತಾ- ಮದುಮಕ್ಕಳನ್ನು ಆಶೀರ್ವದಿಸಲು ನೀರಿನೊಳಕ್ಕೆ ಧುಮುಕಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − ten =
Remember me
