ಜೈಪುರ:ರಾಜಸ್ಥಾನದಲ್ಲಿ ರಾಜಕೀಯ ಮೇಲಾಟ ಮುಂದುವರಿದಿದೆ ಹಾಗೂ ರೆಸಾರ್ಟ್​ ರಾಜಕೀಯ ಶುರುವಾಗಿದೆ. ಸಿಎಂ ಅಶೋಕ್​ ಗೆಹ್ಲೋಟ್​ ತನ್ನ ಬೆಂಬಲಿಗ ಶಾಸಕರೊಂದಿಗೆ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದಾರೆ.
ಈ ನಡುವೆ, ಕಾಂಗ್ರೆಸ್​ ಆಯೋಜಿಸಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ಶಾಸಕರು ಅಶೋಕ್​ ಗೆಹ್ಲೋಟ್​ ನೇತೃತ್ವಕ್ಕೆ ಬೆಂಬಲ ಸೂಚಿಸಿದ್ದಾರೆ. ಇವರೆಲ್ಲರೂ ಸಿಎಂ ಜತೆಗೆ ನಾವಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ;ಕರೊನಾ ನಿರ್ಬಂಧ ಉಲ್ಲಂಘಿಸಿದ 10 ಭಾರತೀಯರ ಗಡಿಪಾರು; ಮತ್ತೆ ಆ ದೇಶಕ್ಕೆ ಕಾಲಿಡುವಂತಿಲ್ಲ
ಸಂಖ್ಯಾಬಲ ಲೆಕ್ಕಾಚಾರ ಶುರುವಾಗುತ್ತಿದ್ದಂತೆ, ಬಂಡಾಯ ನಾಯಕ ಸಚಿನ್​ ಪೈಲಟ್​ ಬಣ ನೇರವಾಗಿ ಸಿಎಂ ಅಶೋಕ್​ ಗೆಹ್ಲೋಟ್​ಗೆ ಸವಾಲು ಹಾಕಿದೆ. ಒಂದು ವೇಳೆ ನಿಮ್ಮ ಬಳಿ ಬಹುಮತ ಸಾಬೀತುಪಡಿಸುವಷ್ಟು ರಾಜ್ಯಪಾಲರ ಬಳಿ ಹೋಗಿ ಅವರ ಎದುರಿನಲ್ಲಿ ಬಹುಮತ ಪ್ರದರ್ಶಿಸಿ ಎಂದು ಸಚಿನ್​ ಪೈಲಟ್​ ಪರ ಶಾಸಕರು ಹೇಳಿದ್ದಾರೆ.
ಪ್ರಜಾಪ್ರಭುತ್ವದ ನಿರ್ಣಯವನ್ನೇ ಧಿಕ್ಕರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಇದು 8 ಕೋಟಿ ರಾಜಸ್ಥಾನೀಯರಿಗೆ ಮಾಡುತ್ತಿರುವ ಅವಮಾನ ಎಂದು ಕಾಂಗ್ರೆಸ್​ ಶಾಸಕಾಂಗ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ 20 ಶಾಸಕರು ಹಾಜರಾಗಿರಲಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ;ಕಡೆಗಣನೆಯಿಂದ ಕೆಂಡವಾದರೆ ಸಚಿನ್​ ಪೈಲಟ್​; ಬಂಡಾಯಕ್ಕೆ ಬುನಾದಿಯಾಗಿದ್ದೇನು?
ಈ ನಡುವೆ, ಸಚಿನ್​ ಪೈಲಟ್​ಗೆ ಬೆಂಬಲ ಸೂಚಿಸಿ ದೆಹಲಿ ಹೊರವಲಯದ ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದ ಕೆಲ ಶಾಸಕರು ಜೈಪುರಕ್ಕೆ ಮರಳಿದ್ದಾರೆ. ಇದು ಪೈಲಟ್​ಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ಹೀಗಿದ್ದರೂ ಅಶೋಕ್​ ಗೆಹ್ಲೋಟ್​ ಬಣಕ್ಕೆ ಬಹುಮತ ಸಾಬೀತುಪಡಿಸುವಷ್ಟು ಸಂಖ್ಯಾಬಲವಿಲ್ಲ ಎಂದೇ ಪೈಲಟ್​ ಬೆಂಬಲಿಗರು ಹೇಳುತ್ತಿದ್ದಾರೆ.
ಪೊಲೀಸರೇ ನನ್ನ ಎನ್​ಕೌಂಟರ್​ ಮಾಡ್ತಾರೆ…! ರಕ್ಷಣೆಗೆ ಸುಪ್ರೀಂಕೋರ್ಟ್​ ಮೊರೆ ಹೋದ ಸಬ್​ ಇನ್​ಸ್ಪೆಕ್ಟರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 4 =
Remember me
