ನವದೆಹಲಿ:ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡದಿರಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವಿದ್ಯುತ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಮುಂಬರುವ ಬೇಸಿಗೆ ತಿಂಗಳುಗಳಲ್ಲಿ ಹೆಚ್ಚಿನ ವಿದ್ಯುತ್ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ವಿವಿಧ ಅಂಶಗಳ ಕುರಿತು ವಿದ್ಯುತ್, ಕಲ್ಲಿದ್ದಲು ಮತ್ತು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳ ಜತೆ ಮಾರ್ಚ್ 7ರಂದು ಕೇಂದ್ರ ವಿದ್ಯುತ್ ಸಚಿವ ಆರ್.ಕೆ. ಸಿಂಗ್ ಅವರು ಪರಿಶೀಲನಾ ಸಭೆ ನಡೆಸಿದರು. ವಿವಿಧ ರಾಜ್ಯಗಳು/ಕೇಂದ್ರಾ ಡಳಿತ ಪ್ರದೇಶಗಳಿಗೆ ಕಲ್ಲಿದ್ದಲು ಹಂಚಿಕೆಗಾಗಿ ನ್ಯಾಯಯುತ ಮತ್ತು ಪಾರದರ್ಶಕ ಕಾರ್ಯ ವಿಧಾನ ರೂಪಿಸಿರು ವುದನ್ನು ಖಚಿತಪಡಿಸಿ ಕೊಳ್ಳುವಂತೆ ಕೇಂದ್ರೀಯ ವಿದ್ಯುತ್ ಪ್ರಾಧಿಕಾರಕ್ಕೆ ಸಚಿವರು ಸೂಚಿಸಿದರು.
ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಂದಾಜಿನ ಪ್ರಕಾರ, ಈ ವರ್ಷದ ಏಪ್ರಿಲ್​ನಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 229 ಗಿಗಾ ವ್ಯಾಟ್ ತಲುಪುವ ನಿರೀಕ್ಷೆ ಇದೆ. ದೇಶದ ದಕ್ಷಿಣ ಭಾಗದಿಂದ ಮುಂಗಾರು ಹಂಗಾಮು ಆರಂಭವಾದಾಗ ಬೇಡಿಕೆ ಕಡಿಮೆಯಾಗುತ್ತದೆ ಮತ್ತು ಅದು ಮುಂದಿನ 3-4 ತಿಂಗಳುಗಳಲ್ಲಿ ಇಡೀ ದೇಶವನ್ನು ಆವರಿಸುತ್ತದೆ. ಈ ವರ್ಷದಲ್ಲೇ ಅತ್ಯಧಿಕ: ವಿದ್ಯುತ್ ಬೇಡಿಕೆಯು ವಾರ್ಷಿಕ ವಾಗಿ ಶೇ. 10ರ ಸಮೀಪದಲ್ಲಿ ಬೆಳೆಯುತ್ತಿದೆ ಎಂದು ಪ್ರಾಧಿ ಕಾರ ತಿಳಿಸಿದೆ. ಒಂದು ಅಂದಾಜಿನ ಪ್ರಕಾರ ಈ ವರ್ಷದ ಏಪ್ರಿಲ್​ನಲ್ಲಿ 1,42,079 ಮೆಗಾ ಯೂನಿಟ್ ವಿದ್ಯುತ್​ಗೆ ಬೇಡಿಕೆ ಉಂಟಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಈ ವರ್ಷದಲ್ಲೇ ಅತ್ಯಧಿಕವಾಗಿದೆ. ವಿದ್ಯುತ್ ಬೇಡಿಕೆಯು ಮೇ ತಿಂಗಳಲ್ಲಿ 1,41,464 ಮೆ. ಯೂನಿಟ್​ಗೆ ಮತ್ತು ನವೆಂಬರ್​ನಲ್ಲಿ 1,17,049 ಮೆ. ಯೂನಿಟ್​ಗೆ ಇಳಿಯಲಿದೆ ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ:ದೈಹಿಕ ಸಂಬಂಧ ಬೆಳೆಸುವುದಾಗಿ ಮನೆಗೆ ಕರೆದು ಹಣ ಸುಲಿಗೆ: ಇಬ್ಬರು ಮಹಿಳೆಯರು ಸೇರಿ 6 ಮಂದಿ ಸೆರೆ
ಮುಂದೇನು?ಬೇಸಿಗೆಯಲ್ಲಿ ವಿದ್ಯುತ್ ಕಡಿತ ಮಾಡದಿರಲು ಅಧಿಕಾರಿಗಳು ಹರಸಾಹಸ ಮಾಡುತ್ತಿದ್ದಾರೆ. ಹೊಸ ಕಲ್ಲಿದ್ದಲು ಮತ್ತು ಜಲವಿದ್ಯುತ್ ಸಾಮರ್ಥ್ಯವನ್ನು ಸಂಗ್ರಹಿಸಲು ನಿರ್ಲಕ್ಷ್ಯ ತೋರಿದ ಪರಿಣಾಮ ಲೋಡ್​ಶೆಡ್ಡಿಂಗ್ ಆಗದಂತೆ ವಿದ್ಯುತ್ ಪೂರೈಸುವುದು ದೊಡ್ಡ ಸವಾಲಿನ ಕೆಲಸವಾಗಿದೆ.
ಲೋಡ್ ಶೆಡ್ಡಿಂಗ್ ಏಕೆ?ವಿದ್ಯುತ್ ಪ್ರವಾಹವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವುದನ್ನು ಲೋಡ್ ಶೆಡ್ಡಿಂಗ್ ಎಂದು ಕರೆಯಲಾಗುತ್ತದೆ. ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆ ನಡುವೆ ಅಂತರ ಉಂಟಾದಾಗ ಅದನ್ನು ಭರ್ತಿ ಮಾಡಲು ಲೋಡ್ ಶೆಡ್ಡಿಂಗ್ ಕೈಗೊಳ್ಳಲಾಗುವುದು. ಅಂದರೆ ಒಂದು ಕಡೆ ಇರುವ ವಿದ್ಯುತನ್ನು ಮತ್ತೊಂದು ಕಡೆಗೆ ವರ್ಗಾಯಿಸಲಾಗುವುದು.
ಬೇಡಿಕೆ ಹೆಚ್ಚಳ ಏಕೆ?ದೇಶದ ವಾರ್ಷಿಕ ವಿದ್ಯುತ್ ಬಳಕೆಯಲ್ಲಿ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳು ಅರ್ಧಕ್ಕಿಂತ ಹೆಚ್ಚು ಪಾಲು ಹೊಂದಿವೆ. ಗೃಹ ಬಳಕೆಯ ವಿದ್ಯುತ್ ಬೇಡಿಕೆಯು ನಾಲ್ಕನೇ ಸ್ಥಾನದಲ್ಲಿದ್ದರೆ, ವ್ಯವಸ್ಥಾಯವು ಆರನೇ ಸ್ಥಾನ ಹೊಂದಿದೆ. 2022ರ ಮೊದಲಾರ್ಧದಲ್ಲಿ ಬಿಸಿ ಗಾಳಿ ಮತ್ತು ಕೋವಿಡ್ ನಿರ್ಬಂಧ ನಿಯಮಗಳು, ದ್ವಿತೀಯಾರ್ಧದಲ್ಲಿ ಅನಿಯಮಿತ ಹವಾಮಾನ ಮತ್ತು ಕೃಷಿ ಚಟುವಟಿಕೆಗಳು, ಆಂಧ್ರಪ್ರದೇಶದಲ್ಲಿನ ಉದ್ಯಮಗಳು, ಬೆಂಗಳೂರಿನಲ್ಲಿ ಟೆಕ್ ಉದ್ಯೋಗಿಗಳು ಕಚೇರಿಗೆ ಮರಳುತ್ತಿರುವುದು ವಿದ್ಯುತ್ ಬಳಕೆಯನ್ನು ಹೆಚ್ಚಿಸಿದೆ. ಫುಟ್ಬಾಲ್ ಕ್ರೇಜ್ ಹೊಂದಿರುವ ಕೇರಳದಲ್ಲಿ ವಿಶ್ವಕಪ್ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ವಿದ್ಯುತ್ ಗರಿಷ್ಠ ಬೇಡಿಕೆಯಲ್ಲಿ ಶೇ. 4.1 ಹೆಚ್ಚಳಕ್ಕೆ ಸಂಭಾವ್ಯ ಕೊಡುಗೆ ನೀಡಿದೆ. ಪಂಜಾಬ್​ನಲ್ಲಿ ಕೆಲವು ಗ್ರಾಹಕರಿಗೆ ಉಚಿತ ವಿದ್ಯುತ್ ಒದಗಿಸುವ ನೀತಿ, ರಾಜಸ್ಥಾನದಲ್ಲಿ ಕೃಷಿಕರಿಗೆ ಹಲವು ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಹೆಚ್ಚಿಸುವ ನಿರ್ಧಾರವು ನವೆಂಬರ್​ನಲ್ಲಿ ಶೇ. 22 ಮತ್ತು ಡಿಸೆಂಬರ್​ನಲ್ಲಿ ಶೇ. 15 ಹೆಚ್ಚಳಕ್ಕೆ ಕಾರಣವಾಯಿತು.
ಡಿಮಾಂಡ್ ಎಲ್ಲಿಂದ ?2022ನೇ ವರ್ಷದಲ್ಲಿ ರಾಜಸ್ಥಾನ, ಕೈಗಾರಿಕೆಗಳು ಹೆಚ್ಚಿರುವ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ವಿದ್ಯುತ್ ಬೇಡಿಕೆಯು ಹೆಚ್ಚಾಗಿತ್ತು. ವ್ಯಾಪಕ ಗಣಿಗಾರಿಕೆಗೆ ಹೆಸರುವಾಸಿಯಾದ ಛತ್ತೀಸ್​ಗಢದಲ್ಲಿ 2022ರಲ್ಲಿ ಮಾನ್ಸೂನ್ ಕೊನೆಗೊಂಡ ನಂತರದ ಐದು ತಿಂಗಳಲ್ಲಿ ವಿದ್ಯುತ್ ಬೇಡಿಕೆಯು ಶೇ. 16.6, ಅದೇ ಅವಧಿಯಲ್ಲಿ ರಾಜಸ್ಥಾನದಲ್ಲಿ ಶೇ. 15.1ರಷ್ಟು ಜಿಗಿತ ಉಂಟಾಗಿತ್ತು. ಪಂಜಾಬ್​ನಲ್ಲಿ , ಮಧ್ಯಪ್ರದೇಶ, ತೆಲಂಗಾಣ, ಬಿಹಾರದಲ್ಲಿ ವಿದ್ಯುತ್​ಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು.
ಇದನ್ನೂ ಓದಿ:ಶಿವಾಜಿನಗರ ಕ್ಷೇತ್ರದಲ್ಲಿ ಯಾವುದೇ ಹೆಸರು ಕೈಬಿಟ್ಟಿಲ್ಲ: ಬಿಬಿಎಂಪಿ ಸ್ಪಷ್ಟನೆ
ಬಹುಮುಖಿ ಕಾರ್ಯತಂತ್ರ* ಮಾರ್ಚ್ 16 ರಿಂದ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವಂತೆ ಎಲ್ಲ ಸ್ಥಾವರಗಳಿಗೆ ಈಗಾಗಲೇ ಸೆಕ್ಷನ್-11 (ವಿದ್ಯುತ್ ಕಾಯ್ದೆ) ಅಡಿಯಲ್ಲಿ ನಿರ್ದೇಶನಗಳನ್ನು ನೀಡಿದೆ.
* ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಲಭ್ಯಕ್ಕೆ ಕ್ರಮ.
* ಸಿಐಎಲ್ , ಜಿಎಸ್​ಎಸ್ ಮತ್ತು ಕ್ಯಾಪ್ಟಿವ್ ಬ್ಲಾಕ್​ಗಳ ವಿವಿಧ ಅಂಗಸಂಸ್ಥೆಗಳಿಗೆ 418 ರೇಕ್​ಗಳನ್ನು ಒದಗಿಸಲು ರೈಲ್ವೆ ಸಚಿವಾಲಯ ಸಮ್ಮತಿ.
* ಗರಿಷ್ಠ ಬೇಡಿಕೆ ಪೂರೈಸಲು ಅನಿಲ ಆಧಾರಿತ ಶಕ್ತಿ ಬಳಕೆಗೆ ಸೂಚನೆ
* ಏಪ್ರಿಲ್ -ಮೇ ತಿಂಗಳ ಅವಧಿಯಲ್ಲಿ 5 ಸಾವಿರ ಮೆಗಾವ್ಯಾಟ್ ಆಧಾರಿತ ವಿದ್ಯುತ್ ಕೇಂದ್ರಗಳನ್ನು ಚಲಾಯಿಸುವಂತೆ ಎನ್​ಟಿಪಿಸಿಗೆ ನಿರ್ದೇಶನ.
* ಅಗತ್ಯ ಅನಿಲವನ್ನು ಪೂರೈಕೆ ಮಾಡುವುದಾಗಿ ಗೇಲ್ (ಜಿಎಐಎಲ್)ನಿಂದ ಭರವಸೆ.
* ವಿದ್ಯುತ್​ನ ಉತ್ತಮ ಲಭ್ಯತೆಗಾಗಿ ಪ್ರಸ್ತುತ ತಿಂಗಳಲ್ಲಿ ನೀರಿನ ಬಳಕೆಯನ್ನು ಅತ್ಯುತ್ತಮವಾಗಿಸಲು ಆರ್​ಎಲ್​ಡಿಸಿ/ಎಸ್​ಎಲ್​ಡಿಸಿ (ಪ್ರಾದೇಶಿಕ /ರಾಜ್ಯ ಲೋಡ್ ಡಿಸ್ಪಾಚ್ ಕೇಂದ್ರಗಳು) ಗಳೊಂದಿಗೆ ಸಮಾಲೋಚಿಸಿ ಕಾರ್ಯ ನಿರ್ವಹಿಸಲು ಎಲ್ಲ ಜಲವಿದ್ಯುತ್ ಸ್ಥಾವರಗಳಿಗೆ ಸೂಚನೆ
* ಹೊಸ ಕಲ್ಲಿದ್ದಲು ಆಧಾರಿತ ಸ್ಥಾವರಗಳ ಮೂಲಕ 2,920 ಮೆಗಾವ್ಯಾಟ್​ನ ಹೆಚ್ಚುವರಿ ಸಾಮರ್ಥ್ಯವು ಈ ತಿಂಗಳ ಅಂತ್ಯದ ವೇಳೆಗೆ ಕಾರ್ಯಾರಂಭ
* ಸಚಿವಾಲಯದ ನಿರ್ದೇಶನದ ಮೇರೆಗೆ ಬರೌನಿಯಲ್ಲಿ ಎರಡು ಘಟಕಗಳು (2*110ಮೆಗಾವ್ಯಾಟ್) ಬಿಕ್ಕಟ್ಟಿನ ಅವಧಿಯಲ್ಲಿ ಕಾರ್ಯಪ್ರವೃತ್ತ
ಕೈತುಂಬಾ ಸಂಬಳವಿದ್ರೂ ಮಾಡಬಾರದನ್ನು ಮಾಡಿ ಸಿಕ್ಕಿಬಿದ್ದ ಗ್ಲಾಮರಸ್​ ಕೃಷಿ ಅಧಿಕಾರಿ! ಏನ್​ ಕೇಳಿದ್ರು ಬಾಯ್ಬಿಡ್ತಿಲ್ಲ…

ಬಾಲಿವುಡ್​ನಲ್ಲೂ ‘ಕಬ್ಜ’ ಹವಾ; ಬುಲೆಟ್​ ಸವಾರಿ ಮಾಡಿದ ಉಪೇಂದ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
