ವಿಜಯವಾಡ:ವಿರೋಧ ಪಕ್ಷದ ನಾಯಕರನ್ನು ಸದಾ ಟೀಕಿಸುವ ಮೂಲಕ ಸುದ್ದಿಯಾಗುವ ನಟಿ, ರಾಜಕಾರಣಿ ರೋಜಾ ಸದ್ಯ ಆಂಧ್ರ ಪ್ರದೇಶದಲ್ಲಿ ನಡೆಯಲಿರುವ ಮುನ್ಸಿಪಾಲ್​ ಚುನಾವಣೆಯ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ನಗರಿ ಕ್ಷೇತ್ರದ ಶಾಸಕಿ ಹಾಗೂ ಆಂಧ್ರಪ್ರದೇಶ ಕೈಗಾರಿಕಾ ಮೂಲಸೌಕರ್ಯ ನಿಗಮ ಮಂಡಳಿಯ ಅಧ್ಯಕ್ಷೆಯು ಆಗಿರುವ ರೋಜಾ ಭಾನುವಾರ ತಮ್ಮ ನಗರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ನಾಯಕರು ಮತ್ತು ಪುತ್ತೂರ್​ ಮುನ್ಸಿಪಾಲಿಟಿ ನಾಯಕರ ಜತೆ ಓಡಾಡಿ ತಮ್ಮ ಬೆಂಬಲಿಗರಿಗೆ ಮತ ಹಾಕುವಂತೆ ಮನವಿ ಮಾಡಿದರು.
ಇದನ್ನೂ ಓದಿರಿ:ಏಪ್ರಿಲ್ 9 ರಿಂದ 14ನೇ ಐಪಿಎಲ್,  ಬೆಂಗಳೂರು ಸೇರಿದಂತೆ 6 ನಗರಗಳಲ್ಲಿ ಲೀಗ್
ರೋಜಾ ಅವರ ಭೇಟಿ ವೇಳೆಯೇ ಚಿತ್ತೂರ್​ ಜಿಲ್ಲೆಯ ನಿಂದ್ರಾದಲ್ಲಿರುವ ಶಾಲೆಯಲ್ಲಿ ಕಬಡ್ಡಿ ಟೂರ್ನಮೆಂಟ್​ ಆಯೋಜಿಸಲಾಗಿತ್ತು. ಟೂರ್ನಮೆಂಟ್​ ಬಳಿ ಹೋದ ರೋಜಾ, ಆಟಗಾರರನ್ನು ಹುರಿದುಂಬಿಸಲು ಸೀರೆ ಎತ್ತಿ ಸೊಂಟಕ್ಕೆ ಕಟ್ಟಿಕೊಂಡು ಕಬಡ್ಡಿ ಕೋರ್ಟ್​ಗೆ ಇಳಿದರು.
ಯುವಕರೊಂದಿಗೆ ಕಬಡ್ಡಿ ಅಖಾಡಕ್ಕಿಳಿದ ನಟಿ-ರಾಜಕಾರಣಿ ರೋಜಾ!#ActressRoja#Kabaddi#AndhraPradesh#Youthspic.twitter.com/wInrd4KTl4
— Vijayavani (@VVani4U)March 8, 2021

ಕಬಡ್ಡಿ… ಕಬಡ್ಡಿ ಎನ್ನುತ್ತಾ ಕೆಲಕಾಲ ಆಟಗಾರರ ಜತೆ ಆಡುವ ಮೂಲಕ ಅವರನ್ನು ಹುರಿದುಂಬಿಸಿದರು. ರೋಜಾ ಮತ್ತೊಮ್ಮೆ ಥಿರುವೆಲಾಂಗಾಡು ತಂಡದ ಜತೆ ಆಡಿದರು.(ಏಜೆನ್ಸೀಸ್​)
ಬಿಗ್​ಬಾಸ್​ನಿಂದ ಧನುಶ್ರೀ ಔಟ್​: ಟಿಕ್​ಟಾಕ್​ ಬೆಡಗಿಯ ಎಲಿಮಿನೇಷನ್​ಗೆ ಕಾರಣ ಇದೆನಾ?

ಹಳ್ಳಿ ಪಕ್ಕದ ನಾಲೆಯಲ್ಲಿ ಪತ್ತೆಯಾಯ್ತು ಭಾರೀ ಗಾತ್ರದ ತಿಮಿಂಗಿಲ ಶಾರ್ಕ್​ ಕಳೇಬರ!

ಹೆಣ್ಮಕ್ಳೇ ಸ್ಟ್ರಾಂಗು ಗುರು |ಮೊದಲು ಮನೆಯಲ್ಲಿನ ತಾಯಿಯನ್ನು ಗೌರವಿಸಿ: ನಿಮಿಕಾ ರತ್ನಾಕರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
