ಬೆಂಗಳೂರು:ಪರಿಶಿಷ್ಟ ಪಂಗಡಕ್ಕೆ (ಎಸ್​ಟಿ) ತಳವಾರ, ಪರಿವಾರ, ಸಿದ್ಧಿ ಜನಾಂಗವನ್ನು ಸೇರಿಸಿ ಹೊಸ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿದೆ.
ಈ ಪಂಗಡಗಳನ್ನು ಎಸ್​ಟಿಗೆ ಸೇರಿಸಬೇಕೆನ್ನುವ ಬಹು ವರ್ಷಗಳ ಆಸೆ ಈಗ ಇಡೇರಿದೆ.
ಈ ಕುರಿತು ಕರ್ನಾಟಕ ಸರ್ಕಾರದ ಗೆಜೆಟ್ ಅಧಿಸೂಚನೆ ಜಾರಿಯಾಗಿದ್ದು, ಪರಿಶಿಷ್ಟ ಪಂಗಡಗಳ ಸಂವಿಧಾನ ತಿದ್ದುಪಡಿ ಕಾಯ್ದೆ 2020ರ ರ ಅನ್ವಯ ಪರಿಷ್ಕೃತ ಪಟ್ಟಿಯಲ್ಲಿ ತಳವಾರ ಮತ್ತು ಪರಿವಾರ ಹಾಗೂ ಸಿದ್ಧಿ ಜನಾಂಗವನ್ನು ಪ್ರತ್ಯೇಕವಾಗಿ ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಲಾಗಿದೆ ಎಂದು ನಮೂದಿಸಲಾಗಿದೆ.
ಇದನ್ನೂ ಓದಿ:ಕರೊನಾದ ಮತ್ತೊಂದು ತಲೆನೋವು: ಲಕ್ಷಣಗಳೇ ಇಲ್ಲದ ಶೇ.28 ಮಂದಿಗೆ ಸೋಂಕು!
ನಾಯ್ಕಡ, ನಾಯಕ (ಪರಿವಾರ ಮತ್ತು ತಳವಾರ ಸೇರಿ) ಹಾಗೂ ಸಿದ್ದಿ (ಉತ್ತರ ಕನ್ನಡ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆ) ಎಸ್​ಟಿಗೆ ಸೇರಿಸಲಾಗಿದೆ ಅದರಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯ ಪ್ರಾಧಿಕಾರಿಗಳ ನಿಯಮಕ್ಕೆ ಒಳಪಟ್ಟು ಅರ್ಹರಿಗೆ ಜಾತಿ ಪ್ರಮಾಣ ಪತ್ರ ನೀಡಲಾಗುವುದು ಎಂದು ಸರ್ಕಾರದ ಅಧಿಸೂಚನೆ ಹೇಳಿದೆ.
ಸರ್ಕಾರದ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಹಿಂದುಳಿದ ಈ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ ಪ್ರಧಾನಿ ನರೇಂದ್ರಮೋದಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಸೋಂಕಿತರ ಮೇಲೆ ಪಾಕ್​ ಗೂಢಚರ ಸಂಸ್ಥೆ ಕಣ್ಣು! ಶುರುವಾಯ್ತು ಹೀಗೊಂದು ಪ್ರಯೋಗ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೂಡ ಧನ್ಯವಾದ ಸಲ್ಲಿಸಿದ್ದಾರೆ. “ಈ ಹಿಂದೆ ನಮ್ಮ ಸರ್ಕಾರ ಈ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಿ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿತ್ತು. ಸಹಕರಿಸಿದ ಎಲ್ಲರಿಗೂ ಧನ್ಯವಾದ’ ಎಂದು ಸಿದ್ದರಾಮಯ್ಯ ಟ್ವೀಟ್​ನಲ್ಲಿ ಹೇಳಿದ್ದಾರೆ.
ಪರಿವಾರ, ತಳವಾರ ಹಾಗೂ ಸಿದ್ದಿ ಸಮುದಾಯಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟ@PMOIndiaಶ್ರೀ@narendramodiಜಿ, ಈ ಸೌಲಭ್ಯ ಜಾರಿಯಾಗುವಂತೆ ಕ್ರಮ ಕೈಗೊಂಡ@CMofKarnatakaಶ್ರೀ@BSYBJPಮತ್ತು ಉಪ ಮುಖ್ಯಮಂತ್ರಿಗಳಾದ ಶ್ರೀ@GovindKarjolಅವರಿಗೆ ಈ ಸಮುದಾಯಗಳ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು.pic.twitter.com/1iK0BcCNlB
— B Sriramulu (@sriramulubjp)May 31, 2020

ಪರಿವಾರ,ತಳವಾರ, ಸಿದ್ದಿ ಸಮುದಾಯಗಳನ್ನು ವಿಳಂಬವಾಗಿಯಾದರೂ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಗೆಜೆಟ್ ಆದೇಶ ಹೊರಡಿಸಿರುವ@CMofKarnatakaಅವರಿಗೆ ಧನ್ಯವಾದಗಳು.
ಹಿಂದೆ ನಮ್ಮ ಸರ್ಕಾರ ಈ ಬಗ್ಗೆ ಸಂಪುಟದಲ್ಲಿ ತೀರ್ಮಾನಿಸಿ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿತ್ತು.ಸಹಕರಿಸಿದ ಎಲ್ಲರಿಗೂ ವಂದನೆಗಳು!pic.twitter.com/oeAxafir8E
— Siddaramaiah (@siddaramaiah)May 31, 2020

ಪಾಲಕರನ್ನು ಕರೆದೊಯ್ದರೂ ಶರಣಾಗದ ಉಗ್ರರನ್ನು ಹೊಡೆದುರುಳಿಸಿದ ಸೇನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:10 + fourteen =
Remember me
