ಬೀಡ್​:ಕಠಿಣ ಪರಿಶ್ರಮ ಹಾಗೂ ಸಾಧಿಸುವ ಛಲ ಒಂದಿದ್ದರೆ ಏನನ್ನು ಬೇಕಾದರೂ ಜಯಿಸಬಹುದು ಎಂಬುದಕ್ಕೆ ನಮ್ಮ ಕಣ್ಣ ಮುಂದೆ ಹಲವು ನಿದರ್ಶನಗಳಿವೆ. ಈ ಮಾತನ್ನು ಯುವಕನೋರ್ವ ಅಕ್ಷರಶಃ ನಿಜ ಎಂದು ತೋರಿಸಿಕೊಟ್ಟಿದ್ದು, ಈತನ ಸಾಧನೆಗೆ ಮೆಚಚಿ ಇಡೀ ಊರಿಗೆ ಊರೇ ಸಂಭ್ರಮಿಸಿರುವ ಘಟನೆ ಮಹಾರಾಷ್ಟ್ರದ ಬೀಡ್​ ಜಿಲ್ಲೆಯ ಪರಲಿ ತಾಲ್ಲೂಕಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.
ಕೃಷ್ಣ ನಾಮ್​ದೇವ್ ಮುಂಡೆ ಎಂಬ ಹೆಸರಿನ ವ್ಯಕ್ತಿಯು 2018ರಲ್ಲಿ 10ನೇ ತರಗತಿ ಅನುತ್ತೀರ್ಣರಾಗಿದ್ದ. ಯುವಕ ಪ್ರತಿ ಬಾರಿಯೂ ಎಸ್​ಎಸ್​ಎಲ್​ಸಿ ಬೋರ್ಡ್​ ಪರೀಕ್ಷೆ ಬರೆದಾಗಲೂ ಅನುತ್ತೀರ್ಣನಾಗುತ್ತಿದ್ದ. ತಾಳ್ಮೆ ಕಳೆದುಕೊಳ್ಳದೆ, ಪರೀಕ್ಷೆಯಲ್ಲಿ ಪಾಸ್‌ ಆಗೇ ಆಗುತ್ತೇನೆ ಎಂದು ಛಲ ಬಿಡದೆ ಸತತವಾಗಿ ಪರೀಕ್ಷೆ ಬರೆದು ತನ್ನ  ಹನ್ನೊಂದನೇ ಪ್ರಯತ್ನದಲ್ಲಿ 10 ನೇ ತರಗತಿ ಪರೀಕ್ಷೆಯನ್ನು ಪಾಸ್​ ಮಾಡಿದ್ದಾನೆ. ಈತ ಪರಲಿ ತಾಲ್ಲೂಕಿನ ರತ್ನೇಶ್ವರ ಶಾಲೆಯ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
పది సార్లు రాసిన తర్వాత పదో తరగతి పాస్ అయిన యువకుడు.. బ్యాండు మేళంతో ఊరేగించిన గ్రామస్థులుమహారాష్ట్ర – బీడ్‌కు చెందిన కృష్ణ నామ్ దేవ్ ముండే 2018 నుండి 10 సార్లు రాసిన తర్వాత.. తాజాగా టెన్త్ పాసయ్యాడు.దీంతో గ్రామస్థులందరూ బ్యాండు మేళంతో అతడిని ఊరేగించి వేడుక చేశారు.pic.twitter.com/rDZ5AvMlbp
ಇದನ್ನೂ ಓದಿ:ಐಸಿಸಿ ಭಾರತದ ವಿಚಾರದಲ್ಲಿ ಉದ್ದೇಶಪೂರ್ವಕವಾಗಿ ಈ ಕೆಲಸ ಮಾಡುತ್ತದೆ; ಪಾಕ್​ ಮಾಜಿ ಆಟಗಾರನ ಆರೋಪ
ಈತ ಪ್ರತಿ ಬಾರಿ ಪರೀಕ್ಷೆ ಬರೆದಾಗಲೂ ಫೇಲ್​ ಆಗುತ್ತಿದ್ದ. 10 ನೇ ಬಾರಿ ಬರೆದ ಪರೀಕ್ಷೆಯಲ್ಲಿ ಆತ ಇತಿಹಾಸ ವಿಷಯದಲ್ಲಿ ಫೇಲ್‌ ಆಗಿದ್ದ. ಆದರೆ 11 ನೇ ಪ್ರಯತ್ನದಲ್ಲಿ ಕೃಷ್ಣ ಎಲ್ಲಾ ವಿಷಯಗಳಲ್ಲೂ ಉತ್ತಮ ಅಂಗಗಳೊಂದಿಗೆ ತೇರ್ಗಡೆಯಾಗಿದ್ದಾನೆ. ಕೃಷ್ಣನ ಈ ಯಶಸ್ಸನ್ನು ಆತನ ಕುಟುಂಬ ಮಾತ್ರವಲ್ಲದೇ ಇಡೀ ಗ್ರಾಮವೇ ಸಂಭ್ರಮಿಸಿದೆ. ಆತನ ತಂದೆ ಹಾಗೂ ಗ್ರಾಮಸ್ಥರು ಡೋಲು ಬಾರಿಸುತ್ತಾ ಕೃಷ್ಣನನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುವ ಮೂಲಕ ಖುಷಿಯನ್ನು ಸಂಭ್ರಮಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಹಲವರು ಯುವಕನ ಪರಿಶ್ರಮಕ್ಕೆ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಛಲ ಒಂದಿದ್ದರೆ ಸಾಕು ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಈತನೇ ಜೀವಂತ ಉದಾಹರಣೆ ಎಂದು ಕಮೆಂಟ್​ ಮಾಡಿ ಶ್ಲಾಘಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − sixteen =
Remember me
